ಗ್ರಾಮೀಣ ಸಮಸ್ಯೆಗಳು ಇನ್ನೂ ಮುಖ್ಯವಾಹಿಣಿಗೆ ಬಂದಿಲ್ಲ: ದಿನೇಶ ಅಮೀನಮಟ್ಟು ಆತಂಕ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 25:ಗ್ರಾಮೀಣ ಪ್ರದೇಶಗಳ ಅನೇಕ ಮೂಲಭೂತ ಸಮಸ್ಯೆಗಳನ್ನು ಗುರುತಿಸಿ, ಸಮಾಜದ ಸುವ್ಯವಸ್ಥೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ವ್ಯಕ್ತಿಗಳಲ್ಲಿ ರಫೀ ಭಂಡಾರಿ ಕೂಡ ಒಬ್ಬರಾಗಿದ್ದಾರೆ ಎಂದು ಬೆಂಗಳೂರಿನ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.ಇಲ್ಲಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ಪತ್ರಕರ್ತ ರಫೀ ಭಂಡಾರಿ ಅಭಿನಂದಾನ ಸಮಿತಿ ವಿಜಯಪುರ ಇವರ ಸಹಯೋಗದಲ್ಲಿ ರವಿವಾರ ಆಯೋಜಿಸಿದ್ದ “ರಫೀ ಭಂಡಾರಿ ಅವರ ವ್ಯಕ್ತಿತ್ವ ಮತ್ತು ಪತ್ರಿಕಾ ಸಾಧನೆ” ಅಭಿನಂದನಾ ಕೃತಿ ಬಿಡುಗಡೆ-ಸನ್ಮಾನ ಮತ್ತು ಮಹಿಳಾ ವಿಶ್ವವಿದ್ಯಾನಿಲಯದ…

Read More

ರಾಜ್ಯಪಾಲರು ಬಿಜೆಪಿ ಎಜೆಂಟ್: ಸಚಿವ ಎಂ. ಬಿ. ಪಾಟೀಲ ಆರೋಪ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 25 :ಕರ್ನಾಟಕ ರಾಜ್ಯಪಾಲರು ಕೇಂದ್ರ ಸರ್ಕಾರದ ಎಜೆಂಟ್ ರಂತೆ ವರ್ತಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಆರೋಪಿಸಿದ್ದಾರೆ.ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯಪಾಲರು ಸರ್ಕಾರದ ಧ್ವನಿ, ಸರ್ಕಾರ ಏನು ಕೊಡುತ್ತದೆ. ಅದನ್ನು ಓದುತ್ತಾರೆ. ಇದೇ ರಾಜ್ಯಪಾಲರು ಹಿಂದೆ ಓದಿಲ್ಲವಾ? ಎಂದು ಸಚಿವ ಎಂ. ಬಿ. ಪಾಟೀಲ ಅವರು ರಾಜ್ಯಪಾಲರ ನಡೆಯನ್ನು ಪ್ರಶ್ನೆ ಮಾಡಿದ್ದಾರೆ.ವಿಧಾನಸೌಧದಲ್ಲಿ ನಡೆಯುತ್ತಿರುವ ವಿಶೇಷ ಸದನ ನಡೆಯುವ ವೇಳೆ ಕೇಂದ್ರ ಸರ್ಕಾರದ ವಿರುದ್ದ ಟೀಕೆ…

Read More

ಅರ್ಹ ಮತದಾರರು ಕಡ್ಡಾಯವಾಗಿ ಮತದಾನದ ಹಕ್ಕು ಚಲಾಯಿಸಲು ನ್ಯಾಯಾಧೀಶ ಹರೀಶ ಎ. ಕರೆ

ಸಪ್ತಸಾಗರ ವಾರ್ತೆ, ವಿಜಯಪುರ, ಜ.25:ದೇಶದ ಅಭ್ಯುದಯಕ್ಕೆ ಮತದಾನದಿಂದ ಯಾರೂ ಹೊರಗುಳಿಯದೇ ಎಲ್ಲ ಅರ್ಹ ಮತದಾರರು ಸಂವಿಧಾನ ಕೊಡಮಾಡಿದ ಪವಿತ್ರವಾದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹರೀಶ ಎ ಅವರು ಕರೆ ನೀಡಿದರು.ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ನ್ಯಾಯಾಂಗ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಇವರ ಸಹಯೋಗದಲ್ಲಿ ಭಾನುವಾರ…

Read More

ಹೊರ್ತಿ ಗ್ರಾಮದ ಶಿವ ದೇವಾಲಯಕ್ಕೆಸ್ವಚ್ಚತೆಯ ಸ್ಪರ್ಶ

ಸಪ್ತಸಾಗರ ವಾರ್ತೆ, ವಿಜಯಪುರ 25. ಶತಮಾನಗಳ ಪರಂಪರೆಯ ಹೊರ್ತಿ ಗ್ರಾಮದ ಶಿವ ದೇವಾಲಯಕ್ಕೆಸ್ವಚ್ಚತೆಯ ಸ್ಪರ್ಶ ನೀಡಿದ ಗಾನಯೋಗಿ ಸಂಘದ ಸದಸ್ಯರು ಮತ್ತು ಸ್ಥಳೀಯರ ಕಾರ್ಯಕ್ಕೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೊರ್ತಿ ಗ್ರಾಮದಲ್ಲಿರುವ ಕ್ರಿ. ಶ. 11ನೇ ಶತಮಾನದ ಚಾಲುಕ್ಯರ ಕಾಲದ ಅಪರೂಪದ ಪ್ರಾಚೀನ ಶಿವ ದೇವಾಲಯವನ್ನು ಗಾನಯೋಗಿ ಸಂಘದ ಸದಸ್ಯರು, ಪದಾಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ಶುಕ್ರವಾರ ಸ್ವಚ್ಛಗೊಳಿಸಿದ್ದರು. ಎಲ್ಲರೂ…

Read More

ಜಿಲ್ಲಾ ಕ್ರೀಡಾಂಗಣಕ್ಕೆ ಜಿಲ್ಲಾಧಿಕಾರಿಗಳ ಭೇಟಿ; ಗಣರಾಜ್ಯೋತ್ಸವ ಸಿದ್ಧತೆ ಪರಿಶೀಲನೆ

ಸಪ್ತಸಾಗರ ವಾರ್ತೆ, ವಿಜಯಪುರ,ಜ.25: ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಭಾನುವಾರ ಸಂಜೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಗಣರಾಜ್ಯೋತ್ಸವ ಸಮಾರಂಭದ ಸಿದ್ಧತೆಗಳನ್ನು ಪರಿಶೀಲಿಸಿ,ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆ‌ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ,ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ,ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ,ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ಎಂ.ಎ.ಉಪಾಸೆ, ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ,ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೀರಯ್ಯ ಸಾಲಿಮಠ,ಆಹಾರ…

Read More

ಕಗ್ಗೋಡದಲ್ಲಿ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ಸತ್ಸಂಗ

ಸಪ್ತಸಾಗರ ವಾರ್ತೆ, ವಿಜಯಪುರ, ಜ 25:ವಿಶ್ವ ಹಿಂದೂ ಪರಿಷತ್ ಕರ್ನಾಟಕ ಉತ್ತರ ಪ್ರಾಂತ ವತಿಯಿಂದ ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗದಿಂದ ಎರಡು ದಿನದ ಸತ್ಸಂಗ ವರ್ಗವನ್ನು ಕಗ್ಗೋಡ ಗ್ರಾಮದ ರಾಮನಗೌಡ ಪಾಟೀಲ್ ಯತ್ನಾಳವರ ಗೋಶಾಲೆಯಲ್ಲಿ ನಡೆದಿದ್ದು, ಸುಮಾರು 120 ಜನರ ಶಿಕ್ಷ ವರ್ಗವನ್ನು ನಡೆಯಿತು.ಇವತ್ತು ಬೆಳಗ್ಗೆ 7:30ಕ್ಕೆ ಕಗ್ಗೋಡ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಕೀರ್ತಿನ ಭಜನೆವನ್ನು ಮಾಡುತ್ತಾ ಹಿಂದೂ ಧರ್ಮದ ಜನ ಜಾಗೃತಿ ಮಾಡಲಾಯಿತು.ಅನೇಕ ಮಹಾಪುರುಷರ ಭಜನೆ ಹಾಡುಗಳನ್ನು ಹೇಳಲಾಯಿತು. ಇದರಲ್ಲಿ ಕ್ಷೇತ್ರಿಯ ಸತ್ಸಂಗ ಪ್ರಮುಖರಾದ ಮಹಾಬಲೇಶ್ವರ…

Read More

ಉತ್ತರ ಕರ್ನಾಟಕದ ಪ್ರಮುಖ ಪ್ರವಾಸಿ ತಾಣ ಆಲಮಟ್ಟಿಯಲ್ಲಿದೋಣಿ ವಿಹಾರಕ್ಕೆ ಸಚಿವ ಶಿವಾನಂದ ಪಾಟೀಲ ಚಾಲನೆ

ಸಪ್ತಸಾಗರ ವಾರ್ತೆ, ವಿಜಯಪುರ, ಜ.24: ರಾಜ್ಯದ ಕೆಆರ್‍ಎಸ್ ನಂತರದ ಉತ್ತರ ಕರ್ನಾಟಕದ ಪ್ರಮುಖ ಪ್ರೇಕ್ಷಣೀಯ ಪ್ರವಾಸಿ ತಾಣವಾದ ಆಲಮಟ್ಟಿ ಸಿಲ್ವರ ಲೇಕ್‍ನಲ್ಲಿ ಆರಂಭಿಸಲಾದ ದೋಣಿ ವಿಹಾರಕ್ಕೆ ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಶನಿವಾರ ಚಾಲನೆ ನೀಡಿದರು.ಜಲಸಂಪನ್ಮೂಲ ಇಲಾಖೆ, ಕೃಷ್ಣಾ ಭಾಗ್ಯ ಜಲನಿಗಮದ ವತಿಯಿಂದ ಆಲಮಟ್ಟಿ ರಾಕ್ ಉದ್ಯಾನವನದಲ್ಲಿರುವ ಸಿಲ್ವರ್ ಲೇಕ್‍ನಲ್ಲಿ ಆರಂಭಿಸಲಾದ ದೋಣಿ ವಿಹಾರಕ್ಕೆ ಚಾಲನೆ ನೀಡಿದ ಅವರು, ಆಲಮಟ್ಟಿ ಪ್ರವಾಸ ತಾಣ ಬಹಳಷ್ಟು ಪ್ರವಾಸಿಗರಿಗೆ ಪ್ರೇಕ್ಷಣಿಯ…

Read More

ಚಾಲಕರ ಕಾರ್ಯ ಅನುಪಮ-ವಸೀಂಬಾಬಾ ಮುದ್ದೇಬಿಹಾಳ

ಸಪ್ತಸಾಗರ ವಾರ್ತೆ ವಿಜಯಪುರ, ಜ.24:ಚಾಲಕರಿಗೆ ನೈತಿಕ ಸ್ಥೈರ್ಯ ತುಂಬುವ ಹಾಗೂ ಅವರ ಜವಾಬ್ದಾರಿಯುತ ಸೇವೆಯನ್ನು ಗೌರವಿಸುವ ಉದ್ದೇಶದಿಂದ ಜನವರಿ 24ರಂದು ಚಾಲಕರ ದಿನ ಆಚರಣೆ ಮಾಡಲಾಗುತ್ತಿದ್ದು, ಪ್ರಯಾಣಿಕರ ಸುರಕ್ಷತೆಯೊಂದಿಗೆ ಪ್ರಯಾಣಿಕರ ನಂಬಿಕೆ ಗಳಿಸಿ, ಸೇವೆ ಸಲ್ಲಿಸುತ್ತಿರುವ ಚಾಲಕರ ಕಾರ್ಯ ಅತ್ಯಂತ ಮಹತ್ವದ್ದಾಗಿದ್ದು,ಅವರ ಕಾರ್ಯ ಜವಾಬ್ದಾರಿಯುತ ಮತ್ತು ಗೌರವಯುತ ಸೇವೆಯಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಂಬಾಬಾ ಮುದ್ದೇಬಿಹಾಳ ಅವರು ಹೇಳಿದರು.ಕೇಂದ್ರ ಬಸ್ ನಿಲ್ದಾಣದಲ್ಲಿ ಶನಿವಾರ ನಡೆದ ಚಾಲಕರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು, ಕರ್ತವ್ಯದ…

Read More

ಜ. 24 ಅಲೋಪಥಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 23: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿರುವ ನಗರ ಆರೋಗ್ಯ ಕೇಂದ್ರದಲ್ಲಿ ಅಲೋಪಥಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ನಾಳೆ ಜನೇವರಿ 24 ರಂದು ಶನಿವಾರ ನಡೆಯಲಿದೆ.ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಅಲೋಪಥಿ ಚಿಕಿತ್ಸೆಗಳಾದ ವೈದ್ಯಕೀಯ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸೆ, ಚಿಕ್ಕಮಕ್ಕಳ ಚಿಕಿತ್ಸೆ, ಚರ್ಮರೋಗ…

Read More

ಜಿಲ್ಲಾ ಮಾನವ ಅಭಿವೃದ್ಧಿ ವರದಿ 2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ 2031ಕ್ಕೆ ಸಮಗ್ರ ಹಾಗೂ ನಿಖರ ದತ್ತಾಂಶಗಳನ್ನು ಕಾಲಮಿತಿಯೊಳಗೆ ಒದಗಿಸಿ: ಜಿಲ್ಲಾಧಿಕಾರಿ ಡಾ. ಆನಂದ ಕೆ. ಕರೆ

ಸಪ್ತಸಾಗರ ವಾರ್ತೆ, ವಿಜಯಪುರ, ಜ.23 : ಜಿಲ್ಲಾ ಮಾನವ ಅಭಿವೃದ್ಧಿ ವರದಿ -2025 ಹಾಗೂ ಸಮಗ್ರ ಮತ್ತು ಸುಸ್ಥಿರ ಜಿಲ್ಲಾ ಅಭಿವೃದ್ಧಿ ಯೋಜನೆ -2031 ವರದಿಯ ತಯಾರಿಕೆ ಕುರಿತು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸರಿಯಾದ ಸಮಗ್ರ ಹಾಗೂ ನಿಖರ ದತ್ತಾಂಶ ಮಾಹಿತಿನ್ನು ಕಾಲ‌ಮಿತಿಯೊಳಗೆ ಒದಗಿಸುವ ಮೂಲಕ ಉತ್ತಮ ಫಲಿತಾಂಶಕ್ಕೆ ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಹೇಳಿದರು.ಶುಕ್ರವಾರ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಮಾನವ ಅಭಿವೃದ್ಧಿ ವರದಿ -2025 ಹಾಗೂ ಸಮಗ್ರ…

Read More