ಕೈಗಾರಿಕೆ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷಎಸ್.ಜಿ. ನಂಜಯ್ಯನಮಠ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಣೆ

ಸಪ್ತಸಾಗರ ವಾರ್ತೆ, ವಿಜಯಪುರ ನ.11: ವಿಜಯಪುರ ವಿಮಾನ ನಿಲ್ದಾಣವು ಏರ್ ಬಸ್- 320 ವಿಮಾನಗಳ ಹಾರಾಟಕ್ಕಾಗಿ ಒಟ್ಟು ರೂ. 618.75 ಕೋಟಿಗಳ ಮೊತ್ತಕ್ಕೆ ಮಂಜೂರಾಗಿದ್ದು ವಿವಿಧ ಹಂತಗಳ ಅಭಿವೃದ್ಧಿ ಕಾಮಗಾರಿಗಳು ಶೇ.99.9 ಕಾಮಗಾರಿ ಪೂರ್ಣಗೊಂಡಿದ್ದು, ಇತರ ಕಾಮಗಾರಿಗಳು ತ್ವರಿತವಾಗಿ ಅಭಿವೃದ್ಧಿಪಡಿಲಾಗುತ್ತಿದೆ ಎಂದು ಕೈಗಾರಿಕಾ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಆಯೋಗದ ಅಧ್ಯಕ್ಷ ಹಾಗೂ ಶಾಸಕ ಎಸ್.ಜಿ. ನಂಜಯ್ಯನಮಠ ಹೇಳಿದರು.
ಮಂಗಳವಾರ ಬುರಣಾಪುರ ಹತ್ತಿರದ ವಿಮಾನ ನಿಲ್ಧಾನಕ್ಕೆ ಭೇಟಿ ನೀಡಿದ ಅವರು ವಿವಿಧ ಹಂತಗಳ ಕಾಮಗಾರಿಗಳಾದ ರನ್ ವೇ, ಟ್ಯಾಕ್ಸಿ ವೇ, ಎಪ್ರಾನ, ಐಸೋಲೆಶನ್ ಬೇ, ಕೂಡು ರಸ್ತೆ, ಒಳ ರಸ್ತೆಗಳು, ಇ.ಎಸ್.ಎಸ್. ಕಟ್ಟಡ, ಆರ್ಮರಿ, ಡಾಗ್ ಕೆನಲ್ ಕಟ್ಟಡ, ಕ್ಯಾಂಟೀನ ಕಟ್ಟಡ, 10 ವಾಚ್ ಟವರಗಳು, ಫೈರ್ ಪಿಟ್, ಕೂಲಿಂಗ್ ಪಿಟ್, ಕೆಲವiಟ್ಟದ ಹಾಗೂ ಮೇಲ್ಮಟ್ಟದ ನೀರು ಸಂಗ್ರಹಾಲಯ, ಎಸ್.ಟಿ.ಪಿ, ಪಂಪ್ ಹೌಸ್, ಕಂಪೌಂಡ್ ಗೋಡೆ, ಸೋಲಾರ ಪೆನಲ್,ಏವಿಯೋನಿಕ್ಸ್, ಬದ್ರತಾ ಉಪಕರಣಗಳು, ವಿದ್ಯುತ್ ಸಂಪರ್ಕ ಕಾಮಗಾರಿ, ನಿರಂತರ ನೀರು ಸರಬರಾಜು ಕಾಮಗಾರಿಗಳನ್ನು ವೀಕ್ಷಿಸಿದರು. ಈಗಾಗಲೇ ಒಂದನೆ ಹಂತ ಹಾಗೂ ಎರಡನೇ ಹಂತದ ಕಾಮಗಾರಿಗಳು ಪೂರ್ಣಗೊಂಡಿವೆ. 25 ಕೋಟಿ ರೂ ವೆಚ್ಚದಲ್ಲಿ 2 ಅಗ್ನಿಶಾಮಕ ವಾಹನ, 13.09,ಡಿ.ವಿ.ಓ.ಆರ್, 2.76 ಕೋಟಿ ರೂಗಳಲ್ಲಿ ಬಿ.ಡಿ.ಡಿ.ಎಸ್ ಉಪಕರಣ ಖರಿದಿಸಲಾಗಿದೆ. ವಿಮಾನಗಳ ರಾತ್ರಿ ಕಾರ್ಯಾಚರಣೆಗೆ ಭೂಸ್ವಾದಿನಕ್ಕಾಗಿ ಲೋಕೋಪಯೋಗಿ ಇಲಾಖೆಯ ವತಿಯಿಂದ 65 ಕೋಟಿ ರೂಗಳ ಪ್ರಸ್ಥಾವನೆಯನ್ನು ಕೆ.ಐಎ.ಡಿ.ಬಿ ಸಲ್ಲಿಸಲಾಗಿದೆ. ಈಗಾಗಲೇ ಏರ್ ಬಸ್-320 ವಿಮಾನಗಳ ಹಗಲಿನ ವೇಳೆ ಹಾರಾಟಕ್ಕಾಗಿ ಅವಶ್ಯವಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ಪರಿಸರ ಅನುಮತಿಗಾಗಿ ನಿರೀಕ್ಷಿಸಲಾಗುತ್ತಿದೆ. ಅನುಮತಿ ದೊರತಲ್ಲಿ ಹಗಲಿನ ವೇಳೆಯ ವಿಮಾನ ಹಾರಾಟಕ್ಕೆ ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.
ಇದೇ ವೇಳೆ ವಿಮಾನ ನಿಲ್ಧಾಣ ನಿರ್ದೇಶಕ ಪೊನ್ನಪ್ಪ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಸಿ.ಎಸ್. ಪಾಟೀಲ್, ಎ.ಇ.ಇ. ಪ್ರಮೋದ ಹೊಟ್ಟಿ, ಸಹಾಯಕ ಇಂಜಿನೀಯರರಾದ ರೇವಣ್ಣ ಮಸಳಿ, ವಿವೇಕ ರೆಡ್ಡಿ, ಕೆ.ಎಮ್.ವಿ ಪ್ರಾಜೆಕ್ಟನ ಗುತ್ತಿಗೆದಾರರಾದ ಸರವಣನ್, ಎಸ್.ಎಸ್. ಆಲೂರ, ರಮೇಶ ಸೂಳಿಬಾವಿ, ಪೀಟರ್ ಅಲೆಕ್ಸಾಂಡರ್, ಎಸ್.ವಿ. ಪಾಟೀಲ್, ಡಿಗ್ಗಾಂವಿ ಬಾಬು, ಸುರೇಶ ದೇಸಾಯಿ, ಅಶೋಕ ಮಲಘಾಣ, ಡಾ. ಮಲ್ಲನಗೌಡ ಬಿರಾದಾರ, ಅಮೀನುದ್ದೀನ ಹುಲ್ಲೂರ ಹಾಗೂ ಇತರರು ಉಪಸ್ಥಿತರಿದ್ದರು.

Share this