ಸಂವಿಧಾನ, ಡಾ. ಅಂಬೇಡ್ಕರ್ ಹಾಗೂ ರಾಷ್ಟ್ರಧ್ವಜಕ್ಕೆ ಅಪಮಾನ:ತಕ್ಷಣ ಕಠಿಣ ಕಾನೂನು ಕ್ರಮಕ್ಕೆ ಡಿ.ವಿ.ಪಿ ಆಗ್ರಹ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 27 :ಇಲ್ಲಿನ ಜಲನಗರದ ಬಿ.ಡಿ.ಎ ಖಾಲಿ ಜಾಗದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರತ್ಥಾನ ಹಿಂದೂ ಸಮ್ಮೇಳನದಲ್ಲಿ ಆರ್. ಎಸ್. ಎಸ್. ಮುಖಂಡನೊಬ್ಬ “ಈ ದೇಶ ಎಂದರೆ ಸಂವಿಧಾನವಲ್ಲ, ರಾಷ್ಟ್ರಧ್ವಜವಲ್ಲ, ಕೇವಲ ಅಂಬೇಡ್ಕರ್ ಅಲ್ಲ” ಎಂಬ ಅತಿರೇಕದ, ಅಪಮಾನಕಾರಕ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯವಾಗಿದೆ. ಈ ಹೇಳಿಕೆ ದೇಶದ ಸಂವಿಧಾನ, ರಾಷ್ಟ್ರಧ್ವಜ ಹಾಗೂ ಈ ದೇಶದ ಮಹಾನ್ ನಾಯಕ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ನೇರವಾಗಿ ಅವಮಾನ ಮಾಡುವಂತಿದ್ದು, ದೇಶದ ಏಕತೆ-ಅಖಂಡತೆಗೆ ಧಕ್ಕೆ ತರುವ ದೇಶದ್ರೋಹಿ…

Read More

ಸಿದ್ದಾಪುರ ಅರಕೇರಿ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 27:ತಿಕೋಟಾ ತಾಲೂಕಿನ ಸಿದ್ದಾಪುರ ಅರಕೇರಿ ಗ್ರಾಮದ ಪ್ರೌಢಶಾಲೆಯಲ್ಲಿ ಸೋಮವಾರ ಗಣರಾಜ್ಯೋತ್ಸವ ಆಚರಿಸಲಾಯಿತು.ಮಲ್ಲಿಕಾರ್ಜುನ ಸಕ್ರಿ ಧ್ವಜಾರೋಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ವಿಠ್ಠಲ್ ಸಿಂಗ್ ರಜಪೂತ್ ಮಾತನಾಡಿ, ಬಲಿಷ್ಠ ಭಾರತ ನಿರ್ಮಾಣಕ್ಕೆ ನಮ್ಮ ಸಂವಿಧಾನ ಜಾತ್ಯತೀತ ವ್ಯವಸ್ಥೆಯನ್ನು ಹೊಂದಿದೆ. ನಾವೆಲ್ಲರೂ ಸಹ ಬಾಳ್ವೆ ಸಹಕಾರದಿಂದ ಅಭಿವೃದ್ಧಿಗೆ ಕೈಜೋಡಿಸಬೇಕು. ಆಗಲೇ ಪ್ರಜಾಪ್ರಭುತ್ವಕ್ಕೆ ಒಂದು ಅರ್ಥ ಬರುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತ ಎಂದೆಂದಿಗೂ ಬಲಿಷ್ಠವಾಗಿರಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಅಶೋಕ ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ಎಸ್.ಎಸ್….

Read More

ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ಗಣರಾಜ್ಯೋತ್ಸವ ಸಂಭ್ರಮ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 27 :ನಗರದ ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧೀನದಲ್ಲಿ ನಡೆಯುವ ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ 77 ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.ಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ ಹಾಗೂ ಶಾಲೆಯ ನಾಮಿನಿ ಚೇರ್ಮನ್ ಎಸ್.ಎಚ್. ನಾಡಗೌಡ ಅವರು ಹಾಗೂ ಸಂಸ್ಥೆಯ ಆಡಳಿತಾದಿಕಾರಿ ಎಚ್.ವೆಂಕಟೇಶ ಹಾಗೂ ಶಾಲೆಯ ಪ್ರಾಂಶುಪಾಲ ವಿಜಯಲಕ್ಷ್ಮೀ ಪಟ್ಟೇದ ಅವರು ಹಾಗೂ ಉಪ ಪ್ರಾಚಾರ್ಯ.ದ್ವಜಾ ರೋಹಣ ಮಾಡಿ ನಂತರ ವಿವಿಧ ಕಾರ್ಯಕ್ರಮಕ್ಕೆ ಚಾಲನೆ ನೀಡಿದರುಶ್ರೀ ಸಿದ್ದೇಶ್ವರ ಸಂಸ್ಥೆಯ ಚೇರ್ಮನ್ ಬಸಯ್ಯ ಹಿರೇಮಠ…

Read More

ಬಾಂಗ್ಲಾ ನಿವಾಸಿಗಳನ್ನು ಗಡಿಪಾರು ಮಾಡಿ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಯತ್ನಾಳ ಟ್ವೀಟ್

ಸಪ್ತಸಾಗರ ವಾರ್ತೆ, ವಿಜಯಪುರ, ಜ. 27:ದೇಶದ ಐಕ್ಯತೆಗೆ, ಒಗ್ಗಟ್ಟಿಗೆ ಹಾಗೂ ಸಮಗ್ರತೆಗೆ ಬಾಂಗ್ಲಾ ನಿವಾಸಿಗಳನ್ನು ಕೂಡಲೇ ಗಡಿಪಾರುಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಲು ಕೇಂದ್ರ ಗೃಹ ಸಚಿವ ಅಮಿಶ್ ಶಾ ಅವರಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪತ್ರ ಬರೆದಿದ್ದಾರೆ.ಕಾಂಗ್ರೆಸ್ ಸರ್ಕಾರದ ವೈಫಲ್ಯದಿಂದ ಕರ್ನಾಟಕ ಬಾಂಗ್ಲಾ ನಿವಾಸಿಗಳ ತವರೂರಾಗಿದೆ. ರಾಜ್ಯದೆಲ್ಲೆಡೆ ಬಾಂಗ್ಲಾ ನಿವಾಸಿಗಳು ಅಕ್ರಮವಾಗಿ ನೆಲೆಸಿದ್ದಲ್ಲದೆ, ಆಧಾರ್ ಕಾರ್ಡ್ ಸೇರಿದಂತೆ ಅನೇಕ ಗುರುತಿನ ಚೀಟಿಯನ್ನು ಪಡೆದು ಸ್ಥಳೀಯ ದೇಶವಾಸಿಗಳಿಗೆ ಸಲ್ಲಬೇಕಾಗಿದ್ದ ಸಂಪನ್ಮೂಲಗಳನ್ನು ಬಳಸುತ್ತಿರುವುದು ದುರದೃಷ್ಟಕರ. ಇಲ್ಲಿ…

Read More

ಬೆಂಗಳೂರಿನಲ್ಲಿ ಜ. 29ರಿಂದ ಫೆ. 1ರ ವರೆಗೆ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನಕ್ಲೇವ್- 2026

ಸಪ್ತಸಾಗರ ವಾರ್ತೆ, ವಿಜಯಪುರ, ಜ. 27:ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ(iLYF) ವತಿಯಿಂದ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನಕ್ಲೇವ್- 2026 ಜನೇವರಿ 29 ರಿಂದ ಫೆಬ್ರವರಿ 1ರ ವರೆಗೆ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ವಿಜಯಪುರ ಜಿಲ್ಲಾ ಸಣ್ಣ ಕೈಗಾರಿಕೆ ಉದ್ದಿಮೆದಾರರ ಸಂಘದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ ಮತ್ತು ಉದ್ಯಮಿ‌ ಶಾಂತೇಶ ಕಳಸಗೊಂಡ ತಿಳಿಸಿದ್ದಾರೆ.ಈ ಕುರಿತು ಜಂಟಿ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿರುವ ವೈಟ್ ಪೆಟೆಲ್ಸ್ ನಲ್ಲಿ…

Read More

ವೀರರಾಣಿ ಅಬ್ಬಕ್ಕ, ರಾಣಿ ಚೆನ್ನಮ್ಮ ಪ್ರದರ್ಶಿನಿ ಉದ್ಘಾಟನೆ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 25:ವಿದ್ಯಾರ್ಥಿಗಳಿಗೆ ಸಮಸ್ಯೆ ಬಂದಾಗ ಹಲವಾರು ಕಡೆ ಎಬಿವಿಪಿ ಹೋರಾಟಗಳನ್ನು ನಿರ್ಮಿಸಿ ಪರಿಹಾರ ಹುಡುಕಿಕೊಟ್ಟಿದೆ ಎಂದು ಸಿದ್ದೇಶ್ವರ ಆಶ್ರಮದ ಪರಮಪೂಜ್ಯ ಬಸವಲಿಂಗ ಮಹಾಸ್ವಾಮೀಜಿಗಳು ಪ್ರಶಂಸಿಸಿದರು.ಎಬಿವಿಪಿಯ 45 ನೇ ಪ್ರಾಂತ ಸಮ್ಮೇಳನದ ವೀರರಾಣಿ ಅಬ್ಬಕ್ಕ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರದರ್ಶಿನಿಯನ್ನು ಸಿದ್ದೇಶ್ವರ ಆಶ್ರಮದ ಪರಮಪೂಜ್ಯ ಬಸವಲಿಂಗ ಮಹಾಸ್ವಾಮೀಜಿಗಳು ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳಿಗೆ ಸಮಸ್ಯೆ ಬಂದಾಗ ಹಲವಾರು ಕಡೆ ಎಬಿವಿಪಿ ಹೋರಾಟಗಳನ್ನು ನಿರ್ಮಿಸಿ ಪರಿಹಾರ ಹುಡುಕಿಕೊಟ್ಟ ನಿದರ್ಶನಗಳನ್ನು ನಾನು ಸ್ವತ ಕೇಳಿದ್ದೇನೆ. ಅಂತಹ ಉತ್ತಮ ಕಾರ್ಯವನ್ನು…

Read More

ಗ್ರಾಮೀಣ ಸಮಸ್ಯೆಗಳು ಇನ್ನೂ ಮುಖ್ಯವಾಹಿಣಿಗೆ ಬಂದಿಲ್ಲ: ದಿನೇಶ ಅಮೀನಮಟ್ಟು ಆತಂಕ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 25:ಗ್ರಾಮೀಣ ಪ್ರದೇಶಗಳ ಅನೇಕ ಮೂಲಭೂತ ಸಮಸ್ಯೆಗಳನ್ನು ಗುರುತಿಸಿ, ಸಮಾಜದ ಸುವ್ಯವಸ್ಥೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ವ್ಯಕ್ತಿಗಳಲ್ಲಿ ರಫೀ ಭಂಡಾರಿ ಕೂಡ ಒಬ್ಬರಾಗಿದ್ದಾರೆ ಎಂದು ಬೆಂಗಳೂರಿನ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.ಇಲ್ಲಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಪತ್ರಕರ್ತ ರಫೀ ಭಂಡಾರಿ ಅಭಿನಂದಾನ ಸಮಿತಿ ವಿಜಯಪುರ ಇವರ ಸಹಯೋಗದಲ್ಲಿ ರವಿವಾರ ಆಯೋಜಿಸಿದ್ದ “ರಫೀ ಭಂಡಾರಿ ಅವರ ವ್ಯಕ್ತಿತ್ವ ಮತ್ತು ಪತ್ರಿಕಾ ಸಾಧನೆ” ಅಭಿನಂದನಾ ಕೃತಿ ಬಿಡುಗಡೆ-ಸನ್ಮಾನ ಮತ್ತು ಮಹಿಳಾ ವಿಶ್ವವಿದ್ಯಾನಿಲಯದ…

Read More

ರಾಜ್ಯಪಾಲರು ಬಿಜೆಪಿ ಎಜೆಂಟ್: ಸಚಿವ ಎಂ. ಬಿ. ಪಾಟೀಲ ಆರೋಪ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 25 :ಕರ್ನಾಟಕ ರಾಜ್ಯಪಾಲರು ಕೇಂದ್ರ ಸರ್ಕಾರದ ಎಜೆಂಟ್ ರಂತೆ ವರ್ತಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಆರೋಪಿಸಿದ್ದಾರೆ.ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯಪಾಲರು ಸರ್ಕಾರದ ಧ್ವನಿ, ಸರ್ಕಾರ ಏನು ಕೊಡುತ್ತದೆ. ಅದನ್ನು ಓದುತ್ತಾರೆ. ಇದೇ ರಾಜ್ಯಪಾಲರು ಹಿಂದೆ ಓದಿಲ್ಲವಾ? ಎಂದು ಸಚಿವ ಎಂ. ಬಿ. ಪಾಟೀಲ ಅವರು ರಾಜ್ಯಪಾಲರ ನಡೆಯನ್ನು ಪ್ರಶ್ನೆ ಮಾಡಿದ್ದಾರೆ.ವಿಧಾನಸೌಧದಲ್ಲಿ ನಡೆಯುತ್ತಿರುವ ವಿಶೇಷ ಸದನ ನಡೆಯುವ ವೇಳೆ ಕೇಂದ್ರ ಸರ್ಕಾರದ ವಿರುದ್ದ ಟೀಕೆ…

Read More

ಅರ್ಹ ಮತದಾರರು ಕಡ್ಡಾಯವಾಗಿ ಮತದಾನದ ಹಕ್ಕು ಚಲಾಯಿಸಲು ನ್ಯಾಯಾಧೀಶ ಹರೀಶ ಎ. ಕರೆ

ಸಪ್ತಸಾಗರ ವಾರ್ತೆ, ವಿಜಯಪುರ, ಜ.25:ದೇಶದ ಅಭ್ಯುದಯಕ್ಕೆ ಮತದಾನದಿಂದ ಯಾರೂ ಹೊರಗುಳಿಯದೇ ಎಲ್ಲ ಅರ್ಹ ಮತದಾರರು ಸಂವಿಧಾನ ಕೊಡಮಾಡಿದ ಪವಿತ್ರವಾದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹರೀಶ ಎ ಅವರು ಕರೆ ನೀಡಿದರು.ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ನ್ಯಾಯಾಂಗ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಇವರ ಸಹಯೋಗದಲ್ಲಿ ಭಾನುವಾರ…

Read More

ಹೊರ್ತಿ ಗ್ರಾಮದ ಶಿವ ದೇವಾಲಯಕ್ಕೆಸ್ವಚ್ಚತೆಯ ಸ್ಪರ್ಶ

ಸಪ್ತಸಾಗರ ವಾರ್ತೆ, ವಿಜಯಪುರ 25. ಶತಮಾನಗಳ ಪರಂಪರೆಯ ಹೊರ್ತಿ ಗ್ರಾಮದ ಶಿವ ದೇವಾಲಯಕ್ಕೆಸ್ವಚ್ಚತೆಯ ಸ್ಪರ್ಶ ನೀಡಿದ ಗಾನಯೋಗಿ ಸಂಘದ ಸದಸ್ಯರು ಮತ್ತು ಸ್ಥಳೀಯರ ಕಾರ್ಯಕ್ಕೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಗ್ರಾಮದಲ್ಲಿರುವ ಕ್ರಿ. ಶ. 11ನೇ ಶತಮಾನದ ಚಾಲುಕ್ಯರ ಕಾಲದ ಅಪರೂಪದ ಪ್ರಾಚೀನ ಶಿವ ದೇವಾಲಯವನ್ನು ಗಾನಯೋಗಿ ಸಂಘದ ಸದಸ್ಯರು, ಪದಾಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಶುಕ್ರವಾರ ಸ್ವಚ್ಛಗೊಳಿಸಿದ್ದರು. ಎಲ್ಲರೂ…

Read More