ಹೊನ್ನುಟಗಿಯಲ್ಲಿ ಮಕ್ಕಳ ದಿನಾಚರಣೆ

ಸಪ್ತಸಾಗರ ವಾರ್ತೆ, ವಿಜಯಪುರ, ನ. 14:
ಹೊನ್ನುಟಗಿಯಲ್ಲಿ ಪ್ರಾರ್ಥನಾ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಡೆದ ದೇಶದ ಮೊದಲ ಪ್ರಧಾನಮಂತ್ರಿ ಪಂಡಿತ ಜವಾಹರಲಾಲ್ ನೆಹರು ಅವರ ಜನ್ಮದಿನದ ಪ್ರಯುಕ್ತ ಮಕ್ಕಳ ದಿನಾಚರಣೆಯನ್ನು ಉತ್ಸಾಹಭರಿತವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲ ದಿವಾಕರ್ ಕೆ ಆರ್ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕ ಹೆಚ್. ಎಂ ಸಾರವಾಡ ಅವರು ಮುಖ್ಯ ಅತಿಥಿಗಳಾಗಿ ಹಾಜರಿದ್ದು ಮಕ್ಕಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ಅವರು ಶಿಕ್ಷಣದ ಮಹತ್ವ, ಮಕ್ಕಳ ಕನಸುಗಳನ್ನು ಬೆಂಬಲಿಸುವ ಕುಟುಂಬ ಮತ್ತು ಶಾಲೆಯ ಜವಾಬ್ದಾರಿಗಳು ಮಕ್ಕಳ ಕೈಯಲ್ಲಿದೆ. ಮಕ್ಕಳು ಮನಸ್ಸು ನನಸಾಗಲು ಶಿಕ್ಷಕರ ಉತ್ತಮ ಮಾರ್ಗದರ್ಶನ ಮುಖ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಸಂಭ್ರಮಿಸಿದರು. ಮಕ್ಕಳಿಂದ ನೃತ್ಯ, ಗೀತೆ, ಭಾಷಣ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರತಿಭೆಗಳಿಗೆ ಪ್ರಶಸ್ತಿ ನೀಡಿ ಪ್ರಶಂಸಿಸಲಾಯಿತು.
ಶಾಲೆಯ ವಾತಾವರಣ ಮಕ್ಕಳ ನಗು-ಸಂತೋಷಗಳಿಂದ ಕಂಗೋಳಿಸಿತು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಶ್ರಮಿಸಿದ ಶಿಕ್ಷಕರಿಗೂ ಪಾಲಕರಿಗೂ ಶಾಲಾ ಆಡಳಿತ ಮಂಡಳಿ ಯವರಿಗೆ ಕೃತಜ್ಞತೆಗಳು ವ್ಯಕ್ತಪಡಿಸಿದೆ.
ಕಾರ್ಯಕ್ರಮವನ್ನು ಪ್ರಿಯಾಂಕಾ ಎ.ಕೆ. ನಿರೂಪಿಸಿದರು. ಗಾಯತ್ರಿ ಕದಂ ಸ್ವಾಗತಿಸಿದರು. ರಾಜಶೇಖರ್ ಪಾಟೀಲ ವಂದಿಸಿದರು.

Share this