ಕಾರ್ ಸರ್ವಿಸ್ ಸೆಂಟರ್ ಗೆ ಆಕಸ್ಮಿಕ ಬೆಂಕಿ: 20ಕ್ಕೂ ಹೆಚ್ಚು ಕಾರುಗಳು ಭಸ್ಮ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ.5: ನಗರದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಇರುವ ಹೆಚ್.ಎಂ.ಕೆ ಕಾರ್ ಸರ್ವೀಸ್ ಸೆಂಟರ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿ 20ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿವೆ. 35 ಲಕ್ಷಕ್ಕೂ ಹೆಚ್ಚು ಬಿಡಿ ಭಾಗಗಳು ಭಸ್ಮವಾಗಿ ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.ಸರ್ವೀಸ್‌ಗೆ ನಿಲ್ಲಿಸಲಾಗಿದ್ದ ಸುಮಾರು 20 ಕಾರುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.ಹನಮಂತ ಕನಮಡಿ ಎಂಬುವರಿಗೆ ಸೇರಿದ ಈ ಕಾರ್ ಸರ್ವೀಸ್ ಸೆಂಟರ್‌ನಲ್ಲಿ ರಿಪೇರಿ ಹಾಗೂ ಸರ್ವೀಸ್‌ಗಾಗಿ ಬಂದಿದ್ದ ವಿವಿಧ ಕಂಪನಿಗಳ ಕಾರುಗಳು…

Read More

ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆ: ಜಾಫರ್ ಅಂಗಡಿ ನಾಮಪತ್ರ ಸಲ್ಲಿಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 5: ವಕೀಲ ಜಾಫರ್ ಅಂಗಡಿ ಅವರು ಮುಂಬರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಚುನಾವಣೆಗೆ ತಮ್ಮ ನಾಮಪತ್ರವನ್ನು ಅಧಿಕೃತವಾಗಿ ಸಲ್ಲಿಸಿದರು.ವಕೀಲರ ಸಮುದಾಯದ ಏಕತೆ, ಕಲ್ಯಾಣ ಹಾಗೂ ವೃತ್ತಿಯ ಗೌರವವನ್ನು ಬಲಪಡಿಸುವ ತಮ್ಮ ಸಂಕಲ್ಪದ ಮಹತ್ವದ ಹೆಜ್ಜೆಯಾಗಿ ಈ ಸಲ್ಲಿಕೆ ಗಮನಾರ್ಹವಾಗಿದೆ.ಈ ಸಂದರ್ಭದಲ್ಲಿ ವಕೀಲರ ವಲಯದ ಅನೇಕ ಗಣ್ಯರು ಉಪಸ್ಥಿತರಿದ್ದು ತಮ್ಮ ಬೆಂಬಲ ವ್ಯಕ್ತಪಡಿಸಿದರು. ಉಪಸ್ಥಿತರಿದ್ದವರಲ್ಲಿ ಬಾರ್ ಅಸೋಸಿಯೇಶನ್ ಅಧ್ಯಕ್ಷರಾದ ಡಿ. ಜಿ. ಬಿರಾದಾರ, ಹಿರಿಯ ವಕೀಲರಾದ ಜಿ. ಎ. ಅತನೂರ, ಬಿ….

Read More

ಜಿಲ್ಲಾಧಿಕಾರಿ ಡಾ. ಆನಂದ ಕೊಲ್ಹಾರ ತಾಲೂಕಿನ ವಿವಿಧ ಕಚೇರಿಗಳಿಗೆ ಭೇಟಿ, ಪರಿಶೀಲನೆ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ.4: ಜಿಲ್ಲೆಯ ಕೊಲ್ಹಾರ ತಾಲೂಕಿನ ವಿವಿಧ ಕಚೇರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಬುಧವಾರ ಭೇಟಿ ನೀಡಿ ತಾಲೂಕಾ ಆಡಳಿತದ ಕಾರ್ಯವೈಖರಿ, ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಿದರು.ಕೊಲ್ಹಾರ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ ಅವರು, ಆಧಾರ ನೋಂದಣಿ, ಕಂದಾಯ ಗ್ರಾಮ ಮಾಹಿತಿ, ಭೂಮಿ ಪ್ರಗತಿ, ಈ-ಪೌತಿ ಖಾತೆ ಪ್ರಗತಿ, ಪ್ರಮಾಣ ಪತ್ರ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆ ಕುರಿತು ಪರಿಶೀಲನೆ ನಡೆಸಿದರು.ಸರಕಾರದ ಮಹತ್ವದ ಭೂ-ಸುರಕ್ಷಾ ಯೋಜನೆಯಡಿ ಭೂ-ದಾಖಲೆಗಳು ಸಾರ್ವಜನಿಕರಿಗೆ ದಾಖಲೆಗಳನ್ನು ಪಡೆದುಕೊಳ್ಳುವ…

Read More

ಗಡಿನಾಡು ಚೇತನ ಪ್ರಶಸ್ತಿಗೆ ಸಾಹಿತಿ ಎನ್.ಆರ್. ಕುಲಕರ್ಣಿ ಆಯ್ಕೆ

ಸಪ್ತಸಾಗರ ವಾರ್ತೆ, ವಿಜಯಪುರ,ಫೆ. 4: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೀಡುವ 2025-26ನೇ ಸಾಲಿನ ಗಡಿನಾಡು ಚೇತನ ಪ್ರಶಸ್ತಿಗೆ ವಿಜಯಪುರ ನಿವಾಸಿ ಗಡಿ ನಾಡು ಭಾಗದಲ್ಲಿ ಕನ್ನಡ ಸೇವೆ ಗೈದ ನಾಗೇಶ ಆರ್. ಕುಲಕರ್ಣಿ ಆಯ್ಕೆಯಾಗಿದ್ದಾರೆ.ಫ.ಗು.ಹಳಕಟ್ಟಿ ಹೆಸರಿನಲ್ಲಿ ನೀಡುವ ಈ ಪ್ರಶಸ್ತಿಗೆ ವಿಜಯಪುರದವರೇ ಆಯ್ಕೆಯಾಗಿರುವದು ವಿಶೇಷವಾಗಿದೆ.ಪ್ರಶಸ್ತಿ ತಲಾ 1ಲಕ್ಷ ರೂ. ನಗದು ಬಹುಮಾನ, ಪ್ರಶಸ್ತಿ ಪತ್ರ, ಫಲ ತಾಂಬೂಲ ಒಳಗೊಂಡಿದೆ.ಮಹಾರಾಷ್ಟ್ರ ಸರಕಾರದ ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಎನ್.ಆರ್. ಕುಲಕರ್ಣಿಯವರು ಮೂಲತ:…

Read More

ಮಠ ಮಂದಿರಗಳು ಕಲಾ ಪೋಷಣ ಕೇಂದ್ರಗಳು : ಎಲ್.ಬಿ. ಶೇಖ ಅಭಿಮತ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 4 :ನಾಡಿನ ಕಲೆ, ಸಂಸ್ಕೃತಿ, ಸಾಹಿತ್ಯವನ್ನು ಉಳಿಸಿ ಬೆಳೆಸುವಲ್ಲಿ ಕರ್ನಾಟಕದ ವೀರಶೈವ ಮಠ ಮಂದಿರಗಳ, ಮಠಾಧೀಶರ ಕೊಡುಗೆ ಅಪಾರವಾದದ್ದು, ಶಿವಯೋಗ ಮಂದಿರ ಸ್ಥಾಪನೆಗೆ ಕಾರಣೀಕರ್ತರಾದ ಕುಮಾರ ಶಿವಯೋಗಿಗಳು ಕಲೆ, ಸಾಹಿತ್ಯ ಸಂಸ್ಕೃತಿ, ಉಳಿಸುವಲ್ಲಿ ಕಾರಣಿಕ ಪುರುಷರು ಎಂದು ಖ್ಯಾತ ರಂಗ ನಿರ್ದೇಶಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಲ್.ಬಿ. ಶೇಖ ಅವರು ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡ ಕುಮಾರ ಶಿವಯೋಗಿಗಳ 96ನೇ ಪುಣ್ಯ ಸ್ಮರಣೋತ್ಸವ ಹಾಗೂ ಪಂಡಿತ ಪಂಚಾಕ್ಷರ ಗವಾಯಿಗಳವರ 134ನೇ…

Read More

ಫೆ. 5ರಂದು ದತ್ತಿ ಉಪನ್ಯಾಸ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 4: ವಿಜಯಪುರ ಹಾಗೂ ಬಂಜಾರಾ ಶಿಕ್ಷಣ ಮಹಾವಿದ್ಯಾಲಯ, ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಬಂಜಾರಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಫೆ. 5ರಂದುದತ್ತಿ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ.ಪ್ರಾಚಾರ್ಯ ಡಾ. ಜಯಶ್ರೀ ಪಾಟೀಲ ಅಧ್ಯಕ್ಷತೆ ವಹಿಸುವರು. ಗೆಜ್ಜಿ ಕರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷಸುರೇಶ ಗೆಜ್ಜಿ ಅವರು ಸರ್ವಜ್ಞನ ಅನುಭಾವ ಕುರಿತು ಉಪನ್ಯಾಸ ನೀಡುವರು.ಜಿ. ಶ. ಸಾ. ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮ.ಗು. ಯಾದವಾಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಕರ್ನಾಟಕ ಕಾ.ನಿ.ಪ. ಸಂಘದ ಜಿಲ್ಲಾಧ್ಯಕ್ಷಅಶೋಕ ಯಡಹಳ್ಳಿ ಹಾಗೂಕರ್ನಾಟಕ ಕಾ.ನಿ.ಪ. ಸಂಘಜಿಲ್ಲಾ…

Read More

ಪ್ರಧಾನಿ ಮೋದಿ ವಿರುದ್ಧ ವಿಧಾನ ಪರಿಷತ್ ಸದಸ್ಯ ನಜೀರ ಅಹ್ಮದ ಅವಮಾನಕರ ಹೇಳಿಕೆ: ಕುಡಿಗನೂರ ಖಂಡನೆ

ಸಪ್ತ ಸಾಗರ ವಾರ್ತೆ, ವಿಜಯಪುರ, ಫೆ. 4:ಸದನದ ಕಲಾಪದ ವೇಳೆ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿಯಾಗಿರುವ ನಜೀರ್ ಅಹ್ಮದ್ ಅವರು ದೇಶದ ಸಂವಿಧಾನಾತ್ಮಕ ಉನ್ನತ ಹುದ್ದೆಯಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ‘ರಾಷ್ಟ್ರದ್ರೋಹಿ, ದೇಶದ್ರೋಹಿ’ ಎಂದು ನಿಂದನಾತ್ಮಕವಾಗಿ ಅವಹೇಳನ ಮಾಡಿರುವುದನ್ನು ವಿಜಯಕುಮಾರ ಕುಡಿಗನೂರ ಖಂಡಿಸಿದ್ದಾರೆ.ಪ್ರಧಾನಮಂತ್ರಿಗಳನ್ನು ಇಡೀ ದೇಶ ಹಾಗೂ ಪ್ರಪಂಚದ ಕೆಲವು ಮುಸ್ಲಿಂ ರಾಷ್ಟ್ರಗಳು ಪ್ರಶಂಸೆ ಮಾಡುತ್ತಿರುವಾಗ ಮತ್ತು ಬಲೂಚಿಸ್ತಾನ್ ದವರು ನರೇಂದ್ರ ಮೋದಿ ಅವರಂತ ವ್ಯಕ್ತಿ ನಮ್ಮ ದೇಶಕ್ಕೂ…

Read More

ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆ ಅಭಿಯಾನ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 4: ಇಂದಿನ ದಿನಮಾನದಲ್ಲಿ ಹಲವಾರು ರೀತಿಯ ಚರಂಡಿ ನೀರು ಮೂಲಗಳಿಂದ ಅಂತರ್ಜಲ ಸೇರಿಕೊಂಡು ಕಲುಷಿತಗೊಂಡಿರುವ ನೀರು ಜನ ಸಮುದಾಯಕ್ಕೆ ಸಿಗುವಂತಾಗಿದೆ.ಅಂತಹ ನೀರಿನ ಮೂಲಗಳನ್ನು ಪತ್ತೆ ಹಚ್ಚಿ ನೀರಿನ ಮೂಲಗಳ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ವಿಜಯಪುರ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಬಾಬು ರಾಠೋಡ ಅವರು ತಿಳಿಸಿದರು.ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಆಹೇರಿ, ಐನಾಪುರ, ಅಲಿಯಾಬಾದ, ಗುಣಕಿ, ಹಡಗಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ವಾಟರ್ ಮ್ಯಾನ್ ಗಳು VWSC…

Read More

ಬಬಲೇಶ್ವರ ತಾಲೂಕಿಗೆ ಜಿಪಂ ಸಿಇಒ ರಿಷಿ ಆನಂದ ಭೇಟಿ:ಪರಿಶೀಲನೆ

ಸಪ್ತಸಾಗರ ವಾರ್ತೆ, ವಿಜಯಪುರ,ಫೆ.4 : ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಮಂಗಳವಾರ ಬಬಲೇಶ್ವರ ತಾಲೂಕಿನ ಕಾಖಂಡಕಿ ಹಾಗೂ ಕಾರಜೋಳ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.ಬಬಲೇಶ್ವರ ತಾಲೂಕಾ ಪಂಚಾಯತಿ ಸಭಾಂಗಣದಲ್ಲಿ ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.ಸಭೆಯಲ್ಲಿ ಇ-ಹಾಜರಾತಿ, ನರೇಗಾ, ವಸತಿ, ಎಸ್ ಬಿಎಂ,ಇ-ಖಾತಾ, ಗ್ರಂಥಾಲಯ, ಕರ ವಸೂಲಾತಿ ಸೇರಿ ವಿವಿಧ ವಿಷಯಗಳ ಕುರಿತು ಪರಿಶೀಲನೆ ನಡೆಸಿ, ಗ್ರಾಮಗಳ ಅಭಿವೃದ್ಧಿಯಲ್ಲಿ ಪಿಡಿಓಗಳ…

Read More

ವಿದ್ಯಾದಾನ ಅತಿ ಶ್ರೇಷ್ಠ: ರಕ್ಷಿತಾ ರಾಜು

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 3 :ನಗರದ ಬಿ. ಎಲ್.ಡಿ.ಇ.ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಯುವಕ ಯುವತಿಯರಿಗೆ ಪ್ರೇರಣೆಯ ಚಿಲುಮೆ ಎಂಬಂತೆ, “ಬ್ರೆಕಿಂಗ್ ಬ್ಯಾರಿಯರ್ಸ್ ಆನ್ ಇನ್ಸ್ಪೈರಿಂಗ್ ಇಂಟರಾಕ್ಷನ್ ವಿತ್ ಇಂಟರ್ನ್ಯಾಷನಲ್ ಪ್ಯಾರಾ ಅಥ್ಲೆಟ್” ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿ ಕುಮಾರಿ ರಕ್ಷಿತಾ ರಾಜು ಅಂತರಾಷ್ಟ್ರೀಯ ಪ್ಯಾರಾ ಅಥ್ಲೆಟ್,ಬೆಂಗಳೂರು ಇವರು ಮಾತನಾಡಿ, ಉಳ್ಳವರು ಶಿವಾಲಯವ ಮಾಡುವರು ಎಂಬ ಬಸವಣ್ಣನವರ ವಚನದಂತೆ ಶಾರೀರಿಕ ಮಿತಿಗಳು ನಮ್ಮ ಸಾಧನೆಯನ್ನು ಅಡ್ಡಿಪಡಿಸಲಾರವು. ನಮ್ಮಲ್ಲಿ ಯಾವ ಶಕ್ತಿ ಇಲ್ಲ…

Read More