ಎಬಿವಿ ಸಿಬಿಎಸ್‌ಇ ಶಾಲೆಯಲ್ಲಿ ವಿದ್ಯಾರ್ಥಿ ಪರಿಷತ್ ಚುನಾವಣೆ ಯಶಸ್ವಿ
ಇ.ವಿ.ಎಂ. ಮೂಲಕ 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮತದಾನ; ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಜೀವಂತ ಪಾಠ ಸಪ್ತಸಾಗರ ವಾರ್ತೆ,ವಿಜಯಪುರ, ಜು. 27:ನಗರದ ಎಬಿವಿ ಸಿಬಿಎಸ್‌ಇ ಶಾಲೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಪರಿಷತ್ ಚುನಾವಣೆ ಶನಿವಾರ ಅತ್ಯಂತ ಶಿಸ್ತುಬದ್ಧ, ಪಾರದರ್ಶಕ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಯಶಸ್ವಿಯಾಗಿ ನಡೆಯಿತು.ಶಾಲೆಯ ಪ್ರಾಂಶುಪಾಲೆ ಐಶ್ವರ್ಯ ಸಂಗಮ ಹಾಗೂ ಉಪ ಪ್ರಾಂಶುಪಾಲ ರವಿಕಾಂತ ಮೆಂಡೆಗಾರ ಅವರ ಮಾರ್ಗದರ್ಶನದಲ್ಲಿ, ಶಾಲೆಯ ಚುನಾವಣಾ ಆಯೋಗದ ಸಂಚಾಲಕಿ ಅಂಜನಾ ಮಹೇಶ್ ಅವರ ನೇತೃತ್ವದಲ್ಲಿ ಹಾಗೂ ಶಾಲೆಯ ಶಿಕ್ಷಕ-ಶಿಕ್ಷಕಿಯರ…


