ವೋಟ್ ಚೋರಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಸಪ್ತಸಾಗರ ವಾರ್ತೆ ವಿಜಯಪುರ, ಅ. 13:ವೋಟ್ ಚೋರಿ ವಿರುದ್ಧ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆದ ಪ್ರಕರಣ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಮೇಶ ಗುಬ್ಬೇವಾಡ ಅವರ ನೇತೃತ್ವದಲ್ಲಿ ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹಣೆ ಹಾಗೂ ಮತದಾರರ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರ…

Read More

ಕುಮಾರಿ ಶಿಫಾ ಜಮಾದಾರಗೆ ಸಚಿವ ಶಿವಾನಂದ ಪಾಟೀಲ ಸನ್ಮಾನ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 13: ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಎಂಟು ದಿನಗಳ ಕಾಲ ನಡೆದ ವಿಶ್ವ ಯುವ ಶೃಂಗ ಸಭೆಯಲ್ಲಿ ಭಾರತ ದೇಶದಿಂದ ಏಕೈಕ ಯುವ ಪ್ರತಿನಿಧಿಯಾಗಿ ಭಾಗವಹಿಸಿ `ವಿಶ್ವಶಾಂತಿ ಅಗತ್ಯತೆ ಹಾಗೂ ವಿಶ್ವಶಾಂತಿಯಲ್ಲಿ ಭಾರತದ ಪಾತ್ರ’ ಕುರಿತು ಮಹತ್ವಪೂರ್ಣ ಸಂದೇಶ ಸಾರಿ ವಿಜಯಪುರದ ಕೀರ್ತಿಯನ್ನು ಹೆಚ್ಚಿಸಿದ ಕುಮಾರಿ ಶಿಫಾ ಜಮಾದಾರ ಅವರನ್ನು ಕೃಷಿ ಉತ್ಪನ್ನ ಮಾರುಕಟ್ಟೆ, ಜವಳಿ, ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ ತಮ್ಮ ಗೃಹ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ…

Read More

ತ್ವರಿತವಾಗಿ ಬೆಳೆ ಹಾನಿ ಪರಿಹಾರ ನೀಡಲು ಬಿಜೆಪಿ ರೈತ ಮೋರ್ಚಾ ನಿಯೋಗ ಜಿಲ್ಲಾಧಿಕಾರಿಗಳಿಗೆ ಮನವಿ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 13:ಜಿಲ್ಲಾ ಬಿಜೆಪಿ ರೈತ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಭೇಟಿ ಮಾಡಿ ಬೆಳೆ ಪರಿಹಾರವನ್ನು ಕೂಡಲೇ ನೀಡಬೇಕೆಂದು ಸೋಮವಾರ ಸಂಜೆ ಮನವಿ ಸಲ್ಲಿಸಲಾಯಿತು.ರಾಜ್ಯದಲ್ಲಿ ಯಾವುದೇ ಜಿಲ್ಲೆಯಲ್ಲಿ ಆಗದಷ್ಟು ವಾಡಿಕೆಗಿಂತ ಹೆಚ್ಚಿನ ಮಳೆ ವಿಜಯವುರ ಜಿಲ್ಲೆಯಲ್ಲಿ ಆಗಿದೆ ವರದಿಗಳ ಪ್ರಕಾರ ವಾಡಿಕೆ ಗಿಂತ ಶೇ 150 ಕ್ಕೂ ಹೆಚ್ಚು ಮಳೆಯಾಗಿದೆ ಎಂದು ತಿಳಿದು ಬಂದಿರುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ 7.50 ಲಕ್ಷ ಹೆಕ್ಟರ್ ಪ್ರದೇಶದ ಬೆಳೆ ಸಂಪೂರ್ಣ ನಾಶವಾಗಿದೆ. ಮೂರು…

Read More

ಡಾಗ್ ಶೆಲ್ಟರ್ ನಿರ್ಮಾಣಕ್ಕೆ ಕ್ರಮ ವಹಿಸಿ : ಜಿಲ್ಲಾಧಿಕಾರಿ ಡಾ.ಆನಂದ ಕೆ. ಸೂಚನೆ

ಸಪ್ತಸಾಗರ ವಾರ್ತೆ, ವಿಜಯಪುರ, ಅ.10: ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಬೀದಿ ನಾಯಿಗಳಿಗೆ ಆಶ್ರಯ ಒದಗಿಸಲು ಬುರಾಣಪುರದಲ್ಲಿ ಕಾಯ್ದಿರಿಸಿದ ಎರಡು ಎಕರೆ ಜಾಗದಲ್ಲಿ ಡಾಗ್ ಶೆಲ್ಟರ್ ನಿರ್ಮಾಣಕ್ಕಾಗಿ ನೀಲ ನಕ್ಷೆ ತಯಾರಿಸಿ ಸಲ್ಲಿಸುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಸೂಚನೆ ನೀಡಿದ್ದಾರೆ.ಸೋಮವಾರ ನಗರದ ಬುರಾಣಪುರದಲ್ಲಿರುವ ಗೋಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಡಾಗ್ ಶೆಲ್ಟರ್ ನಿರ್ಮಾಣಕ್ಕೆ ಸೂಚನೆ ನೀಡಿ, ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ಕಾಳಜಿಯಿಂದ ನೋಡಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ…

Read More

ನಿವೃತ್ತ ಸರಕಾರಿ ನೌಕರರ ಸೇವೆಗಾಗಿ ಸದಾಸಿದ್ದ – ಅಬ್ದುಲ್ ರಹಿಮ್ ಖಾಜಿ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 12:ನಿವೃತ್ತ ಸರ್ಕಾರಿ ನೌಕರರ ಸೇವೆಗೆ ನಾನು ಸದಾ ಬದ್ಧನಾಗಿರುವೆ ಎಂದು ರಾಜ್ಯ ಸರಕಾರಿ ನಿವೃತ್ತ ಮುಸ್ಲಿಂ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಅಬ್ದುಲರಹಿಮ್ ಖಾಜಿ ಹೇಳಿದರು.ನಗರದ ಯಾಸೀನ್ ಮಸೀದ್ ಹಿಂದುಗಡೆ ಇರುವ ನ್ಯೂ ಲೈಫ್ ಪ್ರೀ ಪ್ರೈಮರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ನಿವೃತ್ತ ಸರ್ಕಾರಿ ನೌಕರರ ಸಭೆಯಲ್ಲಿ ಅವರು ಮಾತನಾಡಿದರು.ನಿವೃತ್ತ ಸರಕಾರಿ ನೌಕರರ ಸಮಸ್ಯೆಗಳ ಕುರಿತು ವಿಶೇಷವಾಗಿ ಚರ್ಚಿಸಿ ವಿಜಯಪುರ ಜಿಲ್ಲೆಯ ನಿವೃತ್ತ ನೌಕರರ ಸೇವೆಗಾಗಿ ನಾನು ಸದಾ ಸಿದ್ದ. ಆನ್‌ಲೈನ್ ಯುಗದಲ್ಲಿ ಪ್ರತಿ…

Read More

ಅ. 14ರಂದು ಧಮ್ಮ ಚಕ್ರ ಪರಿವರ್ತನ ದಿನ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 12 : ಶಾಂತಿ, ಸದ್ಭಾವನೆಯನ್ನು ಅರಳಿಸುವುದೇ ಬೌದ್ಧ ಧರ್ಮದ ದಿವ್ಯ ಸಂದೇಶ ಹಾಗೂ ಉದ್ದೇಶವಾಗಿದೆ. ಈ ಕಾರ್ಯವನ್ನಿರಿಸಿಕೊಂಡು ಅ.೧೪ ರಂದು ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಧಮ್ಮಚಕ್ರ ಪರಿವರ್ತನ ದಿನ ಹಾಗೂ ವರ್ಷಾವಾಸ ಸಮಾರೋಪ ಕಾರ್ಯಕ್ರಮ, ಧಮ್ಮ ರಥಯಾತ್ರೆ ನಡೆಯಲಿದೆ ಎಂದು ಬೌದ್ಧ ವಿಹಾರ ನಿರ್ಮಾಣ ಸಮಿತಿ ಗೌರವಾಧ್ಯಕ್ಷ, ಝೆನ್ ಮಾಸ್ಟರ್ ಡಾ. ಶಾಕು ಬೋಧಿಧಮ್ಮ ಹೇಳಿದರು.ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು, ಭಗವಾನ ಬುದ್ಧರು ಸಾರಾನಾಥದಲ್ಲಿ ಧರ್ಮೋಪದೇಶ ಮಾಡುವ ಮೂಲಕ ಧಮ್ಮಚಕ್ರವನ್ನು ಸ್ಥಾಪಿಸಿದರು, ಸಾಮ್ರಾಟ…

Read More

ಫಲಾನುಭವಿಗಳಿಗೆ ವಾಹನ ವಿತರಿಸಿದ ಸಚಿವ ಶಿವಾನಂದ ಪಾಟೀಲ

ಸಪ್ತಸಾಗರ ವಾರ್ತೆ, ವಿಜಯಪುರ, ಅ. 12 : ತಮ್ಮ ತವರು ಕ್ಷೇತ್ರ ಬಸವನಬಾಗೇವಾಡಿ ವಿಧಾನಸಭೆ ವ್ಯಾಪ್ತಿಯ ವಿವಿಧ ಫಲಾನುಭವಿಗಳಿಗೆ ವಿವಿಧ ಇಲಾಖೆಗಳ ಯೋಜನೆ ಅಡಿಯಲ್ಲಿ ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ವಾಹನಗಳನ್ನು ವಿತರಿಸಿದರು.ನಗರದಲ್ಲಿರುವ ಗೃಹ ಕಛೇರಿಯಲ್ಲಿ ಭಾನುವಾರ ಮೀನುಗಾರಿಕೆ ಇಲಾಖೆಯಿಂದ ನಿಡಗುಂದಿ ತಾಲೂಕಿನ ಅರಳದಿನ್ನಿ ಗ್ರಾಮದ ಮಹಾಂತೇಶ ವಿಠ್ಠಲ ಧನವೆ ಇವರಿಗೆ ಮಾರುಕಟ್ಟೆಗೆ ಮೀನು ಸಾಗಾಟಕ್ಕೆ ಸಚಿವರಾದ ಶಿವಾನಂದ ಪಾಟೀಲ ವಾಹನ ವಿತರಿಸಿದರು.2025-26 ನೇ ಸಾಲಿನಲ್ಲಿ ಮೀನು ಮಾರುಕಟ್ಟೆ…

Read More

ವಿಜಯಪುರ ಜಿಲ್ಲೆಯಲ್ಲಿ ಹಲವೆಡೆ ಭೂಕಂಪನ

ಸಪ್ತಸಾಗರ ವಾರ್ತೆ ,ವಿಜಯಪುರ,ಅ.ll:ಜಿಲ್ಲೆಯ ತಿಕೋಟ ಹಾಗೂ ವಿಜಯಪುರ ತಾಲೂಕಿನ ಹಲವೆಡೆ ಜನರಿಗೆ ಭೂಕಂಪನದ ಅನುಭವವಾಗಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.ಹೊನ್ನುಟಗಿ, ಕವಲಗಿ, ಕಗ್ಗೋಡ, ಮಧಬಾವಿ, ದ್ಯಾಬೇರಿ ಭಾಗಗಳು ಸೇರಿದಂತೆ, ತಿಕೋಟ ತಾಲೂಕಿನ ಹಲವೆಡೆ ಭೂಮಿ ಕಂಪಿಸಿದೆ.ಶುಕ್ರವಾರ ರಾತ್ರಿ 10:01 ಕ್ಕೆ ಭೂಕಂಪನ ಅನುಭವ ಆಗಿದೆ.ಭಾರೀ ಸದ್ದಿನೊಂದಿಗೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ವಿಜಯಪುರ ಗ್ರಾಮೀಣ ಭಾಗದ 12 ಕಿ.ಮೀ ಸುತ್ತಮುತ್ತ ಭೂಕಂಪನದ ಅನುಭವ ಆಗಿದೆ. ಭೂಕಂಪನ ಆಪ್‌ಗಳಲ್ಲೂ ಭೂಕಂಪನ ತೀವ್ರತೆ ದಾಖಲಾಗಿದೆ. 2.8 ರಷ್ಟು ಭೂಕಂಪನದ ತೀವ್ರತೆ ದಾಖಲಾಗಿದ್ದು, ಮೇಲಿಂದ…

Read More

ಆರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕು-ಮಚಾಡೋ

ಸಪ್ತಸಾಗರ ವಾರ್ತೆ,ವಿಜಯಪುರ, ಅ. 11: ಸಮುದಾಯಗಳನ್ನು ಪೀಡಿಸುವ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕಾಗಿ ಒಟ್ಟಾಗಿ ಕೆಲಸ ಮಾಡಬೇಕು ಎಂದು ಬ್ರೆಜಿಲ್ ನ ಸಾ ಪೌಲೊ ವಿಶ್ವವಿದ್ಯಾಲಯದ ಶರೀರ ಕ್ರಿಯಾ ಶಾಸ್ತ್ರ ವಿಭಾಗದ ಸಲಹೆಗಾರ ಪ್ರೊ. ಬೆನೆಡಿಟೊ ಎಚ್. ಮಚಾಡೊ ಹೇಳಿದ್ದಾರೆ.ಗುರುವಾರ ತಮ್ಮ ಪತ್ನಿ ಮತ್ತು ತಮ್ಮದೇ ವಿವಿಯ ಔಷಧ ರಸಾಯನಶಾಸ್ತ್ರ ವಿಭಾಗದ ನಿಕಟಪೂರ್ವ ಪ್ರಾಧ್ಯಾಪಕಿ ಪ್ರೊ. ಲೂಸಿಯಾನ್ ಎಂ. ಬೆನಧ್ಯಾಕ್ ಅವರ ಜೊತೆ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ನಗರದ ಬಿ.ಎಲ್.ಡಿ.ಇ ಸಂಸ್ಶೆಯ ಶ್ರೀ ಸಂಗನಬಸವ ಮಹಾಸ್ವಾಮೀಜಿ ಕಾಲೇಜ್ ಆಫ್…

Read More

ಜನಕಲ್ಯಾಣ ಸೇವೆಗಳು ಅರ್ಹರನ್ನು ತಲುಪಲಿ: ಸಚಿವ ಶಿವಾನಂದ ಪಾಟೀಲ

ಸಪ್ತಸಾಗರ ವಾರ್ತೆ,ಬಸವನಬಾಗೇವಾಡಿ, ಅ. 11:ಪ್ರಸಕ್ತ ಸಂದರ್ಭದಲ್ಲಿ ಬಡ ಜನರ ಕಲ್ಯಾಣಕ್ಕೆ ಸರ್ಕಾರ ಅನೇಕ ಸೇವೆಗಳನ್ನು ಒದಗಿಸುತ್ತಿದ್ದು, ಅರ್ಹರಿಗೆ ತಲುಪಬೇಕಿದೆ. ಇದರ ಭಾಗವಾಗಿ ಜನರ ಆರೋಗ್ಯ ಸೇವೆಗಾಗಿ ಇ-ಶ್ರಮ ಕಾರ್ಡ್ ಹಾಗೂ ಆಯುಷ್ಮಾನ್ ಭಾರತ ಕಾರ್ಡ್ ವಿತರಣೆ ಶಿಬಿರ ಹಾಗೂ ಉಚಿತ ನೋಂದಣಿ ಕಾರ್ಯ ನಡೆಯುತ್ತಿದೆ. ಅರ್ಹರಿಗೆ ಸರ್ಕಾರಿ ಸೌಲಭ್ಯ ತಲುಪಿಸುವ ಕೆಲಸವನ್ನು ರಾಷ್ಟ್ರೀಯ ಬಸವ ಸೈನ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಶನಿವಾರ ಪಟ್ಟಣದ ಇಂಗಳೇಶ್ವರ…

Read More