ಸಪ್ತಸಾಗರ ವಾರ್ತೆ, ವಿಜಯಪುರ, ಮಾ. 28:
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಹಯೋಗದಲ್ಲಿ ಬೆಂಗಳೂರು ಕಾನೂನು ಕಾಲೇಜಿನಲ್ಲಿ ಮಾ. 26ರಂದು ಅಂತರ ಕಾಲೇಜು ಚೆಸ್ ಸ್ಪರ್ಧೆ ಜರುಗಿತು.
ಈ ಸ್ಪರ್ಧೆಯಲ್ಲಿ ಅಂಜುಮನ್ ಕಾನೂನು ಮಹಾವಿದ್ಯಾಲಯ, ವಿಜಯಪುರದಿಂದ ಐದು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ತಂಡದ ನಾಯಕ ಸಮೀರ್ ಖಾಜಿ, ಅಮೀರ್ ಕೊರ್ತಿ, ಪ್ರದೀಪ್ ಬಾಲಗನೂರ್, ಆನಂದ್ ಕಾಳಗಿ ಹಾಗೂ ದ್ಯಾಮಣ್ಣ ಸುಭಾನಪ್ಪರ್ ಇದ್ದರು.
ತಂಡದ ವ್ಯವಸ್ಥಾಪಕರಾಗಿ ದೈಹಿಕ ಶಿಕ್ಷಣ ನಿರ್ದೇಶಕ ಟಿ.ಎಸ್. ಕೂಡಗಿ ಅವರು ಕಾರ್ಯ ನಿರ್ವಹಿಸಿದರು.
ಈ ಸ್ಪರ್ಧೆಯಲ್ಲಿ ವಿವಿಧ ಕಾನೂನು ಮಹಾವಿದ್ಯಾಲಯಗಳಿಂದ ಒಟ್ಟು 38 ಪುರುಷರ ತಂಡಗಳು ಭಾಗವಹಿಸಿದ್ದವು. ತೀವ್ರ ಪೈಪೋಟಿಯ ನಡುವೆ ಅಂಜುಮನ್ ಕಾನೂನು ಮಹಾವಿದ್ಯಾಲಯದ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ತೃತೀಯ ಸ್ಥಾನವನ್ನು ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ವಿಜೇತ ಕ್ರೀಡಾಪಟುಗಳು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಟಿ.ಎಸ್. ಕೂಡುಗಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


