ಸಪ್ತಸಾಗರ ವಾರ್ತೆ , ವಿಜಯಪುರ, ಏ. 16:
ವಿಶ್ವ ಧ್ವನಿ ದಿನವನ್ನು ಪ್ರತಿವರ್ಷ ಏಪ್ರಿಲ್ 16 ರಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಈ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ ಅನುಶ್ರೀ-ಶ್ರೀನಿಧಿ ಬಂಡೆ ಅವರು ಧ್ವನಿ ಮಾಡುವ ಮೂಲಕ ಈ ದಿನವನ್ನು ಆಚರಿಸಿದರು.
ಧ್ವನಿಯು ಮನುಷ್ಯನ ವ್ಯಕ್ತಿತ್ವ, ಆರೋಗ್ಯ,ಭಾವನೆಯನ್ನು
ವ್ಯಕ್ತಪಡಿಸುವ ಪ್ರಮುಖ ಸಾಧನವಾಗಿದ್ದು, ಅದು ಸಂವಹನ, ಸಾಮಾಜಿಕ ಸಂಪರ್ಕ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಆರೋಗ್ಯದ ದೃಷ್ಟಿಯಿಂದ, ಧ್ವನಿಯು ನಮ್ಮ ಮನಃಸ್ಥಿತಿ ಮತ್ತು ದೈಹಿಕ ಆರೋಗ್ಯವನ್ನು ಸೂಚಿಸುತ್ತದೆ. ಶೈಕ್ಷಣಿಕ, ವೃತ್ತಿಪರ ಮತ್ತು ದೈನಂದಿನ ಜೀವನದಲ್ಲಿ ಸಮರ್ಥ ಸಂವಹನಕ್ಕಾಗಿ ಧ್ವನಿಯ ಆರೋಗ್ಯ ಮತ್ತು ಅದರ ಸರಿಯಾದ ಬಳಕೆ ಅತ್ಯಗತ್ಯ.
ನಮ್ಮ ದೈನಂದಿನ ಜೀವನದಲ್ಲಿ ಧ್ವನಿಯ ಪಾತ್ರ, ಅದರ ಮಹತ್ವ, ಅದರ ಆರೋಗ್ಯ ಮತ್ತು ಧ್ವನಿ ಸಂಬಂಧಿತ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ವಿಶ್ವ ಧ್ವನಿ ದಿನ ಆಚರಿಸಿದ ನಾಗಠಾಣದ ಚಿಣ್ಣರು


