ಮೀನುಗಾರಿಕೆ ಉಚಿತ ಕಿಟ್ ಮತ್ತು ಲೈಫ್ ಜಾಕೇಟುಗಳ ವಿತರಣೆ
ಸಪ್ತಸಾಗರ ವಾರ್ತೆ,ವಿಜಯಪುರ, ಏ. 20:ಬಬಲೇಶ್ವರ ಮತಕ್ಷೇತ್ರದ ನಾನಾ ಫಲಾನುಭವಿಗಳಿಗೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಸೋಮವಾರ ಮೀನುಗಾರಿಕೆ ಉಚಿತ ಕಿಟ್ ಮತ್ತು ಲೈಫ್ ಜಾಕೇಟುಗಳನ್ನು ವಿತರಿಸಿದರು.ರಾಜ್ಯ ವಲಯ ಮತ್ತು ಜಿಲ್ಲಾ ಪಂಚಾಯಿತಿ ಯೋಜನೆಯಡಿ ಒಟ್ಟು 61 ಜನ ಫಲಾನುಭವಿಗಳು ಆಯ್ಕೆಯಾಗಿದ್ದು, ಅವರಲ್ಲಿ 11 ಫಲಾನುಭವಿಗಳಿಗೆ ಸಚಿವರು ಸಾಂಕೇತಿಕವಾಗಿ ಕಿಟ್ ಮತ್ತು ಲೈಫ್ ಜಾಕೇಟ್ ವಿತರಿಸಿದರು. ಈ ಯೋಜನೆಯಡಿ ಬಬಲೇಶ್ವರ ತಾಲೂಕಿನ ಕೃಷ್ಣಾ ನದಿಯಲ್ಲಿ ಮೀನುಗಾರಿಕೆ ನಡೆಸುವ ಜೈನಾಪುರ,…


