ಸಪ್ತಸಾಗರ ವಾರ್ತೆ, ವಿಜಯಪುರ, ಜು. 10:
ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆ ಶ್ರಮಿಸಿದ ಮಹಾನ್ ಶರಣರಾಗಿದ್ದಾರೆ. ಅವರು ವಚನಗಳು ಹಾಗೂ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪಗಳಾಗಿವೆ ಎಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.
ಜಿಲ್ಲೆಯ ಬಸವನ ಬಾಗೇವಾಡಿ
ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ನಡೆದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಹಡಪದ ಅಪ್ಪಣ್ಣ ಅವರು ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ಕಂದಾಚಾರ, ಮೂಢನಂಬಿಕೆ ವಿರುದ್ಧ ಹೋರಾಡಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ತಮ್ಮ ವಚನಗಳ ಮೂಲಕ ಶ್ರಮಿಸಿರುವುದು ಅವಿಸ್ಮರಣೀಯ ಎಂದರು.
ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಶರಣರು, ಸಂತರು, ದಾರ್ಶನಿಕರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಹಡಪದ ಅಪ್ಪಣ್ಣನವರು ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಕಾಯಕ ತತ್ವದಡಿ ಬದುಕು ರೂಪಿಸಿಕೊಳ್ಳುವುದೇ ಶರಣ ಆಶಯವಾಗಿತ್ತು. ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಡಪದ ಅಪ್ಪಣ್ಣನವರ ಜನಿಸಿದ ಮಸಬಿನಾಳ ಗ್ರಾಮವನ್ನು ಸೇರ್ಪಡೆ ಮಾಡಿದ್ದು ಸಂತಸದ ವಿಷಯ. ಕೂಡಲೇ ಮಸಬಿನಾಳದಲ್ಲಿ ಹಡಪದ ಅಪ್ಪಣ್ಣನವರ ಜನ್ಮ ಸ್ಮಾರಕ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹಡಪದ ಸಮಾಜದ ಮುಖಂಡರಾದ ಗುರಲಿಂಗ ಹಡಪದ, ರಾಷ್ಟ್ರೀಯ ಬಸವಸೈನ್ಯದ ಮುಖಂಡ ಶ್ರೀಕಾಂತ ಕೊಟ್ರಶೆಟ್ಟಿ ಮಾತನಾಡಿದರು.
ರಾಷ್ಟ್ರೀಯ ಬಸವಸೈನ್ಯದ ತಾಲೂಕಾ ಅಧ್ಯಕ್ಷ ಸಂಜು ಬಿರಾದಾರ, ಹಡಪದ ಸಮಾಜದ ತಾಲೂಕ ಅಧ್ಯಕ್ಷ ಮಾಂತೇಶ ಹಡಪದ, ಸುನೀಲ ಚಿಕ್ಕೊಂಡ, ಮನ್ನಾನ ಶಾಬಾದಿ, ಅಪ್ಪು ಗಬ್ಬೂರ, ಜಟ್ಟಿಂಗರಾಯ ಮಾಲಗಾರ, ಮುತ್ತು ಡಂಬಳ, ಮಂಜು ಜಾಲಗೇರಿ, ಮಾಂತೇಶ ಹೆಬ್ಬಾಳ, ಮಹಾದೇವ ನಾಯ್ಕೋಡಿ, ನವೀನ ಬೇವನೂರ, ದಾನೇಶ ಬಡಿಗೇರ, ಸಂಗಮೇಶ ಜಾಲಗೇರಿ, ಮಲ್ಲು ಬನಾಸಿ, ಬಸವರಾಜ ಹಡಪದ, ನಾಗೇಶ ನಾಗೂರ, ಚನ್ನು ಹಡಪದ, ಶಿವು ಹಡಪದ, ಸಂಗಮೇಶ ಹಡಪದ, ಮಹೇಶ ಪತ್ತಾರ, ಬಸವರಾಜ ಮುತ್ತಗಿ, ಮಲ್ಲಕಾಜಿ ಸುರಗಿಹಳ್ಳಿ, ಅಶೋಕ ಬಾಗೇವಾಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬಸವನ ಬಾಗೇವಾಡಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ
