ನೀರಾವರಿಯಿಂದ ಕೃಷಿ ಉಪಕರಣಗಳ ಮಾರಾಟಕ್ಕೂ ವರದಾನ: ಸಚಿವ ಎಂ.ಬಿ. ಪಾಟೀಲ್

ಸಪ್ತಸಾಗರ ವಾರ್ತೆ,ವಿಜಯಪುರ, ಆ. 17: ನೀರಾವರಿಯಿಂದಾಗಿ ಕೃಷಿಯಷ್ಟೇ ಅಲ್ಲ, ಟ್ರ್ಯಾಕ್ಟರ್ ಮತ್ತು ಕೃಷಿ ಉಪಕರಣಗಳನ್ನು ಮಾರಾಟ ಮಾಡುವವರಿಗೂ ವರದಾನವಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶನಿವಾರ ಸಿಂದಗಿ ಪಟ್ಟಣದಲ್ಲಿ ಸ್ವರಾಜ್ ಟ್ರ್ಯಾಕ್ಟರ್ ನೂತನ ಶೋ ರೂಂ ಉದ್ಘಾಟಿಸಿ ಅವರು ಮಾತನಾಡಿದರು.ಜಗತ್ತು ಆಧುನೀಕರಣದತ್ತ ಸಾಗಿರುವುದರಿಂದ ಅದಕ್ಕೆ ತಕ್ಕಂತೆ ಕೃಷಿ ಸಲಕರಣೆಗಳನ್ನು ಬಳಸಬೇಕಾಗುತ್ತಿದೆ. ಟ್ರ್ಯಾಕ್ಟರ್ ರೈತರ ಬೆನ್ನೆಲುಬಾಗಿದ್ದು, ರೈತರ ಶ್ರಮವನ್ನು ಕಡಿಮೆ ಮಾಡಿ ಹೊಲದ ಕೆಲಸವನ್ನು ಬೇಗ ಮತ್ತು ಸುಲಭವಾಗಿ…

Read More

ಯತ್ನಾಳ್ ಕಾರ್ ಅಡ್ಡಗಟ್ಟಿ ಕಪ್ಪು ಬಾವುಟ ಪ್ರದರ್ಶನ: ಯುವಕರನ್ನು ವಶಕ್ಕೆ ಪಡೆದ ಪೊಲೀಸರು

ಸಪ್ತ ಸಾಗರ ವಾರ್ತೆ, ವಿಜಯಪುರ, ಆ. 17: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೀಡಿದ ಪ್ರಚೋದನೆಕಾರಿ ಹೇಳಿಕೆ ವಿರೋಧಿಸಿ ಒಂದು ಕೋಮಿನ ಯುವಕರು ಯತ್ನಾಳ್ ಕಾರಿಗೆ ಅಡ್ಡಗಟ್ಟಿ ಕಪ್ಪು ಬಟ್ಟೆ ಪ್ರದರ್ಶನ ನಡೆಸಿದ ಘಟನೆ ಭಾನುವಾರ ಆಲಮೇಲದಲ್ಲಿ ನಡೆದಿದೆ.ಇತ್ತೀಚೆಗೆ ಕೊಪ್ಪಳದಲ್ಲಿ ಯತ್ನಾಳ್ ಅವರು ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ಕೊಡುತ್ತೇವೆ ಎಂದು ಘೋಷಿಸುವ ಮೂಲಕ ವಿವಾದ ಹುಟ್ಟು ಹಾಕಿದ್ದರು.ಈ ಹೇಳಿಕೆ ವಿರೋಧಿಸಿ ಮುಸ್ಲಿಂ ಯುವಕರು ಯತ್ನಾಳ್ ಕಾರಿಗೆ ಅಡಗಟ್ಟಿ…

Read More

ಸ್ಕೇಟಿಂಗ್ ಸ್ಪರ್ಧೆಯಲ್ಲಿ ಬಿಎಲ್ ಡಿಇ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 17: ಬಿ.ಎಲ್.ಡಿ.ಇ ಸಂಸ್ಥೆಯ ಜಮಖಂಡಿಯಲ್ಲಿರುವ ಬಿ.ಎಲ್.ಡಿ.ಇ ಸ್ಪೋರ್ಟ್ ಅಕಾಡೆಮಿಯ ವಿದ್ಯಾರ್ಥಿಗಳು 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ 79 ನಿಮಿಷಗಳ ಸತತ ಸ್ಕೇಟಿಂಗ್ ನಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.ಯುನೈಟೆಟ್ ಸ್ಟೇಟ್ ಆಫ್ ಅಮೇರಿಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಜೀನಿಯಸ್ ಇಂಡಿಯನ್ ಬುಕ್ ಆಫ್ ವರ್ಡ್ಲ್ ರೆಕಾರ್ಡ್ಸ್ ಮತ್ತು ಯು. ಎನ್. ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಜಂಟಿಯಾಗಿ ಶುಕ್ರವಾರ ದೇಶಾದ್ಯಂತ ಜಿಲ್ಲಾ ಕೇಂದ್ರದಲ್ಲಿ ಸ್ಕೇಟಿಂಗ್ ಆಯೋಜಿಸಿತ್ತು….

Read More

ತಿಕೋಟಾ ತಾಲೂಕಾ ಕಚೇರಿಗಳಿಗೆ ಜಿಲ್ಲಾಧಿಕಾರಿ ಡಾ. ಆನಂದ ಭೇಟಿ, ಪರಿಶೀಲನೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ.16: ಜಿಲ್ಲೆಯ ತಿಕೋಟಾ ತಾಲೂಕಾ ಕಚೇರಿಗಳಿಗೆ ಜಿಲ್ಲಾಧಿಕಾರಿ ಡಾ.ಆನಂದ. ಕೆ ಅವರು ಶನಿವಾರ ಭೇಟಿ ನೀಡಿ, ತಾಲೂಕಾ ಆಡಳಿತದ ಕಾರ್ಯ ನಿರ್ವಹಣೆಯ ಪ್ರಗತಿ ಪರಿಶೀಲನೆ ನಡೆಸಿದರು.ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಬಾಕಿ ಕಡತಗಳ ಪರಿಶೀಲನೆ, ನ್ಯಾಯಾಲಯ ಪ್ರಕರಣಗಳ ಕಡತ, ಆಧಾರ ನೋಂದಣಿ, ಕಂದಾಯ ಗ್ರಾಮಗಳ ಮಾಹಿತಿ, ಭೂಮಿ ಪ್ರಗತಿ, ಮೋಜಣಿ ಕಡತ ಪ್ರಗತಿ ಮಾಹಿತಿ, ಪ್ರಮಾಣ ಪತ್ರಗಳ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿದರು. ಇ ಪೌತಿ ಖಾತೆ ಪ್ರಗತಿ,…

Read More

ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 16: ಇಲ್ಲಿನ ಮಾತೋಶ್ರೀ ರಮಾಬಾಯಿ ಅಂಬೇಡ್ಕರ ಪ್ರೌಢಶಾಲೆಯಲ್ಲಿ 79ನೇ ಸ್ವಾತಂತ್ರ್ಯೋತ್ಸ ದಿನಾಚರಣೆ ಆಚರಿಸಲಾಯಿತು.ಮಾತೋಶ್ರೀ ರಮಾಬಾಯಿ ಅಂಬೇಡ್ಕರ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಹಾಗೂ ಪದವಿ ಮಹಾವಿದ್ಯಾಲಯದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮ ಆಚರಿಸಲಾಯಿತು.ಸಂಸ್ಥೆಯ ಅಧ್ಯಕ್ಷ ತುಕಾರಾಮ ಚಂಚಲಕರ ಅವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿ, ಎಲ್ಲರೂ ದೇಶಪ್ರೇಮವನ್ನು ಮೈಗೂಢಿಸಿಕೊಳ್ಳಬೇಕು. ಡಾ. ಬಾಬಾ ಸಾಹೇಬ್ ಅಂಬೇಡ್ಕರ ಅವರ ತತ್ವ ಸಿದ್ಧಾಂತಗಳನ್ನು ಎಲ್ಲರೂ ತಿಳಿದುಕೊಳ್ಳಬೇಕೆಂದು ಮಾರ್ಮಿಕವಾಗಿ ಹೇಳಿದರು.ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯಗುರುಗಳಾದ ಎಸ್.ಎಸ್. ಗುಡ್ಲೇನವರ,…

Read More

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ದೇಶ ಪ್ರೇಮ ಇತರರಿಗೆ ಆದರ್ಶ: ಸಚಿವ ಎಂ. ಬಿ. ಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ, ಆ.16: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ದೇಶಪ್ರೇಮ, ಹೋರಾಟದ ಕಿಚ್ಚು ಸದಾ ಆದರ್ಶವಾಗಿವೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಶುಕ್ರವಾರ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟನೆ ಮತ್ತು ಬಬಲೇಶ್ವರ ತಾಲೂಕಿನ ಕಾಖಂಡಕಿ ಬಳಿಯ ಅಗಸನಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣನವರ 229ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಸಂಗೊಳ್ಳಿ ರಾಯಣ್ಣ ನಾಡಿನ ಏಕತೆ ಮತ್ತು ಸ್ವಾಭಿಮಾನದ ಶಾಶ್ವತ ಸಂಕೇತ. ಕಿತ್ತೂರು ಸಂಸ್ಥಾನವನ್ನು…

Read More

ಸ್ವಾತಂತ್ರ್ಯೋತ್ಸವ ಅಂಗವಾಗಿ ರಕ್ತದಾನ ಶಿಬಿರ

ಸಪ್ತಸಾಗರ ವಾರ್ತೆ ವಿಜಯಪುರ, ಆ. 16: 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ರಕ್ತದಾನ ಶಿಬಿರ ನಡೆಯಿತು.ಎಂ. ಬಿ. ಪಾಟೀಲ ಫೌಂಡೇಶನ್ ಸಹಯೋಗದಲ್ಲಿ ನಡೆದ ಈ‌ ಶಿಬಿರದಲ್ಲಿ 41 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.ಈ‌ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಎಸ್. ಬಿ. ಕಮತಿ, ಉಪಪ್ರಾಚಾರ್ಯ ಎಸ್. ಎ. ಪಾಟೀಲ, ಸಂಸ್ಥೆಯ ಕಾನೂನು ಸಲಹೆಗಾರ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಸಂಯೋಜಕ ಸೂರ್ಯಕಾಂತ ಬಿರಾದಾರ, ಶ್ರೀ ಬಿ. ಎಂ….

Read More

ನಿಗಮಗಳಿಂದ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ

ಸಪ್ತಸಾಗರ ವಾರ್ತೆ, ವಿಜಯಪುರ, ಆ.16:ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ,ಕರ್ನಾಟಕ ಅದಿಜಾಂಬವ ಅಭಿವೃದ್ಧಿ ನಿಗಮ,ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ,ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಮೂಲಕ 2025-26 ನೇ ಸಾಲಿಗಾಗಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನಿಸಲಾಗಿದೆ.ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಕುರಿ ಸಾಕಾಣಿಕ ಉದ್ದೇಶಕ್ಕಾಗಿ ಹಾಗೂ ಸ್ವಾವಲಂಬಿ ಸಾರಥಿ, ಪುಡ್ ಕಾರ್ಟ್ (ಮೊಬೈಲ್ ಕಿಚನ್ ಉದ್ದೇಶಕ್ಕಾಗಿ ಮಾತ್ರ) ಯೋಜನೆ, ಉದ್ಯಮಶೀಲತಾ ಅಭಿವೃದ್ಧಿ ಯೋಜನೆ (ಇತರೆ ಉದ್ದೇಶ) ಹಾಗೂ ಮೈಕ್ರೋ ಕ್ರೆಡಿಟ್ ಪ್ರೇರಣಾ…

Read More

ಆ. 19ರೊಳಗಾಗಿ ಒಳ ಮೀಸಲಾತಿ ಜಾರಿ ಮಾಡದಿದ್ದರೆ ಉಗ್ರ ಹೋರಾಟ: ಗೋವಿಂದ ಕಾರಜೋಳ ಎಚ್ಚರಿಕೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 16:ನಾಗಮೋಹನ್ ದಾಸ್ ವರದಿ ಶಿಫಾರಸ್ಸು ಆಧರಿಸಿ ರಾಜ್ಯದಲ್ಲೂ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಳ ಮೀಸಲಾತಿ ವಿಷಯದಲ್ಲಿ ರಾಜ್ಯ ಸರ್ಕಾರ ಜಗಳ ಹಚ್ಚುವ ಕೆಲಸದಲ್ಲಿ ತೊಡಗಿದೆ. ಇದು ಸರಿಯಲ್ಲ ಎಂದು ಕಾರಜೋಳ ಹೇಳಿದರು.ಮೀಸಲಾತಿಯಲ್ಲಿ ಎಸ್ ಸಿ 101 ಹಾಗೂ ಎಸ್ ಟಿ 56 ಜಾತಿಗಳಿವೆ. ಒಳ ಮೀಸಲಾತಿ ವಿಚಾರವಾಗಿ 2004 ರಲ್ಲಿ ಸದಾಶಿವ…

Read More

ಕನಕ ಪಬ್ಲಿಕ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 16: ನಗರದ ಕನಕ ಪಬ್ಲಿಕ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಇದರ ಅಂಗವಾಗಿ ವಿದ್ಯಾರ್ಥಿಗಳು ಭಾರತ ಮಾತೆ, ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ಒನಕೆ ಓಬವ್ವ ಮುಂತಾದ ಮಹನೀಯರ ವೇಷ ಧರಿಸಿ ಕಾರ್ಯಕ್ರಮಕ್ಕೆ ಅತ್ಯಂತ ಮೆರಗನ್ನು ತಂದ ಕೊಟ್ಟರು.

Read More