
ವರ್ಷಪೂರ್ತಿ ಹಣ್ಣು ಬಿಡುವ ಥೈಲ್ಯಾಂಡ್ ಮಾವು ಬೆಳೆದ ಸಾವಯವ ಕೃಷಿಕ
ಸಪ್ತಸಾಗರ ವಾರ್ತೆ ವಿಜಯಪುರ, ಸೆ. 23 : ಜಿಲ್ಲೆಯ ಪದವೀಧರ ಯುವ ಪ್ರಗತಿಪರ ರೈತರೊಬ್ಬರು ಥೈಲ್ಯಾಂಡ್ ಮೂಲದ ಮಾವು ಬೆಳೆದು ಯಶಸ್ಸು ಸಾಧಿಸಿದ್ದಾರೆ. ಹಣ್ಣಿನ ಸ್ವಾದ ಸವಿದ ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಪ್ರಗತಿಪರ ಯುವರೈತ ನವೀನ್ ನನ್ನು ಸನ್ಮಾನಿಸಿ ಪ್ರೋತ್ಸಾಹಿಸಿದರು.ವಿಜಯಪುರ ತಾಲೂಕಿನ ಕಗ್ಗೋಡ ಗ್ರಾಮದ ಪದವೀಧರ ಯುವ ಪ್ರಗತಿಪರ ರೈತ ನವೀನ ರಾವುತಪ್ಪ ಮಂಗಾನವರ ಮಂಗಳವಾರ ತಾವು ಬೆಳೆದ ಮಾವಿನೊಂದಿಗೆ ಸಚಿವ ಶಿವಾನಂದ ಪಾಟೀಲ ಅವರ ಭೇಟಿಗೆ…