ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿ ರಾಜೀನಾಮೆ ಪಡೆದ ಕಾಂಗ್ರೆಸ್ ಹೈಕಮಾಂಡ್

ಸಪ್ತಸಾಗರ ವಾರ್ತೆ,ವಿಜಯಪುರ, ಮೇ. 28:
ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ಹಾಕಿ ಹಿಂದುಳಿದ ನಾಯಕನ ಬಲಿ ಕೊಡಲಾಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿಥ ಹಿನ್ನಲೆ ಅವರು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದರು.
ಬಕ್ರೀದ್ ಹಬ್ಬದ ದಿನವೇ ಸಿದ್ದರಾಮಯ್ಯರನ್ನು ಬಲಿ ಪಡೆಯಲಾಗಿದೆ.
2028 ರ ಚುನಾವಣೆಯಲ್ಲಿ ಹಿಂದುಳಿದ, ದಲಿತ ವರ್ಗಗಳು ಕಾಂಗ್ರೆಸ್ ಬಲಿ ಪಡೆಯುತ್ತವೆ. ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಮುಸ್ಲಿಂ ತುಷ್ಟೀಕರಣ ಮಾಡಿ ಅತಿರೇಕ ಮಾಡಿದ್ದರು. ಮಮತಾ ಬ್ಯಾನರ್ಜಿ ಬಳಿಕ ಸಿದ್ದರಾಮಯ್ಯ ಮುಸ್ಲಿಂ ತುಷ್ಟೀಕರಣ ಮಾಡಿದ್ದರು.
ಹಿಂದುಳಿದವರನ್ನು, ದಲಿತರನ್ನು ನೋಡದೇ ಈ ಅವಧಿಯಲ್ಲಿ ದ್ವೇಷದ ರಾಜಕಾರಣ ಮಾಡಿದ್ದರು.
ಮೊದಲಿನ ಸಿದ್ದರಾಮಯ್ಯ ಇಲ್ಲವೆಂದು ಸದನದಲ್ಲೇ ನಾನು ಹೇಳಿದ್ದೆನು.
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ಓರ್ವ ಮುಸ್ಲಿಂ ಸಿದ್ದರಾಮಯ್ಯ ಪರ ಪ್ರತಿಭಟನೆ ಮಾಡಿಲ್ಲ. ಓರ್ವ ಮೌಲ್ವಿ ಸಹ ಕಾಂಗ್ರೆಸ್ ಹೈಕಮಾಂಡ್ ಮಾಡಿದ್ದು ತಪ್ಪು ಎಂದು ಹೇಳಿಲ್ಲ. ಸಿದ್ದರಾಮಯ್ಯ ಮುಸ್ಲಿಂ ಪರವಾಗಿ ಕಾರ್ಯಕ್ರಮಗಳನ್ನು ಮಾಡಿದರು. ದೇಶಕ್ಕೆ ಹಾಗೂ ಹಿಂದೂಗಳಿಗೆ ಮುಸ್ಲಿಂರು ನಿಷ್ಠರಾಗಿರಲ್ಲ ಎಂದು ಅಂಬೇಡ್ಕರ್ ಹೇಳಿದ್ದು ನಿಜವಾಗಿದೆ.
ರಾಜ್ಯದಲ್ಲಿ ಮುಸ್ಲಿಂ ಸಂಖ್ಯೆ ಹೆಚ್ಚಿದೆ ಎಂದು ಕೊನೆಯ ದಿನವೂ ಮುಸ್ಲಿಂ ಪರವಾಗಿಯೇ ಸಿದ್ದರಾಮಯ್ಯ ರಾಜಕಾರಣ ಮಾಡಿದರು.
ಸಿದ್ದರಾಮಯ್ಯ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡರು.
ಮುಸ್ಲಿಂ ಬಿಟ್ಟು ಬೇರೆ ಸಮುದಾಯದ ಕೆಲಸಗಳನ್ನು ಸಿದ್ದರಾಮಯ್ಯ ಮಾಡಲಿಲ್ಲ.
ಸಿದ್ದರಾಮಯ್ಯ ಪಾಲಿಗೆ ಇಂದು ಕಪ್ಪು ದಿನವಾಗಿದೆ. ಅವರು ಪಶ್ಚಾತಾಪ ಪಡಬೇಕಾಗಿದೆ ಎಂದರು.
ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಯುಗಾಂತ್ಯವಾಯಿತು. ಅವರ ಮಕ್ಕಳು ಸ್ವಂತ ಶಕ್ತಿ ಸಾಮರ್ಥ್ಯದ ಮೇಲೆ ಬೆಳೆಯಬೇಕು ವಿನಃ ತಂದೆಯ ಶಕ್ತಿ ಮೇಲೆ ಅಲ್ಲ ಎಂದು ಹೇಳುವ ಮೂಲಕ
ವಿಜಯೇಂದ್ರ ಹಾಗೂ ಯತೀಂದ್ರ ಕುರಿತು ಕಿವಿಮಾತು ಹೇಳಿದರು.
ಟಿಕೇಗಳು ಏನೇ ಇರಲಿ. ಸಿದ್ದರಾಮಯ್ಯರ ಮುಂದಿನ ಜೀವನ ಒಳ್ಳೆಯದಿರಲಿ.
ಸಿದ್ದರಾಮಯ್ಯ ತಮ್ಮ ಆಡಳಿತದಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ.
ಬರೀ ಟೀಕೆ ಮಾಡುವುದಲ್ಲ. ಅವರಿಗೆ ಶುಭ ವಿದಾಯ ಹೇಳುತ್ತೇನೆಂದು ಯತ್ನಾಳ ನುಡಿದರು.
2026 ವಿಶೇಷ ವರ್ಷ. ಹಿಂದೂ ವಿರೋಧಿ ಸಿಎಂಗಳ ಅಂತ್ಯವಾಯ್ತು
ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ಹಿಂದೂ ವಿರೋಧಿ ಸಿಎಂಗಳ ಅಂತ್ಯವಾಯಿತು.
ಇವರೆಲ್ಲರ ಅಂತ್ಯ ಹಿಂದೂ ವಿರೋಧ ಮಾಡಿದ್ದಕ್ಕೆ ಆಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸಿಎಂ ಆಗಿದ್ದರೆ ಅದು ಭಾರತದಲ್ಲಿ ಇರುತ್ತಿರಲಿಲ್ಲ. ಬೇರುಮಟ್ಟದಿಂದಲೇ ಟಿಎಂಸಿ ಸೋಲಿಸಿದ್ದಕ್ಕೆ ಮೋದಿ, ಅಮೀತ್ ಶಾ ಅವರಿಗೆ ಅಭಿನಂದಿಸುವೆ ಎಂದು ಯತ್ನಾಳ ಹೇಳಿದರು.
ತೃಣಮೂಲ ಸಹ ಬೇರು ಮಟ್ಟದಿಂದಲೇ ದೇಶದಿಂದ ತೊಲಗಬೇಕೆಂದು ಹೇಳಿದರು.
ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ ಹೆಸರು ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಯತ್ನಾಳ,
ಸಿಎಂ ಸ್ಥಾನಕ್ಕೆ ಡಿಕೆಶಿ ಹೆಸರು ಘೋಷಣೆ ಮಾಡಿದ್ದು ಅವರ ಪಕ್ಷಕ್ಕೆ ಬಿಟ್ಟಿದ್ದು.
ಡಿಕೆಶಿ, ಪರಮೇಶ್ವರ ಹಾಗೂ ಎಂ.ಬಿ. ಪಾಟೀಲರನ್ನು ಸಿಎಂ ಮಾಡಬೇಕೋ ಬಿಡಬೇಕೋ ಎಂಬುದು ಅವರ ಪಕ್ಷಕ್ಕೆ ಬಿಟ್ಟಿದ್ದು ಎಂದರು.
ಸಿಎಂ ಆಗಬೇಕೆಂದು ಎಂಬಿ ಪಾಟೀಲರಿಗೆ ಆಸೆಯಿತ್ತು, ಆಗದೇ ಇರುವುದಕ್ಕೆ ನಮಗೂ ನೋವಾಗಿದೆ.
ಈಗ ಡಿಕೆಶಿ ಆಗಲಿದ್ದಾರೆ. ಎರಡು ವರ್ಷ ಅವಧಿ ಇದೇ. ಒಳ್ಳೆಯ ಕೆಲಸ ಮಾಡಲಿ.
ಡಿಕೆಶಿ ಭ್ರಷ್ಟಾಚಾರ ಮಾಡುತ್ತಿದ್ದರು. ಅದನ್ನು ಕಡಿಮೆ ಮಾಡಲಿ ಎಂದು ಯತ್ನಾಳ ಹೇಳಿದರು.
ಎಂ.ಬಿ. ಪಾಟೀಲ್ ಗೆ ಡಿಸಿಎಂ ಪಟ್ಟ ವಿಚಾರ ಕುರಿತು ಯತ್ನಾಳ ಪ್ರತಿಕ್ರಿಯೆ ನೀಡಿ, ಡಿಸಿಎಂ ಕೊಟ್ಟರೆ ಸಂತೋಷ ಪಡುತ್ತೇವೆ ಸಿಎಂ ಆದರೂ ಖುಷಿ ಪಡುತ್ತೇವೆ ಎಂದರು.
ನಮ್ಮ ಜಿಲ್ಲೆಯವರೇ ಆದರೆ ಕೆಲಸಗಳು ಆಗುತ್ತವೆ. ಹೊಟ್ಟೆ ಕಿಚ್ಚಿಲ್ಲ. ನಮ್ಮ ಜಿಲ್ಲೆಯವರು ಡಿಸಿಎಂ ಆದರೆ ಸ್ವಾಗತ ಮಾಡುವೆ. ಒಳ್ಳೆಯ ಭವಿಷ್ಯವಿದ್ದರೆ ಎಂ. ಬಿ. ಪಾಟೀಲ ಸಿಎಂ ಆಗಲಿ. ಹೊಟ್ಟೆ ಕಿಚ್ಚು ಪಡುವ ವ್ಯಕ್ತಿಯಲ್ಲ ಎಂದು ಯತ್ನಾಳ ಹೇಳಿದರು.
ಸಿದ್ದರಾಮಯ್ಯ ರಾಜೀನಾಮೆಯಿಂದ ಹಾಲುಮತ ಸಮಾಜಕ್ಕೆ ನೋವಾಗಿದೆ.
ಹಾಲುಮತಗಳಿಂದ ಆಯ್ಕೆಯಾಗುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಮಸ್ಯೆಯಾಗುತ್ತದೆ
2028 ರಲ್ಲಿ ಹಾಲುಮತ ಸಮಾಜದವರು ಉತ್ತರ ನೀಡುತ್ತಾರೆ. ಹಿಂದುಳಿದ, ದಲಿತ ಸಮಾಜದವರು ಸಹ ಕಾಂಗ್ರೆಸ್ ವಿರೋಧಿಯಾಗುತ್ತದೆ. 2028 ರಲ್ಲಿ ಜೆಸಿಬಿ ಬಲಿಷ್ಟವಾಗಿರುತ್ತದೆಯೋ ಬಿಜೆಪಿ ಬಲಿಷ್ಟವಾಗಿರುತ್ತದೆಯೋ ಅವರ ಪರವಾಗುತ್ತದೆ ಕಾಲ ನಿರ್ಧರಿಸಲಿದೆ.
ಕಾಂಗ್ರೆಸ್ ವಿರೋಧಿ ಅಲೆ ಇದ್ದೇ ಇರುತ್ತದೆ.
ಯಾವುದೇ ಒಪ್ಪಂದ ಇಲ್ಲ. ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿದ್ದರು. ಹಿಂದುಳಿದವರ ಹಾಗೂ ದಲಿತ ಪರ ರಾಹುಲ್ ಗಾಂಧಿ ಮಾತನಾಡುತ್ತಾರೆ. ಈಗ ಹಿಂದುಳಿದ ವರ್ಗದ ಸಿದ್ದರಾಮಯ್ಯರನ್ನು ರಾಹುಲ್ ಗಾಂಧಿ ತೆಗೆದರು ಎಂದು ವಾಗ್ದಾಳಿ ಮಾಡಿದರು. ಇದರ ಪರಿಣಾಮ 2028 ರ ಚುನಾವಣೆಯಲ್ಲಿ ಆಗುತ್ತದೆ.
ಡಿ.ಕೆ. ಶಿವಕುಮಾರ ಲಗಾ ಹೊಡೆದರೂ ಉತ್ತರ ಕರ್ನಾಟಕದಲ್ಲಿ ಏನೂ ಆಗಲ್ಲ.
ಹಳೇ ಮೈಸೂರು ಭಾಗದಲ್ಲಿ ಡಿಕೆಶಿ ಹಾಗೂ ಕುಮಾರಸ್ವಾಮಿ ಹಗ್ಗ ಜಗ್ಗಾಟ ಆಗುತ್ತದೆ.
ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ಸೇತರ ಪಕ್ಷಗಳು ಜಯ ಗಳಿಸುತ್ತವೆ ಎಂದು ಯತ್ನಾಳ ಹೇಳಿದರು.

Share this