ಶ್ರೀ ಪ್ರಸನ್ನೇಶ್ವರ ದೇವಾಲಯದಲ್ಲಿ ಹನುಮ ಜಯಂತಿ ಆಚರಣೆ

ಸಪ್ತಸಾಗರ ವಾರ್ತೆ,ವಿಜಯಪುರ,ಏ. 1:ನಗರದ ಝೆಂಡಾಕಟ್ಟಿ ಹಳಕೇರಿ ಗಲ್ಲಿಯ ಗಾಯಿ ಚಾಳ್ ಬಳಿ ಇರುವ ಶ್ರೀ ಪ್ರಸನ್ನೇಶ್ವರ-ಶ್ರೀ ಪ್ರಸನ್ನಾಂಜನೇಯ ಹಾಗೂ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಬುಧವಾರ ಹನುಮ ಜಯಂತಿಯನ್ನುಯ ಸಂಭ್ರಮದಿಂದ ಆಚರಿಸಲಾಯಿತು.ಅದರಂಗವಾಗಿ ಬೆಳಿಗ್ಗೆ ಸುಪ್ರಭಾತದ ಬಳಿಕ ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಶ್ರೀ ಬಾಲ ಹನುಮನ ತೊಟ್ಟಿಲೋತ್ಸವ, ಶ್ರೀ ಸತ್ಯನಾರಾಯಣ ಪೂಜೆ ಜರುಗಿತು.ಶ್ರಿ ಪ್ರಸನ್ನೇಶ್ವರ ಸೇವಾ ಭಜನಾ ಮಂಡಳಿ ಸದಸ್ಯರಿಂದ ರಾಮನಾಮದ ಭಕ್ತಿ ಸಂಗೀತ ಸೇವೆ ಅತ್ಯಂತ ಸುಶ್ರಾವ್ಯವಾಗಿ ನಡೆದು ಭಕ್ತರ ಭಕ್ತಿಯ ಪರಾಕಾಷ್ಟೆ ಮೆರೆಯಿತು.ವಾಯುಪುತ್ರನ ತೊಟ್ಟಿಲೋತ್ಸವದ ಸಂದರ್ಭದಲ್ಲಿ…

Read More

ಏ. 4ರಂದು ವೈದ್ಯಕೀಯ ಕಾರ್ಯಾಗಾರ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 1: ನಗರದ ಪ್ರತಿಷ್ಠಿತ ಬಿ.ಎಲ್‌.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಶ್ರೀ ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ ಕಿವಿ, ಮೂಗು, ಗಂಟಲು ವಿಭಾಗದಿಂದ ಅಲರ್ಜಿ ಕ್ಷೇತ್ರದ ಹೊಸ ಒಳನೋಟಗಳು ಕುರಿತು ನಿರಂತರ ವೈದ್ಯಕೀಯ ಶಿಕ್ಷಣ(CME) ಮತ್ತು ಕಾರ್ಯಾಗಾರ ಏಪ್ರಿಲ್ 4 ರಂದು ಶನಿವಾರ ನಡೆಯಲಿದೆ.ಬಿ.ಎಲ್‌.ಡಿ.ಇ ಆಸ್ಪತ್ರೆಯ ಟ್ರಾಮಾ ಸೆಂಟರ್‌ನ 2ನೇ ಮಹಡಿಯ ಮಿನಿ ಆಡಿಟೋರಿಯಂನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಖ್ಯಾತ ಅಲರ್ಜಿ ತಜ್ಞೆ ಡಾ. ಗಾಯತ್ರಿ…

Read More

ಬಿಎಲ್ ಡಿಇ ಸಿದ್ದೇಶ್ವರ ಶಿಕ್ಷಣ ಕಾಲೇಜಿನಲ್ಲಿ ಪಾಲಕರ ಸಭೆ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 1 : ನಗರದ ಬಿ. ಎಲ್.ಡಿ.ಇ.ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ” ಪಾಲಕ-ಶಿಕ್ಷಕರ ಸಭೆ”ಯನ್ನು ಅತ್ಯಂತ ಅರ್ಥಪೂರ್ಣವಾಗಿ ನಡೆಯಿತು. ಅತಿಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಆಗಮಿಸಿದ್ದು, ವಿದ್ಯಾರ್ಥಿಗಳ ಪ್ರಗತಿಯ ಕುರಿತು ಚರ್ಚಿಸಲಾಯಿತು. ಸಹ ಪ್ರಾಧ್ಯಾಪಕ ಡಾ.ಎಂ.ಎಸ್. ಹಿರೇಮಠ ಮಹಾವಿದ್ಯಾಲಯ ಬೆಳೆದು ಬಂದ ಬಗೆಯನ್ನು ತಿಳಿಸಿದರು. ಸಹ ಪ್ರಾಧ್ಯಾಪಕ ಡಾ.ಎಂ.ಬಿ. ಕೋರಿ ಮಹಾವಿದ್ಯಾಲಯದ ಸೌಲಭ್ಯಗಳ ಕುರಿತು ತಿಳಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ಜೆ.ಎಸ್. ಪಟ್ಟಣಶೆಟ್ಟಿ ಮಹಾವಿದ್ಯಾಲಯವು ಹೊಂದಿರುವ ವಿವಿಧ ಘಟಕಗಳ ಕುರಿತು ಮಾತನಾಡಿದರು.ಸಹಾಯಕ…

Read More

ನಿಗದಿತ ಸಮಯಕ್ಕೆ ಕಚೇರಿಯಲ್ಲಿರಲು ಜಿಲ್ಲಾಧಿಕಾರಿ‌ ಖಡಕ್ ಸೂಚನೆ:ಜಿಲ್ಲೆಯಲ್ಲಿ ತಾಪಮಾನ ಹಿನ್ನೆಲೆ ಬದಲಾದ ಸರ್ಕಾರಿ ಕಚೇರಿ ಸಮಯ

ಸಪ್ತಸಾಗರ ವಾರ್ತೆ,ವಿಜಯಪುರ, ಏ.1: 2026ನೇ ಸಾಲಿನ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನ ಹಿನ್ನೆಲೆಯಲ್ಲಿ ಏಪ್ರಿಲ್ 1 ರಿಂದ ಜಿಲ್ಲೆಯಲ್ಲಿ ಸರಕಾರಿ ಕಚೇರಿ ಸಮಯ ಬದಲಾವಣೆಯಾಗುತ್ತಿದ್ದಂತೆಯೇ, ಬುಧವಾರ ಬೆಳಗ್ಗೆಯೇ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ನಗರದ ಕೃಷಿ ಇಲಾಖೆ ಜಂಟಿ‌ ನಿರ್ದೇಶಕರ ಕಚೇರಿ ಸೇರಿದಂತೆ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಿ,ಅಧಿಕಾರಿ, ಸಿಬ್ಬಂದಿ ಹಾಜರಾತಿ ಪರಿಶೀಲಿಸಿದರು.ಕಚೇರಿ ಸಮಯ ಬದಲಾವಣೆ ಹಿನ್ನೆಲೆಯಲ್ಲಿ ಬುಧವಾರ ನಗರದ ವಿವಿಧ ಇಲಾಖೆಗಳ ಕಚೇರಿಗೆ ದಿಢೀರ್ ಭೇಟಿ ನೀಡಿ, ಸಿಬ್ಬಂದಿ…

Read More

ಹಿಂಗಾರು ಹಂಗಾಮಿಗೆ ಏ. 7 ರವರೆಗೆ ಕಾಲುವೆ ಜಾಲಕ್ಕೆ ನೀರು

ಸಪ್ತಸಾಗರ ವಾರ್ತೆ,ವಿಜಯಪುರ, ಏ. 1:ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಮುಳವಾಡ ಏತ ನೀರಾವರಿ ವೃತ್ತ ಟಕ್ಕಳಕಿ ಅಡಿ ಬರುವ ಕಾಲುವೆ ಜಾಲಕ್ಕೆ 2025-26 ರ ಹಿಂಗಾರು ಹಂಗಾಮಿಗೆ ಕಾಲುವೆ ಜಾಲಕ್ಕೆ ನೀರು ಹರಿಸುವ ಅವಧಿಯನ್ನು ಏ.1 ರಿಂದ ಏ.7ರವರೆಗೆ ವಿಸ್ತರಿಸಲಾಗಿದೆ ಎಂದುಕೆಬಿಜೆಎನ್ನೆಲ್‌ ಮುಳವಾಡ ಏತ ನೀರಾವರಿ ಯೋಜನೆಯ‌ ಟಕ್ಕಳಕಿ‌ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.2025-26ನೇ ಸಾಲಿನ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಮುಳವಾಡ…

Read More

ಕಾರ್ಮಿಕ ಕಾಯಿದೆ ವಿರುದ್ಧ ಕರಾಳ ದಿನಾಚರಣೆ: ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ

ಸಪ್ತಸಾಗರ ವಾರ್ತೆ, ವಿಜಯಪುರ, ಏ. 1 : ನಾಲ್ಕು ಕಾರ್ಮಿಕ ಕಾಯಿದೆಗಳ ವಿರುದ್ದ 2025ರ ಏಪ್ರಿಲ್ ಒಂದರಂದು ಕರಾಳ ದಿನ ಆಚರಿಸಲು ಕೇಂದ್ರ ಕಾರ್ಮಿಕ ಸಂಘಟನೆಗಳು, ಸ್ವತಂತ್ರ ಕ್ಷೇತ್ರೀಯ ಮಹಾಸಂಘಗಳು ಮತ್ತು ಸಂಘಗಳ ಜಂಟಿ ವೇದಿಕೆಯು ಕರೆ ನೀಡಿದರ ಹಿನ್ನೆಲೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮುಂದೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ವತಿಯಿಂದ ಕರಾಳ ದಿನ ಆಚರಿಸಲಾಯಿತು.ಈ ಸಂದರ್ಭದಲ್ಲಿ ಸಿಐಟಿಯು ಸಂಚಾಲಕ ಲಕ್ಷ್ಮಣ ಹಂದ್ರಾಳ ಮಾತನಾಡಿ, ಏಪ್ರಿಲ್ ಒಂದರಂದೇ ಕೇಂದ್ರ ಸರ್ಕಾರ ನಾಲ್ಕು…

Read More

ನಂದು ಗಡಗಿ ಬಿಜೆಪಿ ಸೇರ್ಪಡೆ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 1:ನಗರ ಶಾಸಕ ಬಸನಗೌಡ ಪಾಟೀಲ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಯುವ ಮುಖಂಡ ನಂದು ಗಡಗಿ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೆಂದ್ರ ಅವರ ನಾಯಕತ್ವವನ್ನ ಒಪ್ಪಿಕೊಂಡು ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಹಾಗೂ ವಿಜಯಪುರ ನಗರ ಮಂಡಲ ಅಧ್ಯಕ್ಷರಾದ ಸಂದೀಪ್ ಪಾಟೀಲ್ ಸಮ್ಮುಖದಲ್ಲಿ ಬಾಗಲಕೋಟೆ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೊದಲಾದ ಹಿರಿಯ ನಾಯಕರು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರ…

Read More

ಕ್ರೀಡಾ ಸ್ಫೂರ್ತಿ ಮೆರೆಯೋಣ : ಮಹೇಶ ಪೋತದಾರ

ಸಪ್ತಸಾಗರ ವಾರ್ತೆ,ವಿಜಯಪುರ, ಮಾ.29 :ಜೀವನದಲ್ಲಿ ಸೋಲು ಗೆಲುವು ಹೇಗೆ ನಡೆಯುತ್ತಿದೆಯೂ ಹಾಗೆ ಕ್ರೀಡಾ ಕ್ಷೇತ್ರದಲ್ಲಿಯೂ ಸೋಲು ಗೆಲುವು ನಡೆಯುತ್ತಿರುತ್ತದೆ. ಸೋಲು ಗೆಲುವಿನ ನಡುವೆ ಕ್ರೀಡಾ ಸ್ಫೂರ್ತಿ ಮೆರೆಯೋಣ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ ಹೇಳಿದರು.ನಗರದ ಜಲನಗರ ಮೈದಾನದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ಜಿಲ್ಲೆಯ ವಿವಿಧ ಪ್ರಗತಿಪರ ಸಂಘ ಸಂಸ್ಥೆಗಳು ಆಯೋಜನೆ ಮಾಡಿರುವ “ಅಂಬೇಡ್ಕರ್ ಹಬ್ಬ” ಪ್ರಯುಕ್ತ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಮಹಾನಾಯಕ ಕ್ರಿಕೆಟ್ ಟೂರ್ನಮೆಂಟ್ ಪಂದ್ಯಾವಳಿಗೆ ಚಾಲನೆ ನೀಡಿ…

Read More

ಚೆಸ್ ಸ್ಪರ್ಧೆ: ಅಂಜುಮನ್ ಕಾಲೇಜ್ ಗೆ ತೃತೀಯ ಸ್ಥಾನ

ಸಪ್ತಸಾಗರ ವಾರ್ತೆ, ವಿಜಯಪುರ, ಮಾ. 28:ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಬೆಂಗಳೂರು ಕಾನೂನು ಕಾಲೇಜಿನಲ್ಲಿ ಮಾ. 26ರಂದು ಅಂತರ ಕಾಲೇಜು ಚೆಸ್ ಸ್ಪರ್ಧೆ ಜರುಗಿತು.ಈ ಸ್ಪರ್ಧೆಯಲ್ಲಿ ಅಂಜುಮನ್ ಕಾನೂನು ಮಹಾವಿದ್ಯಾಲಯ, ವಿಜಯಪುರದಿಂದ ಐದು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ತಂಡದ ನಾಯಕ ಸಮೀರ್ ಖಾಜಿ, ಅಮೀರ್ ಕೊರ್ತಿ, ಪ್ರದೀಪ್ ಬಾಲಗನೂರ್, ಆನಂದ್ ಕಾಳಗಿ ಹಾಗೂ ದ್ಯಾಮಣ್ಣ ಸುಭಾನಪ್ಪರ್ ಇದ್ದರು.ತಂಡದ ವ್ಯವಸ್ಥಾಪಕರಾಗಿ ದೈಹಿಕ ಶಿಕ್ಷಣ ನಿರ್ದೇಶಕ ಟಿ.ಎಸ್. ಕೂಡಗಿ ಅವರು ಕಾರ್ಯ ನಿರ್ವಹಿಸಿದರು. ಈ ಸ್ಪರ್ಧೆಯಲ್ಲಿ ವಿವಿಧ…

Read More

ಮೂವರು ಮಕ್ಕಳನ್ನು ಬಾವಿಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 27:ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿ ನಡೆದಿದೆ.ತಾಯಿ ರಾಜಶ್ರೀ ಶಂಕ್ರಪ್ಪ ಹಳ್ಳೂರ (28),ಮೂವರು ಅಪ್ರಾಪ್ತ ವಯಸ್ಸಿನ ಮಕ್ಕಳಾದ ಅನುಶ್ರೀ ( 6), ತನು (3)ಸಂತೋಷ ( 1) ಮೃತಪಟ್ಟವರು.ಗುರುವಾರ ಸಂಜೆ ಜಿಲ್ಲೆಯ ಇಂಡಿ ತಾಲೂಕಿನ ಮಿರಗಿ ಗ್ರಾಮದಲ್ಲಿಮೂವರು ಮಕ್ಕಳನ್ನು‌ ಬಾವಿಗೆ ಎಸೆದು ತಾನೂ ಬಾವಿಗೆ ಬಿದ್ದುರಾಜಶ್ರೀ ಶಂಕ್ರಪ್ಪ ಹಳ್ಳೂರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ರಾಜಶ್ರೀ ಪತಿ ಶಂಕ್ರಪ್ಪ ಊರಲ್ಲಿ ಇಲ್ಲದಿರುವಾಗ ಈ ಘಟನೆ…

Read More