ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 19:
ಸಹಕಾರ ಸಂಘಗಳು ದೇಶ ವ್ಯಾಪಿ ಬೆಳೆಯಬೇಕು. ದೇಶದ ಆರ್ಥಿಕತೆಗೆ ಬಹುದೊಡ್ಡ ಪಾಲು ಸಹಕಾರ ಕ್ಷೇತ್ರ ನೀಡಲಿ. ಕರ್ನಾಟಕದ ಗದಗ ಜಿಲ್ಲೆಯ ಕಣಗಿನಾಳದಲ್ಲಿ ಸಿದ್ದನಗೌಡ ಪಾಟೀಲರು ಪ್ರಥಮ ಸಹಕಾರಿ ಸಂಘ ಪ್ರಾರಂಭಿಸಿದರು ಎಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ಅವರು ಹೇಳಿದರು.
ನಗರದ ಭಾವಸಾರ ಸಾಂಸ್ಕೃತಿಕ ಭವನದಲ್ಲಿ ನಡೆದ ವಿಜಯಪುರ ಜಿಲ್ಲಾ ಸೌಹಾರ್ದ ಸಹಕಾರಿಗಳ ಸಮಾವೇಶ ಹಾಗೂ ಶೇಅರ ಸರ್ಟಿಫಿಕೇಟ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಂಘದಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು. ಸಹಕಾರ ಸಂಘಗಳು ದೇಶ ವ್ಯಾಪ್ತಿ ಬೆಳೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ನಂಜೇಗೌಡ ಅವರು, ಸಹಕಾರಿ ಕ್ಷೇತ್ರದಲ್ಲಿ 1990 ದಶಕದಲ್ಲಿ ಅಧಿಕಾರಶಾಹಿ ಪ್ರಾರಂಭವಾಗಿತ್ತು. ಇದರಿಂದಲೇ 1997 ಸೌಹಾರ್ದ ಕಾಯಿದೆ ಬರಲಿಕ್ಕೆ ಕಾರಣವಾಯಿತು. ಈ ಕಾಯ್ದೆ 2001ರಲ್ಲಿ ಪ್ರಾರಂಭವಾಯಿತು. ಸಹಕಾರಿಗಳು ಅತ್ಯಂತ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಸಹಕಾರಿ ಸಂಘಗಳು, ದೇಶದ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸುತ್ತಿವೆ ಎಂದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಹಿರಿಯ ಮಾರ್ಗದರ್ಶಕ ಅರವಿಂದ ದೇಶಪಾಂಡೆ ಅವರು, ಸಹಕಾರಿಗಳು ಜನರಿಗೆ ಪಾರದರ್ಶಕತೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕು. ಸಹಕಾರಿ ಒಕ್ಕೂಟಕ್ಕೆ ಎಲ್ಲ ಸಹಕಾರಿ ಸಂಘಗಳು ಸಹಕರಿಸಬೇಕು. ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಆದ್ಯತೆ ನೀಡಬೇಕು. ಸಹಕಾರಿ ಒಕ್ಕೂಟವು ಸಹಕಾರಿ ಸಂಘ ಅಷ್ಟೇ ಅಲ್ಲದೆ ಇತರೆ ಕ್ಷೇತ್ರಗಳಿಗೆ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ದಿವ್ಯ ಸಾನ್ನಿಧ್ಯವನ್ನು ಷಣ್ಮುಖಾರೂಡ ಮಠ ವಿಜಯಪುರ ಮತ್ತು ಹುಬ್ಬಳಿಯ ಶಾಂತಾಶ್ರಮದ ಪರಮಪೂಜ್ಯರಾದ ಶ್ರೀ ಅಭಿನವ ಸಿದ್ಧಾರೂಢ ಸ್ವಾಮಿಗಳು ವಹಿಸಿದ್ದರು.
ವಿಜಯಪುರ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಸಂಜಯ ಪಾಟೀಲ ಕನಮಡಿ ಅವರು, ಒಕ್ಕೂಟದ ಧ್ಯೇಯ ಉದ್ದೇಶಗಳನು ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪಾಧ್ಯಕ್ಷ ಚಂದ್ರಶೇಖರ ಕವಟಗಿ ಸ್ವಾಗತಿಸಿದರು.
ಸಭೆಯಲ್ಲಿ ಸಹಕಾರ ರತ್ನ ಪುರಸ್ಕೃತರಾದ ಶಂಕರಗೌಡ ಪಾಟೀಲ ಅವರಿಗೆ ಸತ್ಕಾರ ಮಾಡಲಾಯಿತು. ಒಕ್ಕೂಟದ ಶೇರ್ ಸದಸ್ಯರಿಗೆ ಶೇರ್ ಸರ್ಟಿಫಿಕೇಟ್ ವಿತರಣೆ ಮಾಡಲಾಯಿತು .
ಸಭೆಯಲ್ಲಿ ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ಪ್ರಭುದೇವ ಮ್ಯಾಗ್ನೂರ , ರಾಷ್ಟ್ರೀಯ ಸಂಯೋಜಕ ರಮೇಶ ವೈದ್ಯ ಜಿ, ಹಿರಿಯರಾದ ಸಿದ್ರಾಮಪ್ಪ ಉಪ್ಪಿನ, ಎಂ.ಜಿ. ಪಾಟೀಲ ಒಕ್ಕೂಟದ ಆಡಳಿತ ಮಂಡಳಿಯ ಸದಸ್ಯರಾದ ಅರುಣ ವಾರದ , ಸುರೇಶ ಬಿರಾದಾರ, ಅರುಣ ಮಠ , ಸಿದ್ದು ಮಲ್ಲಿಕಾರ್ಜುನಮಠ , ಆರ್.ಡಿ. ಕುಲಕರ್ಣಿ, ಚಂದ್ರಶೇಖರ ಪಾಟೀಲ, ರಾಜು ಹಂಚಾಟೆ, ಯಮನಪ್ಪ ಸಾತಿಹಾಳ, ಮಲ್ಕಪ್ಪ ರೊಟ್ಟಿ, ವಿವೇಕಾನಂದ ಶಿರೋಳಕರ ಹಾಗೂ ಸಹಕಾರ ಭಾರತೀಯ ಪದಾಧಿಕಾರಿಗಳಾದ ಪರಶುರಾಮ ಚಿಂಚಲಿ ಮತ್ತು ದೀಪಕ ಶಿಂತ್ರೆ ಉಪಸ್ಥಿತರಿದ್ದರು. ಸೋಮನಿಂಗ ಕಟಾವಿ ನಿರೂಪಿಸಿದರು.
ಸಹಕಾರ ಸಂಘಗಳು ದೇಶ ವ್ಯಾಪಿ ಬೆಳೆಯಬೇಕು- ಅಣ್ಣಾಸಾಹೇಬ ಜೊಲ್ಲೆ


