ಮಹಿಳಾ ವಿವಿ ಘಟಿಕೋತ್ಸವ: ಗೌರವ ಡಾಕ್ಟರೇಟ್ ಪ್ರದಾನ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 21:ನಗರದಲ್ಲಿ ಮಂಗಳವಾರ ನಡೆದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವದಲ್ಲಿ ಪಾರ್ವತೆವ್ವ ಸಿದ್ದಪ್ಪ ಹೊಂಗಲ್, ಡಾ.ಸಂಗೀತಾ ಎನ್ ಕಟ್ಟಿಮನಿ ಹಾಗೂ ಆಶಾದೇವಿ ಜಗದೀಶ ಗುಡಗುಂಟಿ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.ಚಿತ್ರದಲ್ಲಿ ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಉಜ್ವಲಾ ಚಕ್ರದೇವ್ ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಬಿ.ಎಲ್.ಲಕ್ಕಣ್ಣವರ, ಮತ್ತಿತರರು ಇದ್ದಾರೆ.

Read More

“ಓದುತ್ತಿರುವಾಗಲೇ ಗಳಿಕೆ” ಎಂಬ ವಿನೂತನ ಕಾರ್ಯಕ್ರಮ ಜಾರಿ-ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 21: ಮುಂಬರುವ ದಿನಗಳಲ್ಲಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ “ಓದುತ್ತಿರುವಾಗಲೇ ಗಳಿಕೆ” ಎಂಬ ವಿನೂತನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿನಿಯರಿಗೆ ಬಯೋಡೀಸೆಲ್ ಘಟಕ, ಕಾಗದ ಮರುಬಳಕೆ ಘಟಕ, ಅನನ್ಯ ಆಹಾರ ಸಂಸ್ಕರಣಾ ಕೇಂದ್ರ ಮತ್ತು ಗ್ರೀನ್‌ಹೌಸ್‌ಗಳಲ್ಲಿ ವಿವಿಧ ಕೌಶಲಗಳನ್ನು ಕಲಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ, ಅವರು ಘೋಷಿಸಿದರು.ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 17ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಿವಿಯ ಪ್ರಗತಿ ವರದಿ ಮಂಡಿಸಿದ ಅವರು, ಕೌಶಲ್ಯ ಮಹಿಳಾ ತಂತ್ರಜ್ಞಾನ ಪಾರ್ಕ್ ಮೂಲಕ…

Read More

ಸಿದ್ಧಸಿರಿ ನೂತನ ಪದಾಧಿಕಾರಿಗಳ ಪದಗ್ರಹಣ: ರಾಮನಗೌಡ ಪಾಟೀಲ ಯತ್ನಾಳ ಅಧ್ಯಕ್ಷ, ಪ್ರಭುಗೌಡ ದೇಸಾಯಿ ಉಪಾಧ್ಯಕ್ಷ

ಸಪ್ತಸಾಗರ ವಾರ್ತೆ, ವಿಜಯಪುರ, ಏ. 20:ಸಿದ್ಧಸಿರಿ ಮಲ್ಟಿ-ಸ್ಟೇಟ್ ಮಲ್ಟಿ-ಪರ್ಪಸ್ ಕೋ ಆಪರೇಟಿವ್ ಸೊಸೈಟಿ.ಲಿ ವಿಜಯಪುರ ದ ನೂತನ ಅಧ್ಯಕ್ಷರಾಗಿ ರಾಮನಗೌಡ ಬ.ಪಾಟೀಲ ಯತ್ನಾಳ ಹಾಗೂ ಉಪಾಧ್ಯಕ್ಷರಾಗಿ ಪ್ರಭುಗೌಡ ದೇಸಾಯಿ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.5 ವರ್ಷಗಳ ಅವಧಿಗಾಗಿ ಈಚೆಗೆ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದರು. ನಗರ ಶಾಸಕರು ಹಾಗೂ ನಿರ್ದೇಶಕ ಬಸನಗೌಡ ಪಾಟೀಲ ಯತ್ನಾಳ, ನಿರ್ದೇಶಕರಾದ ಸಂಗನಬಸಪ್ಪ ಸಜ್ಜನ, ಶಿವಾನಂದ ಅಣೆಪ್ಪನವರ, ಬಸಯ್ಯ ಹಿರೇಮಠ, ಸಾಯಿಬಾಬಾ ಸಿಂದಗೇರಿ, ಜಗದೀಶ…

Read More

ಆಲಮಟ್ಟಿಉದ್ಯಾನವನಕ್ಕೆನೂತನಬಸ್: ಸಂಚಾರಕ್ಕೆಜಿಲ್ಲಾಉಸ್ತುವಾರಿಸಚಿವರಿಂದಚಾಲನೆ

ಸಪ್ತಸಾಗರ ವಾರ್ತೆ,ವಿಜಯಪುರ ಏ. 20 : ವಿಜಯಪುರದಿಂದ ಆಲಮಟ್ಟಿ ಉದ್ಯಾನವನಕ್ಕೆ ಹೊಸದಾಗಿ ಆರಂಭಗೊಂಡ ನೂತನ ಸಾರಿಗೆ ಬಸ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.‌ಎಂ.ಬಿ. ಪಾಟೀಲ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದಿಂದಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ ಪಾಟೀಲ ಇವರ ಸೂಚನೆಯಂತೆ ವಿಜಯಪುರದಿಂದ ಜಿಲ್ಲೆಯ‌ ಪ್ರೇಕ್ಷಣೀಯ ಸ್ಥಳ ಆಲಮಟ್ಟಿ ಉದ್ಯಾನವನಕ್ಕೆ ನೂತನ ಸಾರಿಗೆಯನ್ನು ಆರಂಭಗೊಳಿಸಲಾಗಿದೆ.ಈ ಸಾರಿಗೆಯು ಪ್ರತಿದಿನ ಆರು ಸರತಿಯಲ್ಲಿ ವಿಜಯಪುರದಿಂದ ಆಲಮಟ್ಟಿ ಉದ್ಯಾನವನಕ್ಕೆ ಹೋಗಿ…

Read More

ಬಸವಜ್ಯೋತಿ ಪಾದಯಾತ್ರೆಗೆ ಭವ್ಯ ಸ್ವಾಗತ

ಸಪ್ತಸಾಗರ ವಾರ್ತೆ ವಿಜಯಪುರ, ಏ. 20:ಜಗಜ್ಯೋತಿ ಬಸವೇಶ್ವರರ ಜಯಂತಿಯ ಶುಭ ಸಂದರ್ಭದಲ್ಲಿ, ಬಸವನ ಬಾಗೇವಾಡಿಯಿಂದ ವಿಜಯಪುರದ ಬಸವೇಶ್ವರ ವೃತ್ತದವರೆಗೆ ಹಮ್ಮಿಕೊಳ್ಳಲಾಗಿದ್ದ ಭವ್ಯ ಬಸವಜ್ಯೋತಿ ಪಾದಯಾತ್ರೆಯನ್ನು ನಗರದ ಬಸವ ಸಮಿತಿ ಹಾಗೂ ಸಿದ್ದೇಶ್ವರ ಬ್ಯಾಂಕ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಮತ್ತು ಗಣ್ಯರು ಸ್ವಾಗತಿಸಿದರು.ಬೆಂಗಳೂರಿನಲ್ಲಿ ನೆಲೆಸಿರುವ ವಿಜಯಪುರ ಜಿಲ್ಲೆಯ ಹಂದಿಗನೂರ ಗ್ರಾಮದ ಬಿ. ಬಿ. ಪಾಟೀಲ ಅವರ ನೇತೃತ್ವದಲ್ಲಿ ಹಾಗೂ ವಿಜಯಪುರ ಸೈಕ್ಲಿಂಗ್ ಗ್ರೂಪ್ ಸಹಯೋಗದಲ್ಲಿ ಈ ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು. ನಿನ್ನೆ ರಾತ್ರಿ ಬಸವನ ಬಾಗೇವಾಡಿಯಿಂದ ಆರಂಭಗೊಂಡ ಈ ಪಾದಯಾತ್ರೆಯು…

Read More

ಮೀನುಗಾರಿಕೆ ಉಚಿತ ಕಿಟ್ ಮತ್ತು ಲೈಫ್ ಜಾಕೇಟುಗಳ ವಿತರಣೆ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 20:ಬಬಲೇಶ್ವರ ಮತಕ್ಷೇತ್ರದ ನಾನಾ ಫಲಾನುಭವಿಗಳಿಗೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಸೋಮವಾರ ಮೀನುಗಾರಿಕೆ ಉಚಿತ ಕಿಟ್ ಮತ್ತು ಲೈಫ್ ಜಾಕೇಟುಗಳನ್ನು ವಿತರಿಸಿದರು.ರಾಜ್ಯ ವಲಯ ಮತ್ತು ಜಿಲ್ಲಾ ಪಂಚಾಯಿತಿ ಯೋಜನೆಯಡಿ ಒಟ್ಟು 61 ಜನ ಫಲಾನುಭವಿಗಳು ಆಯ್ಕೆಯಾಗಿದ್ದು, ಅವರಲ್ಲಿ 11 ಫಲಾನುಭವಿಗಳಿಗೆ ಸಚಿವರು ಸಾಂಕೇತಿಕವಾಗಿ ಕಿಟ್ ಮತ್ತು ಲೈಫ್ ಜಾಕೇಟ್ ವಿತರಿಸಿದರು. ಈ ಯೋಜನೆಯಡಿ ಬಬಲೇಶ್ವರ ತಾಲೂಕಿನ ಕೃಷ್ಣಾ ನದಿಯಲ್ಲಿ ಮೀನುಗಾರಿಕೆ ನಡೆಸುವ ಜೈನಾಪುರ,…

Read More

ಕಾಯಕ, ದಾಸೋಹ ಬಸವಣ್ಣನವರ ಶ್ರೇಷ್ಠ ಕೊಡುಗೆ-ಸಂತೋಷ ಬಂಡೆ

ಸಪ್ತಸಾಗರ ವಾರ್ತೆ,ಇಂಡಿ, ಏ. 20: ಬಸವಣ್ಣನವರು ವಚನಗಳ ಮೂಲಕ ಸ್ವಾಸ್ಥ್ಯ ಸಮಾಜಕ್ಕೆ ಬೇಕಾದ ನೀತಿಸೂತ್ರಗಳ ಸಂದೇಶ ನೀಡಿದ್ದು, ಅವು ಇಡೀ ಜಗತ್ತಿನ ಮನುಕುಲಕ್ಕೆ ನೀಡಿದಂತಹ ಜೀವನ ಸಂವಿಧಾನ, ಸಾಮಾಜಿಕ ನೀತಿ ಸಂಹಿತೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಸೋಮವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಬಸವ ಜಯಂತಿ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಕಾಯಕ, ದಾಸೋಹ ತತ್ವಗಳು ಬಸವಣ್ಣನವರ ಶ್ರೇಷ್ಠ ಕೊಡುಗೆಗಳು. ಅವರ ಶರಣ ಸಂಸ್ಕೃತಿ ಇಡೀ ವಿಶ್ವಕ್ಕೆ ಆದರ್ಶ ಮಾನವ ಸಂಸ್ಕೃತಿಯಾಗಿದೆ. ನುಡಿದಂತೆ…

Read More

ಯತ್ನಾಳ ಹೊಸ ಪಕ್ಷ ಸ್ಥಾಪನೆ ಇಂಗಿತ: ಬಿಜೆಪಿಯಲ್ಲಿ ಬೇಗುದಿ

ರುದ್ರಪ್ಪ ಆಸಂಗಿಸಪ್ತಸಾಗರ ವಾರ್ತೆ,ವಿಜಯಪುರ, ಏ. 20:ಬಿಜೆಪಿ ಉಚ್ಚಾಟಿತ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೊಸ ರಾಜಕೀಯ ಪಕ್ಷ ಹುಟ್ಟು ಹಾಕುವುದಾಗಿ ಇಂಗಿತ ವ್ಯಕ್ತ ಪಡಿಸಿದ್ದಾರೆ.ಈ ಹಿಂದೆಯೂ ಹೊಸ ಪಕ್ಷ ಕಟ್ಟುವುದಾಗಿಯೂ ಹೇಳಿದ್ದರು. ಇದೀಗ ಮತ್ತೆ ಹೊಸ ಪಕ್ಷ ಹುಟ್ಟು ಹಾಕುವ ಮನದ ಇಂಗಿತನ್ನು ಬಿಚ್ಚಿಟ್ಟಿದ್ದಾರೆ.ಬಸವ ಜಯಂತಿ ಆಚರಣೆ ಶುಭ ಸಂದರ್ಭದಲ್ಲಿ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿ, ಯತ್ನಾಳ ಅವರು ಹೊಸ ಪಕ್ಷ ಕಟ್ಟುವ ವಿಚಾರ ಬಹಿರಂಗ ಪಡಿಸಿದ್ದಾರೆ.ಯತ್ನಾಳ ಈ ಬಾರಿ ನೂತನ ಪಕ್ಷ ಕಟ್ಟುವ…

Read More

ಏ. 21ರಂದು ಅಕ್ಕಮಹಾದೇವಿ ವಿವಿಯ 17 ನೇ ಘಟಿಕೋತ್ಸವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿ

ಸಪ್ತಸಾಗರ ವಾರ್ತೆ,ವಿಜಯಪುರ ಏ, 20: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 17ನೇ ಘಟಿಕೋತ್ಸವ ಏ. 21ರಂದು ಮಂಗಳವಾರ ಬೆಳಿಗ್ಗೆ 11.30ಕ್ಕೆ ವಿವಿಯ ಜ್ಞಾನಶಕ್ತಿ ಆವರಣದ ಕ್ರೀಡಾಂಗಣದಲ್ಲಿ ವಿಶೇಷವಾಗಿ ನಿರ್ಮಿಸಿರುವ ಸಭಾಂಗಣದಲ್ಲಿ ನಡೆಯಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪಾಲ್ಗೊಳ್ಳಲಿದ್ದಾರೆ ಎಂದು ಕುಲಪತಿ ಡಾ. ವಿಜಯಾ ಕೋರಿಶೆಟ್ಟಿ ಹೇಳಿದರು.‌ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಅತಿಥಿಗಳಾಗಿ ಮುಂಬೈನ ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಉಜ್ವಲಾ ಚಕ್ರದೇವ್ ಅವರು ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ…

Read More

ಬಸವಣ್ಣನವರ ತತ್ವ ಆದರ್ಶಗಳು ಎಂದೆಂದಿಗೂ ಪ್ರಸ್ತುತ-ಯತ್ನಾಳ

ಸಪ್ತಸಾಗರ ವಾರ್ತೆ,ವಿಜಯಪುರ, ಏ. 20:ವಚನಗಳ ಮೂಲಕ ಅನಿಷ್ಟ ಪದ್ದತಿಗಳನ್ನು ತೊಲಗಿಸಿ ಮಹಾ ಕ್ರಾಂತಿ ಮಾಡಿದವರು ಕ್ರಾಂತಿಯೋಗಿ ಬಸವಣ್ಣನವರು ಎಂದು ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳರು ಹೇಳಿದರು.ನಗರದ ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ಸೋಮವಾರ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಮಾತನಾಡಿದ ಅವರು, ಸಮಾಜ ಸುಧಾಕರಾದ ಬಸವಣ್ಣನವರ ತತ್ವ ಆದರ್ಶಗಳು ಎಂದೆಂದಿಗೂ ಪ್ರಸ್ತುತ ಎಂದರು.ಮೇಯರ್ ಎಂ.ಎಸ್.ಕರಡಿ, ಸಿದ್ದೇಶ್ವರ ಸಂಸ್ಥೆ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಚೇರಮನ್ ಬಸಯ್ಯ ಹಿರೇಮಠ, ನಿರ್ದೇಶಕರಾದ ಎಸ್.ಎಚ್.ನಾಡಗೌಡ,…

Read More