ಸಪ್ತಸಾಗರ ವಾರ್ತೆ, ಬೆಂಗಳೂರು, ಆ. 21:
ಕೊರಿಯಾದಲ್ಲಿ ನಡೆದ 20ನೇ ಏಷ್ಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ವೇಗವಾದ ಸ್ಕೇಟರ್ ಹಾಗೂ ಡಬಲ್ ಸಿಲ್ವರ್ ಪದಕ ವಿಜೇತ ಕ್ರೀಡಾಪಟುಗಳಿಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಕಚೇರಿಯಲ್ಲಿ ಅಭಿನಂದಿಸಿದರು.
ಕ್ರೀಡಾಪಟುಗಳಾದ ವೇಗವಾದ ಸ್ಕೇಟರ್ ಧನುಷ್ ಬಾಬು ಮತ್ತು ಸಿಲ್ವರ್ ಪದಕ ವಿಜೇತೆ ಕು. ಪೂರ್ವಿ ಮಠೆ ಅವರನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾಧನೆಯನ್ನು ಪ್ರಶಂಶಿಸಿ ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರೂ, ರಾಜ್ಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದರಾಜು ಅವರು ಉಪಸ್ಥಿತರಿದ್ದರು.
ಏಷಿಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ವಿಜೇತ ಕ್ರೀಡಾಪಟುಗಳಿಗೆ ಸಿಎಂ ಅಭಿನಂದನೆ
