ಚಡಚಣ ಎಸ್ ಬಿ ಐ ಬ್ಯಾಂಕ್ ದರೋಡೆ ಪ್ರಕರಣ: ಪತ್ತೆಯಾದ ಬ್ಯಾಗ್ ನಲ್ಲಿ 6.55 ಕೆಜಿ ಚಿನ್ನಾಭರಣ, 41.4 ಲಕ್ಷ ನಗದು ವಶಕ್ಕೆ

ಸಪ್ತಸಾಗರ ವಾರ್ತೆ ವಿಜಯಪುರ, ಸೆ. 19:
ಚಡಚಣ ಎಸ್‌ಬಿ‌ಐ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆಕೋರರು ಮಹಾರಾಷ್ಟ್ರದ ಹುಲಿಜಂತಿ ಗ್ರಾಮದಲ್ಲಿ ಪತ್ತೆಯಾಗಿದ್ದು, ಬಚ್ಚಿಟ್ಟಿದ್ದ ಬ್ಯಾಗ್ ನಲ್ಲಿ 6.55 ಕೆಜಿ ಚಿನ್ನಾಭರಣ ಹಾಗೂ 41.4 ಲಕ್ಷ ರೂಪಾಯಿ ದೊರೆತಿದೆ.
ದರೋಡೆಕೋರರು ಚಿನ್ನಾಭರಣ, ನಗದು ಇರುವ ಬ್ಯಾಗ್ ವೊಂದನ್ನು ಹುಲಿಜಂತಿ ಗ್ರಾಮದ ಹಾಳು ಬಿದ್ದ ಮನೆ ಮೇಲ್ಛಾವಣಿ ಮೇಲೆ ಬಿಟ್ಟು ಹೋಗಿರುವುದು ಪೊಲೀಸರ ಕೈಗೆ ಸಿಕ್ಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಓರ್ವ ದರೋಡೆಕೋರ ಹಾಳು ಬಿದ್ದ
ಮನೆಯ ಮೇಲ್ಚಾವಣಿ ಮೇಲೆ ಬ್ಯಾಗ್ ಇಟ್ಟು ಪರಾರಿಯಾಗಿದ್ದ. ಬ್ಯಾಗ್ ಇರುವುದನ್ನು ಕಂಡ ಗ್ರಾಮದ ಜನರು ಮಂಗಳವೇಡ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಹಾರಾಷ್ಟ್ರ ರಾಜ್ಯದ ಮಂಗಳವೇಡ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಚಡಚಣ ಪೊಲೀಸರು ಶೋಧ ನಡೆಸಿದ್ದಾರೆ. ಆಗ ಬ್ಯಾಗ್ ಇರುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ.
ಬ್ಯಾಗ್ ನಲ್ಲಿ 6.55 ಕೆಜಿ ಚಿನ್ನಾಭರಣ ಹಾಗೂ 41.4 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. 136 ಪ್ಯಾಕೇಟ್ ಗಳಲ್ಲಿ ಇದ್ದ ಚಿನ್ನಾಭರಣ ಬ್ಯಾಗ್ ನಲ್ಲಿ ಸಿಕ್ಕಿವೆ. ಒಟ್ಟು ಎಸ್ ಬಿ ಐ ಬ್ಯಾಂಕ್ ನಲ್ಲಿ 1.4 ಕೋಟಿ ಮೌಲ್ಯದ 20 ಕೆಜಿ ಚಿನ್ನಾಭರಣ ದರೋಡೆಯಾಗಿತ್ತು. ಈ ಪೈಕಿ ಈಗ ಸಿಕ್ಕ ಬ್ಯಾಗ್ ನಲ್ಲಿ 21 ಪ್ಯಾಕೇಜ್ ನಲ್ಲಿ ಇರಿಸಿದ್ದ ಚಿನ್ನಾಭರಣ ಹಾಗೂ 1.30 ಲಕ್ಷ ನಗದು ಪತ್ತೆಯಾಗಿದೆ ಎಂದು ಅವರು ವಿವರಿಸಿದ್ದಾರೆ. ಸಪ್ಟೆಂಬರ್‌ 16 ರಂದೇ ಹುಲಜಂತಿಯಲ್ಲಿ ದರೋಡೆಕೋರ ಬಳಕೆ ಮಾಡಿದ್ದ ಇಕೋ ವಾಹನ ಪತ್ತೆಯಾಗಿತ್ತು. ಮಹಾರಾಷ್ಟ್ರ ರಾಜ್ಯ ಸೊಲ್ಲಾಪೂರ ಜಿಲ್ಲೆ ಮಂಗಳವೇಡ ತಾಲೂಕಿನ ಹುಲಜಂತಿ ಗ್ರಾಮದಲ್ಲಿ ನುಗ್ಗಿದ್ದ ಇಕೋ ವಾಹನ ಬೈಕ್ ಗೆ ಡಿಕ್ಕಿಯಾಗಿತ್ತು. ಇದನ್ನು ಪ್ರಶ್ನೆ ಮಾಡಿದಾಗ ವಾಹನದಲ್ಲಿದ್ದ ದರೋಡೆಕೋರ ಪಿಸ್ತೂಲ್ ತೋರಿಸಿ ಪರಾರಿಯಾಗಿದ್ದ. ಈ ವೇಳೆ ಚಿನ್ನಾಭರಣ ನಗದು ಇದ್ದ ಬ್ಯಾಗ್ ವೊಂದನ್ನು ಮನೆ ಮೇಲ್ಚಾವಣಿಯಲ್ಲಿ ಇಟ್ಟು ಪರಾರಿಯಾಗಿದ್ದ. ಈ‌ ಹಿನ್ನಲೆಯಲ್ಲಿ ಮುಂದಿನ‌ ತನಿಖೆ ನಡೆಯುತ್ತಿದೆ ಎಂದು ಮಾಹಿತಿಯನ್ನು ಎಸ್ಪಿ ಲಕ್ಷ್ಮಣ ನಿಂಬರಗಿ ನೀಡಿದ್ದಾರೆ. ಇಡೀ ಪ್ರಕರಣದ ಕುರಿತು ತನಿಖೆ ಮಾಡಲಾಗುತ್ತಿದೆ. ನಮ್ಮ ಇಲಾಖೆಯ ಎಂಟು ತಂಡಗಳು ತನಿಖೆ ವಿವಿಧ ಆಯಾಮಗಳಲ್ಲಿ ಮಾಡುತ್ತಿವೆ. ಶೀಘ್ರವೇ ಎಸ್ ಬಿ ಐ ಬ್ಯಾಂಕ್ ದರೋಡೆ ಪ್ರಕಲಣ ಭೇದಿಸಲಾಗುವುದು ಎಂದು ಹೇಳಿದ್ದಾರೆ.

Share this