ಅವಮಾನ ಎನ್ನದೆ ನಿರಂತರವಾಗಿ ಸಮಾಜಮುಖಿ ಕೆಲಸ ಮಾಡಿ: ಡಾ. ಪ್ರಾಣೇಶ ಜಹಾಗೀರದಾರ

ಸಪ್ತಸಾಗರ ವಾರ್ತೆ, ವಿಜಯಪುರ, ಜು. 30:
ಸಮಾಜ ಸೇವೆಯಲ್ಲಿ ತೊಡಗಿಕೊಂಡವರನ್ನು ಜನ ಮೊದಲು ಅನುಮಾನದಿಂದ ನೋಡುತ್ತಾರೆ. ಆನಂತರ ಅಸೊಯೆಯಿಂದ ಅವಮಾನಿಸುತ್ತಾರೆ, ಇವೆರಡನ್ನು ಮೆಟ್ಟಿ ಮೇಲೇರಿದಾಗ ಸನ್ಮಾನಿಸುತ್ತಾರೆ. ಈ ರೀತಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಾಮಾಜಿಕ ಕಾರ್ಯ ಮಾಡಬೇಕೆಂದು ಅಂತರಾಷ್ಟಿಯ ರೋಟರಿ ಜಿಲ್ಲೆ 3170ರ ಮಾಜಿ ಜಿಲ್ಲಾ ಪ್ರಾಂತಪಾಲರಾದ ಡಾ.ಪ್ರಾಣೇಶ ಜಹಾಗೀರದಾರ ಅವರು ಹೇಳಿದರು.
ರೋಟರಿ ಪ್ರೋಬಸ್ ಕ್ಲಬ್ ವಿಜಯಪುರ ಉತ್ತರದ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಕ್ಲಬ್ 25 ವರ್ಷ ಪೂರೈಸಿದ ನೆನಪಿಗಾಗಿ ಹೊರತಂದ ಬೆಳ್ಳಿಮಹೋತ್ಸವ ಸಂಚಿಕೆ “ರಜತ” ಕೂಡಾ ಬಿಡುಗಡೆ ಮಾಡಿದರು.
ರೋಟರಿ ಕ್ಲಬ್ ವಿಜಯಪುರ ಉತ್ತರದ ಅಧ್ಯಕ್ಷ ಸಂತೋಷ ಔರಸಂಗ ಹಾಗೂ ಕಾರ್ಯದರ್ಶಿ ಅವಿನಾಶ್ ಬಾಹೇತಿ ಅವರು ಹೊಸ ಪದಾಧಿಕಾರಿಗಳ ತಂಡಕ್ಕೆ ಶುಭ ಹಾರೈಸಿದರು.
2024- 25ನೇ ಸಾಲಿನ ಅಧ್ಯಕ್ಷೆ ಶಾರದಾ ಐಹೊಳ್ಳಿ ಮತ್ತು
ಕಾರ್ಯದರ್ಶಿ ಸುವರ್ಣ ತೇಲಿ ಅವರು ತಮ್ಮ ಅವಧಿಯ ಸಾಧನೆಗಳನ್ನು ವಿವರಿಸಿದರು.
2025-26ನೇ ಸಾಲಿಗಾಗಿ ಅಧಿಕಾರ ಸ್ವೀಕರಿಸಿದ ನೂತನ ಅಧ್ಯಕ್ಷ ಮಹಾದೇವ ಹಾಲಳ್ಳಿ ಅವರು ತಮ್ಮ ನಿಯೋಜಿತ ಅವಧಿಯ ಕಾರ್ಯಯೋಜನೆಗಳನ್ನು ವಿವರಿಸಿದರು.
ರಜತ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕ, ಸಾಹಿತಿ ಡಾ.ವಿ. ಡಿ. ಐಹೊಳ್ಳಿ ಅವರು ಪುಸ್ತಕದ ಸಿಂಹಾವಲೋಕನ ಮಾಡಿ ಮಾತನಾಡಿದರು. ಈ ಗ್ರಂಥವು ಪ್ರೋಬಸ್ ಕ್ಲಬ್ ನ 25 ವರ್ಷಗಳ ಸಾಧನೆಯನ್ನು ಮತ್ತು ಹಲವು ಉಪಯುಕ್ತ ಮಾಹಿತಿಗಳನ್ನು ಒಳಗೊಂಡಿದೆ ಎಂದು ಹೇಳಿದರು.
ಹಿಂದಿನ ಅಧ್ಯಕ್ಷ ವಿಠಲ ತೇಲಿ ಅವರು ಅತಿಥಿಗಳನ್ನು ಪರಿಚಯಿಸಿದರು. ಗುರುಲಿಂಗಪ್ಪ ಬಿರಾದಾರ ಪ್ರಾರ್ಥನೆ ಸಲ್ಲಿಸಿದರು. ಜಂಟಿ ಕಾರ್ಯದರ್ಶಿ ಡಾ. ಎಸ್ ಸಿ ಹಿರೇಮಠ ಹೊಸ ಪದಾಧಿಕಾರಿಗಳ ಪರಿಚಯ ಮಾಡಿಕೊಟ್ಟರು.
ಹಿರಿಯರಾದ ಸಹದೇವ ನಾಡಗೌಡ, ಏ.ಟಿ. ಹಿರೇಮಠ, ರಜತ ಮಹೋತ್ಸವ ಸಂಚಿಕೆಗೆ ಸಹಾಯ ಮಾಡಿದವರಿಗೆ ಸತ್ಕರಿಸಲಾಯಿತು. ಕೊನೆಯಲ್ಲಿ ಕಾರ್ಯದರ್ಶಿ ಶಶಿಧರ ಶಿರಹಟ್ಟಿ ಅವರು ವಂದಿಸಿದರು.
ಡಾ. ಧರ್ಮರಾಯ ಇಂಗಳೆ, ಎಸ್.ಎಂ. ದೇಸಾಯಿ, ಎಸ್.ಡಿ. ಬಿರಾದಾರ, ಮಹಾದೇವ ಹಾಲಳ್ಳಿ, ಎನ್.ಎಂ. ಸಿಂಧೂರ, ಅಶೋಕ ಉಪಾಧ್ಯಾಯ, ವಿ. ಎಂ. ಕಾಳೆ ಮುಂತಾದವರು
ಭಾಗವಹಿಸಿದ್ದರು.

Share