ಸಪ್ತಸಾಗರ ವಾರ್ತೆ, ವಿಜಯಪುರ, ಮೇ. 22:
ಗುರುವಾರ (ಮೇ 21) ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ಆಳಂದ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ವಾಪಸ್ ಪಡೆದಿದೆ. 2022 ರಲ್ಲಿ ಸದರಿ ದರ್ಗಾದಲ್ಲಿ ದೊಡ್ಡ ಮಟ್ಟದ ಗಲಾಟೆಯಾಗಿ, ತಿಳಿಗೇಡಿಗಳು ಶಿವಲಿಂಗದ ಮೇಲೆ ಮಲ ಮೂತ್ರ ವಿಸರ್ಜನೆ ಮಾಡಿದ್ದರು.
ಆರೋಪಿತರು ‘ಅಮಾಯಕರು’ ಎಂದು ಬಿಂಬಿಸುತ್ತಿರುವ ಸರ್ಕಾರದ ಈ ನಡೆ ಸಂವಿಧಾನ ವಿರೋಧಿಯಾಗಿದೆ. ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಉದ್ದೇಶಪೂರ್ವಕವಾಗಿ ದೊಂಬಿ, ಹಿಂಸಾಚಾರ, ಕೋಮು ಗಲಭೆ, ವಿಗ್ರಹ ವಿರೂಪಗೊಳಿಸುವುದು, ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದವರ ತಪ್ಪನ್ನು ಮನ್ನಿಸಿ ಅವರನ್ನು ದೋಷಮುಕ್ತ ಮಾಡಲು ಹೊರಟಿರುವ ಈ ನಡೆಯನ್ನು ಹಿಂದೂಗಳು ಎಂದೂ ಕ್ಷಮಿಸುವುದಿಲ್ಲ.
ಅಲ್ಪ ಸಂಖ್ಯಾತರನ್ನು ಓಲೈಸಲು ಸರ್ಕಾರ ಕೈಗೊಂಡಿರುವ ಈ ನಿರ್ಧಾರವನ್ನು ಹಿಂದೂಗಳು ಎಂದೂ ಕ್ಷಮಿಸುವುದಿಲ್ಲ. ಒಟ್ಟು 13 ಪ್ರಕರಣವನ್ನು ವಾಪಾಸ್ ಪಡೆದಿರುವುದು ಕಾನೂನು ಬಾಹಿರ ಕ್ರಮವಾಗಿದೆ.
ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಚರ್ಚಿಸಬೇಕಾದ ಸಚಿವರು, ಓಲೈಕೆ ರಾಜಕಾರಣಕ್ಕೆ, ತನ್ನ ವೋಟ್ ಬ್ಯಾಂಕ್ ಸಧೃಡಗೊಳಿಸಲು ಈ ರೀತಿಯಾದ ಕಾನೂನು ಬಾಹಿರ ಕ್ರಮವನ್ನು ಕೈಗೊಳ್ಳುತ್ತಿರುವುದು ಖಂಡನೀಯ ಎಂದು ನಗರ ಶಾಸಕ ಬಸನಗೌಡ ಪಾಟೀಲ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿದ್ದಾರೆ.
ಆಳಂದ ಲಾಡ್ಲೆ ಮಶಾಕ್ ದರ್ಗಾ ಗಲಾಟೆ ಕೇಸ್ ವಾಪಸ್ ನಿರ್ಧಾರ :ಯತ್ನಾಳ ವಿರೋಧ


