ಸಪ್ತಸಾಗರ ವಾರ್ತೆ, ವಿಜಯಪುರ, ಡಿ.17: ತಿಕೋಟಾ ಪಟ್ಟಣದಲ್ಲಿ ನಾಡಗೀತೆಯ ನೂರರ ಸಂಭ್ರಮ ಕಾರ್ಯಕ್ರಮ ಹಮಿಕೊಳ್ಳಲಾಗುವುದು. ರಾಷ್ಟçಕವಿ ಕುವೆಂಪು ಅವರು ಬರೆದ ನಾಡಗೀತೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಜಿಲ್ಲಾ ಮತ್ತು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ತಿಕೋಟಾ ಆಶ್ರಯದಲ್ಲಿ ಸಾವಿರಾರು ಮಕ್ಕಳನ್ನು ಒಳಗೊಂಡು ಕಾರ್ಯಕ್ರಮ ಆಯೋಜನೆ ಮಾಡುತ್ತೇವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಬುಧವಾರ ತಿಕೋಟಾ ಪಟ್ಟಣದ ವಿರಕ್ತಮಠದ ಸಭಾ ಭವನದಲ್ಲಿ ತಾಲೂಕಾ ಪ್ರಥಮ ಸಮ್ಮೇಳನದ ಲೆಕ್ಕಪತ್ರ ಹಾಗೂ ಮುಂದಿನ ಕಾರ್ಯಕ್ರಮಗಳ ಬಗ್ಗೆ ಸಭೆ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡುತ್ತಾ, ಸಮ್ಮೇಳನದಲ್ಲಿ ಉಳಿದ ಹಣವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿಗೆ ಕಡ್ಡಾಯವಾಗಿ ಜಮಾ ಮಾಡಬೇಕು. ಅಲ್ಲದೆ ಲೆಕ್ಕಪತ್ರ ಕಡ್ಡಾಯವಾಗಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿಗೆ ಕಳುಹಿಸಬೇಕೆಂದು ಹಾಸಿಂಪೀರ ವಾಲಿಕಾರ ತಿಳಿಸಿದರು.
ಪ್ರವಚನಕಾರ ಬಾಬುರಾವ ಮಹಾರಾಜ ಮಾತನಾಡಿ, ತಿಕೋಟಾ ತಾಲೂಕಿನ ಸಾಹಿತ್ಯ ಆಸಕ್ತರು ಸಮ್ಮೇಳನವನ್ನು ಯಶಸ್ವಿಗೊಳಿಸಿದರು. ಲೆಕ್ಕಪತ್ರ ಅಡಿಟ್ ಮಾಡಿಸಿ ಸಾರ್ವಜನಿಕರಿಗೆ ನೀಡಿದ್ದು ಅತ್ಯಂತ ಸಂತೋಷದ ಸಂಗತಿ. ಸಮ್ಮೇಳನದಲ್ಲಿ ಮಹಿಳೆಯರು ಕುಂಭಮೇಳ ಏರ್ಪಡಿಸಿ ಸಮ್ಮೇಳನಕ್ಕೆ ಮೆರಗು ತಂದಿದ್ದು ಸ್ಮರಣಿಯ ಎಂದರು.
ತಿಕೋಟಾ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಮಾತನಾಡಿ, ಸಮ್ಮೇಳನಕ್ಕೆ ತಾಲೂಕಿನ ಶಿಕ್ಷಕರು, ಹಿರಿಯರು, ಸಾಹಿತಿಗಳು ಸಹಾಯ ಸಹಕಾರ ನೀಡಿದ್ದರಿಂದ ತಿಕೋಟಾ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಜರುಗಿತು. ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮಕ್ಕೆ ತನು ಮನ ಧನದಿಂದ ಸಹಾಯ ಮಾಡಿದ್ದರಿಂದ ಕಾರ್ಯಕ್ರಮ ಯಶಸ್ವಿಯಾಗಲು ಕಾರಣವಾಯಿತು ಎಂದರು.
ಡಾ. ಆಯ್.ಜಿ. ಜತ್ತಿ ಮಾತನಾಡಿ, ತಿಕೋಟಾ ಗ್ರಾಮ ಸಾರ್ವಜನಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶ್ರಮ ವಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ವೇದಿಕೆಯ ಮೇಲೆ ಸಾತಲಿಂಗಯ್ಯ ಸಾಲಿಮಠ, ಸೋಮಶೇಖರ ಜತ್ತಿ, ಎಸ್.ಎಸ. ಮಂಗಸೂಳಿ, ಸುನೀಲ ನಾಲಾ, ಚನ್ನಯ್ಯ ಸಾಲಿಮಠ ಉಪಸ್ಥಿತರಿದ್ದರು.
ಸುರೇಶ ಚಾವರ, ಪಾಂಡು ನಾವಿ, ಶರಣಮ್ಮ ಹಾದಿಮನಿ, ಮುತ್ತು ಹಿರೇಮಠ, ಡಾ. ಸಾರವಾಡ, ರಮೇಶ ಖ್ಯಾಡಿ, ಗುರುಬಸಯ್ಯ ಲಕ್ಕುಂಡಿಮಠ, ಗಣಪತಿ ಗಳವೆ ಮುಂತಾದವರು ಉಪಸ್ಥಿತರಿದ್ದರು.
ತಿಕೋಟಾದಲ್ಲಿ ನಾಡ ಗೀತೆ ನೂರರ ಸಂಭ್ರಮ


