ವಿಡಿಎ ನೂತನ ಅಧ್ಯಕ್ಷರಾಗಿ ಡಾ. ಸಂಬಣ್ಣಿ ನೇಮಕ
ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 3: ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ನೂತನ ಅಧ್ಯಕ್ಷರಾಗಿ ಡಾ.ಗಂಗಾಧರ ಸಂಬಣ್ಣಿ ನೇಮಕಗೊಂಡಿದ್ದಾರೆ.ಆಯುರ್ವೇದ ವೈದ್ಯಕೀಯ ಪದವೀಧರರಾಗಿರುವ ಸಂಬಣ್ಣಿ ವಿದ್ಯಾರ್ಥಿ ದೆಸೆಯಿಂದಲೇ ವಿದ್ಯಾರ್ಥಿ ಆಂದೋಲನ, ಹೋರಾಟದಲ್ಲಿ 1993-94ರಲ್ಲಿ ತೊಡಗಿಸಿಕೊಂಡಿದ್ದರು.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಘಟಕದ ಸಹ ಕಾರ್ಯದರ್ಶಿಯಾಗಿದ್ದ ಅವರು ನಂತರ ಯುವ ಮುಖಂಡರಾಗಿದ್ದ ಸುನೀಲಗೌಡ ಪಾಟೀಲರ ಗೆಳೆಯರಾಗಿ 1999ರಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.ಕಳೆದ 27 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಕಟ್ಟಾಳಾಗಿ ಸೇವೆ ಸಲ್ಲಿಸಿದ್ದ ಅವರು ಯುವ ಕಾಂಗ್ರೆಸ್ ಸಮಿತಿ ಜಿಲ್ಲಾ ಕಾಂಗ್ರೆಸ್ ಸೇವಾದಳದಲ್ಲಿ ಪದಾಧಿಕಾರಿಯಾಗಿ…


