ಬೆಳೆ ಸಮೀಕ್ಷೆದಾರರ ಸಂಘಟನೆಯಿಂದ ಮುಖ್ಯಮಂತ್ರಿಗಳ ಬಳಿ ನಿಯೋಗಕ್ಕೆ ಚಿಂತನೆ

ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 1 :
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಮಾಸಿಕ ಸಭೆಯಲ್ಲಿ ಬೆಳೆ ಸಮೀಕ್ಷೆದಾರರ ಹಿತಾಸಕ್ತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ “ನಮ್ಮೆಲ್ಲರ ಚಿತ್ತ ಸಂಘಟನೆಯ ನವನಿರ್ಮಾಣದತ್ತ ” ಎಂಬ ಶೀರ್ಷಿಕೆಯಡಿ ಹಲವಾರು ನಿರ್ಣಯವನ್ನು ತೆಗೆದುಕೊಳ್ಳಲಾಯಿತು..
ಸಭೆಯ ನಂತರ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರಿಗೆ ಭೇಟಿ ನೀಡಿ ಅವರ ನೇತೃತ್ವದಲ್ಲಿಯೇ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಬಳಿ 31 ಜಿಲ್ಲೆಯ ಬೆಳೆ ಸಮೀಕ್ಷೆದಾರರ ತಂಡದಿಂದ ಖುದ್ದಾಗಿ ಭೇಟಿಯಾಗಲು ಮತ್ತು ಪ್ರಧಾನ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಲು ಹಾಗೂ ಮನವಿ ಕೊಡಲು ಸಮಯಾವಕಾಶ ಕಲ್ಪಿಸಿಕೊಡಲು ಮತ್ತು ಮುಂಬರುವ ಬಜೇಟ್‌ನಲ್ಲಿ ಅನುಕೂಲವಾಗುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರುವಂತೆ ತಿಳಿಸಿದರು.
ಈ ವೇಳೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಬೆಳೆ ಸಮೀಕ್ಷೇದಾರರ ಮನವಿ ಸ್ವೀಕರಿಸಿ ಖುದ್ದಾಗಿ ನಿಮ್ಮ ನಿಯೋಗವನ್ನು ಕೃಷಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಬಳಿ ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು.
ಈ ಒಂದು ಅವಕಾಶವನ್ನು 31 ಜಿಲ್ಲೆಗಳ ಬೆಳೆ ಸಮೀಕ್ಷೆದಾರರ ಸಂಘಟನೆಯ ಜಿಲ್ಲಾ ಘಟಕದ ಮುಂದಾಳುಗಳು ಸದುಪಯೋಗ ಪಡೆದುಕೊಳ್ಳಲು ವಿಜಯಪುರ ಜಿಲ್ಲಾ ಘಟಕದ ಮುಂದಾಳುಗಳು ಕರೆಯನ್ನು ಕೊಟ್ಟಿದ್ದಾರೆ.
ಈ ವೇಳೆ ಮುಖಂಡರಾದ ನರಸಪ್ಪ ನಾವಿ, ಭೀಮಪ್ಪ ತಳವಾರ, ಸೋಮಶೇಖರ ನಾಯ್ಕೋಡಿ, ಮಲ್ಲಿಕಾರ್ಜುನ ಪೂಜೇರಿ, ಸದಾಶಿವ ಚಲವಾದಿ ಸೇರಿದಂತೆ ಇತರರು ಇದ್ದರು.

Share this