ಸಪ್ತಸಾಗರ ವಾರ್ತೆ, ವಿಜಯಪುರ, ಮಾ. 20:
ರೌಡಿ ರೋಡ್ ರೋಮಿಯೋಗಳ ಕಾಟ, ಲವ್ ಜಿಹಾದ್ ನಂತಹ ಪ್ರಕರಣಗಳನ್ನು ತಡೆಯಲು ಪೊಲೀಸ್ ಇಲಾಖೆಗೆ ಸ್ವಾಮಿ ವಿವೇಕಾನಂದ ಸೇನೆಯ ರಾಜ್ಯಾಧ್ಯಕ್ಷ ರಾಘವ ಅಣ್ಣಿಗೇರಿ ಅವರು ಆಗ್ರಹಿಸಿದ್ದಾರೆ.
ಜಿಲ್ಲಾ ಪೊಲೀಸ್ ಇಲಾಖೆ ಅತ್ಯುತ್ತಮ ಕಾರ್ಯ ಮಾಡುತ್ತಿದ್ದು, ಈಗಾಗಲೇ ದರೋಡೆಕೋರರು, ಕಳ್ಳರು, ಸಮಾಜಘಾತಕರು ಮೇಲೆ ಕ್ರಮ ಕೈಗೊಳ್ಳುವದರ ಜೊತೆಗೆ ಜನತೆಗೆ ಕಿರಿಕಿರಿ ಉಂಟುಮಾಡಿ ಶಬ್ದ ಮಾಲಿನ್ಯ ಮಾಡುತ್ತಿರುವ ವಾಹನಗಳ ಸೈಲೆನ್ಸರ್ ಗಳನ್ನು ವಶಪಡಿಸಿಕೊಂಡು, ನಾಶಪಡಿಸಿ ಕೇಸ್ ದಾಖಲಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಅನೈತಿಕ ಚಟುವಟಿಕೆ ಮಾಡುವವರು, ಮದ್ಯಪಾನ ಮಾಡುವವರ ಮೇಲೆ ಕ್ರಮ ಕೈಗೊಂಡಿದ್ದು ಸ್ವಾಗತಾರ್ಹ. ಇನ್ನೊಂದು ಸೂಕ್ಷ್ಮ ಹಾಗೂ ಗಂಭೀರ ವಿಷಯವೇನೆಂದರೆ
ವಿಜಯಪುರ ನಗರದ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿನಿಯರನ್ನು ಕೆಲ ಕಾಮುಕ “ರೌಡಿ ರೋಡ್ ರೋಮಿಯೋ” ಗಳು ಹಿಂಬಾಲಿಸುವುದು, ಒತ್ತಾಯಪೂರ್ವಕವಾಗಿ ಅವರ ಫೋನ್ ನಂಬರ್ ಗಳನ್ನು ತೆಗೆದುಕೊಳ್ಳುವುದು, ಪ್ರತಿನಿತ್ಯ ವಿದ್ಯಾರ್ಥಿನಿಯರು ಹೋಗುವ ಹಾಗೂ ಬರುವ ಸಮಯಕ್ಕಾಗಿ ಕಾಯುತ್ತಾ, ಚುಡಾಯಿಸುವುದು ಕಂಡುಬಂದಿರುತ್ತದೆ, ಕೆಲ ವಿದ್ಯಾರ್ಥಿನಿಯರು ಮುಜುಗರಕ್ಕೆ ಒಳಗಾಗಿ ಮನೆಯಲ್ಲಿ ಈ ವಿಷಯವನ್ನು ಹೇಳದೆ ಮೌನವಾಗಿರುವದರಿಂದ, ಈ ರೋಡ್ ರೋಮಿಯೋ ಗಳ ಉಪಟಳ ಹೆಚ್ಚಾಗಿ ಇವರಿಗೆ ಭಯವಿಲ್ಲದಂತಾಗಿದೆ. ಹಲವು ಬಾರಿ ಅನೇಕ ತೊಂದರೆಗಳಾಗಿ ಲೈಂಗಿಕ ಕಿರುಕುಳ ಉಂಟಾದರೂ ಕೂಡ ಪೊಲೀಸ್ ಕಂಪ್ಲೇಂಟ್ ಕೊಡಲು ಮುಗ್ಧ ಜನರು ಹಿಂಜರಿಯುತ್ತಿದ್ದಾರೆ. “ಲವ್ ಜಿಹಾದ್” ನಂತಹ ಪ್ರಕರಣಗಳು ಕೂಡ ಜಾಸ್ತಿಯಾಗುತ್ತಿದ್ದು, ಮುಗ್ಧ ಹಿಂದು ಯುವತಿಯರನ್ನು ಮೋಸ ಮಾಡಿ, ಒತ್ತಡ ಹೇರಿ ವಿವಾಹ ಮಾಡಿಕೊಂಡು, ಮತಾಂತರ ಮಾಡಿದ ಪ್ರಕರಣಗಳು ಕೂಡ ಬೆಳಕಿಗೆ ಬಂದಿವೆ. ಇಂತಹ ಘಟನೆಗಳಿಂದ ಪೋಷಕರು ಭಯಭೀತರಾಗಿದ್ದಾರೆ, ಪರೀಕ್ಷೆ ಸಮಯಗಳಲ್ಲಿಯೂ ಕೂಡ ಕೆಲ ಪುಂಡರು ತಮ್ಮ ಉಪಟಳವನ್ನು ಮುಂದುವರಿಸಿದ್ದಾರೆ. ಕಾರಣ ಜಿಲ್ಲಾ ಪೊಲೀಸ್ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಶಾಲಾ ಕಾಲೇಜುಗಳ ಮುಂದೆ ಪೊಲೀಸರು ಮುಫ್ತಿಯಲ್ಲಿ ಹೋಗಿ ಇಂತಹ ಕಿಡಿಗೇಡಿಗಳನ್ನು ಬಂಧಿಸಬೇಕಾಗಿದೆ.. ಪೋಲಿಸ್ ನವರು ಸೈರನ್ ಹಾಕುತ್ತ ಪೊಲೀಸ್ ಜೀಪ್ ತೆಗೆದುಕೊಂಡು ಹೋದರೆ ಪ್ರಯೋಜನವಿಲ್ಲ, ರೌಡಿ ರೋಮಿಯೋಗಳು ಪೋಲಿಸ್ ಯುನಿಫಾರ್ಮ್ ಹಾಗೂ ವಾಹನಗಳನ್ನು ನೋಡಿಯೇ ಪರಾರಿಯಾಗಿರುತ್ತಾರೆ. ಹೀಗಾಗಿ ಪೊಲೀಸ್ ರು ಮುಫ್ತಿಯಲ್ಲಿ ಹೋಗಿ ಇಂಥವರ ಮೇಲೆ ಕ್ರಮ ಜರುಗಿಸಬೇಕೆಂದು ಸ್ವಾಮಿ ವಿವೇಕಾನಂದ ಸೇನೆ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.
ರೋಮಿಯೋಗಳ ಕಾಟ, ಲವ್ ಜಿಹಾದ್ ನಂತಹ ಪ್ರಕರಣಗಳನ್ನು ತಡೆಯಲು ಪೊಲೀಸ್ ಇಲಾಖೆಗೆ ಆಗ್ರಹ


