ನಾಗಠಾಣದಲ್ಲಿ ರಾಷ್ಟ್ರೀಯ ಮಗಳ ದಿನ ಆಚರಿಸಿದ ಚಿಣ್ಣರು

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 27:
ರಾಷ್ಟ್ರೀಯ ಮಗಳ ದಿನದ ಅಂಗವಾಗಿ ತಾಲೂಕಿನ ನಾಗಠಾಣ ಗ್ರಾಮದ ಬಂಡೆ ಕುಟುಂಬದ ಚಿಣ್ಣರಾದ ಅನುಶ್ರೀ, ಆರುಷಿ ಹಾಗೂ ಶ್ರೀನಿಧಿ ಅವರು ಪುಷ್ಪ ಪ್ರದರ್ಶಿಸುವ ಮೂಲಕ ವಿಶೇಷವಾಗಿ ಆಚರಿಸಿದರು.
ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ನಾಲ್ಕನೇ ಭಾನುವಾರದಂದು ರಾಷ್ಟ್ರೀಯ ಮಗಳ ದಿನ ಆಚರಿಸಲಾಗುತ್ತದೆ. ಕುಟುಂಬ ಹಾಗೂ ಸಮಾಜದಲ್ಲಿ ಹೆಣ್ಣುಮಕ್ಕಳ ಮಹತ್ವ, ಗೌರವ ಮತ್ತು ಪ್ರೀತಿಯನ್ನು ಸಾರುವುದು ಈ ದಿನದ ಉದ್ದೇಶವಾಗಿದೆ.
ಹೆಣ್ಣುಮಕ್ಕಳು ಶಿಕ್ಷಣ, ಕ್ರೀಡೆ, ಬಾಹ್ಯಾಕಾಶ, ಉದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಅವರ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.
ತಾಯಿ, ಸಹೋದರಿ, ಪತ್ನಿ ಹಾಗೂ ಮಗಳಾಗಿ ಕುಟುಂಬ ಮತ್ತು ಸಮಾಜದ ಬೆಳವಣಿಗೆಯಲ್ಲಿ ಹೆಣ್ಣುಮಕ್ಕಳು ಮಹತ್ವದ ಪಾತ್ರ ವಹಿಸುತ್ತಾರೆ. ಆದ್ದರಿಂದ ಲಿಂಗಭೇದವಿಲ್ಲದೆ ಹೆಣ್ಣುಮಕ್ಕಳಿಗೆ ಸಮಾನ ಹಕ್ಕು, ಗೌರವ ಹಾಗೂ ಅವಕಾಶಗಳನ್ನು ಕಲ್ಪಿಸಿ, ಅವರ ಕನಸುಗಳನ್ನು ನನಸಾಗಿಸಲು ಬೆಂಬಲ ನೀಡಬೇಕಿದೆ.
ಹೆಣ್ಣುಮಕ್ಕಳನ್ನು ಕೇವಲ ಮನೆಯ ಸಿಂಗಾರವಾಗಿ ನೋಡದೆ, ಸಮಾಜದ ಸಶಕ್ತ ಶಕ್ತಿಯಾಗಿ ಬೆಳೆಸುವ ಸಂಕಲ್ಪವನ್ನು ರಾಷ್ಟ್ರೀಯ ಮಗಳ ದಿನದಂದು ಕೈಗೊಳ್ಳಬೇಕಾಗಿದೆ.

Share this