ತಾಲೂಕು ಪಂಚಾಯತ ಕಾರ್ಯಾಲಯದಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿ ಆಚರಣೆ

ಸಪ್ತಸಾಗರ ವಾರ್ತೆ, ವಿಜಯಪುರ,ಫೆ. 19: ಜಿಲ್ಲೆಯ ತಿಕೋಟಾ ತಾಲೂಕು ಪಂಚಾಯತ ಕಾರ್ಯಾಲಯದಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹರಾಜರ ಜಯಂತಿಯನ್ನು ಆಚರಿಸಲಾಯಿತು.
ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿ ನಿಮಿತ್ಯ ಮಹನೀಯರ ಭಾವಚಿತ್ರಕ್ಕೆ ಪೂಜೆ ನೇರೆವೆರಿಸಿದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವಂತರಾಯಗೌಡ ಬಿರಾದಾರ ಅವರು ಮಾತನಾಡಿ “ಶೌರ್ಯ, ಸಾಹಸ, ಆಡಳಿತ ಮತ್ತು ಆದರ್ಶದ ಪ್ರತೀಕ ಹಾಗೂ ದೇಶ ಕಂಡ ಅಪ್ರತೀಮ ಹೋರಾಟಗಾರರಲ್ಲಿ ಶಿವಾಜಿ ಮಹಾರಾಜರು ಅಗ್ರಗಣ್ಯರು. ಅವರ ಆಡಳಿತದಲ್ಲಿ ಸಮಾಜದ ಎಲ್ಲರ ಏಳಿಗೆಗಾಗಿ ಜನಪರ ಕಾರ್ಯಕ್ರಮ, ಯೋಜನೆಗಳನ್ನು ಹಮ್ಮಿಕೊಂಡು ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿರುವರು. ಅಂತಹ ಮಹನೀಯರ ಜಯಂತಿ ಆಚರಿಸುವದರ ಜೊತೆಗೆ ಅವರ ಆದರ್ಶಗಳನ್ನು ರೂಢಿಸಿಕೊಳ್ಳುವುದು ನಮಗೆ ಹೆಮ್ಮೆ ಮತ್ತು ಕರ್ತವ್ಯವೆಂದರು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕ ಬಸವರಾಜ ಸಂಕಗೊಂಡ, ತಾಲೂಕು ಐಇಸಿ ಸಂಯೋಜಕರಾದ ಕಲ್ಲಪ್ಪ ನಂದರಗಿ, ತಾಲೂಕು ಎಮ್.ಐ.ಎಸ್ ಸಂಯೋಜಕಿ ಅಪರ್ಣಾ ಬದಾಮಿ, ಆಡಳಿತ ಸಹಾಯಕ ಸುನೀಲ ಬನಸೋಡೆ, ತಾಲೂಕು ಪಂಚಾಯತಿ ಅಧಿಕಾರಿ ಕವಿತಾ ಬಿರಾದಾರ, ರೀತಾ ಮೌರ್ಯ, ಸರ್ವಮಂಗಲ ಮುಪ್ಪಯ್ಯನಮಠ, ಜಯಶ್ರೀ ಪೂಜಾರಿ, ಮಹಾಶಾಂತ ಬಂದಿ, ರತ್ನಾಕರ ನಾಟೀಕಾರ, ಇಮ್ತಿಯಾಜ ಜಮಾದಾರ, ಜ್ಯೋತಿಬಾ ಹೂಗಾರ ಸೇರಿದಂತೆ ಇತರರು ಹಾಜರಿದ್ದರು.

Share this