ಸುಸ್ಥಿರ ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನ ಅತ್ಯವಶ್ಯಕ: ಹಾಸಿಂಪೀರ ವಾಲಿಕಾರ

ಸಪ್ತಸಾಗರ ವಾರ್ತೆ, ವಿಜಯಪುರ, ಜ. 6 :
ಸುಸ್ಥಿರ ಕೃಷಿಯಲ್ಲಿ ಆಧುನಿಕ ಡಿಜಿಟಲ್ ತಂತ್ರಜ್ಞಾನ ಅಳವಡಿಸಿ ಕೃಷಿ ಮಾಡುವುದರಿಂದ ನೀರು ಹಾಗು ಗೊಬ್ಬರ ಸದ್ಬಳಕೆಯಾಗುತ್ತದೆ. ಫಲವತ್ತಾದ ಭೂಮಿಯ ತನ್ನ ಪೋಷಕಾಂಶವನ್ನು ಉಳಿದುಕೊಳ್ಳುತ್ತದೆ. ಇದರೊಂದಿಗೆ ಕೃಷಿ ಕಾರ್ಮಿಕರ ಕೊರತೆ ಉಂಟಾಗುವುದಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಧಾರವಾಡ ಕೃಷಿ ವಿವಿ ಹಾಗೂ ವಿಜಯಪುರ ಕೃಷಿ ಮಹಾವಿದ್ಯಾಲಯ ಆಶ್ರಯದಲ್ಲಿ ನಡೆದ ಕೃಷಿಮೇಳದ ಮೂರನೇ ದಿನದ ಸುಸ್ಥಿರ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳು ಕುರಿತು ಗೋಷ್ಠಿಯಲ್ಲಿ ಮಾತನಾಡಿ, ನೆಲ, ಜಲ, ಭಾಷೆಯ ಪರಿಪಾಲನೆ ಮಾಡುವುದು. ಜೊತೆಗೆ ಆಧುನಿಕ ಕೃಷಿ ಅಳವಡಿಸಿಕೊಂಡು ನೀರುಣಿಸಲು ಸೆನ್ಸರ ಉಪಯೋಗಿಸಬೇಕು. ದೊಡ್ಡ ರೈತರು ಹವಾಮಾನ ಮುನ್ಸೂಚನೆ ಕೇಂದ್ರ ಅಳವಡಿಸಿಕೊಳ್ಳಬೇಕು. ಸೋಲೋನಾಯಿಡ ವಾಲ್ವ ಅಳವಡಿಸಿ ಎಲ್ಲಿಂದಾದರೂ ನೀರು ಮೊಬೈಲ್ ಮೂಲಕ ಉಣಿಸಬಹುದು. ಅಟೋಮೆಟಿಕ ಪಗಿ೯ಶನ ಡಿಸ್ಪೆನ್ಸರ ಹೊಲಗಳಲ್ಲಿ ಅಳವಡಿಸಿ ಕೃಷಿ ಮಾಡುವುದರಿಂದ ಇಳುವರಿ ಹೆಚ್ಚಾಗಿ ಬರುತ್ತದೆ. ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ಬೆಳೆಯಬಹುದು. ಬೆಂಗಳೂರಿನಿಂದ ವಿಜಯಪುರ ಜಿಲ್ಲೆಯ ಯಾವುದೇ ಭಾಗದ ಹೊಲಕ್ಕೆ ಮೊಬೈಲ್ ಮುಖಾಂತರ ನೀರು ಹಾಗೂ ಗೊಬ್ಬರ ನೀಡಬಹುದು. ಅಲ್ಲದೆ ಯಾವುದೇ ಸಮಯದಲ್ಲಿ ವಿದ್ಯುಚ್ಛಕ್ತಿ ಯಾವುದೇ ಸಮಯದಲ್ಲಿ ಬಂದರೂ ಸೆನ್ಸರ ಮೂಲಕ ತಿಳಿದು ನೀರಾವರಿ ಮಾಡಬಹುದು ಎಂದರು.
ಡಾ. ಜಿ. ನಾರಪ್ಪ. ಒಣಬೇಸಾಯದಲ್ಲಿ ನಿಖರ ಕೃಷಿ ತಂತ್ರಜ್ಞಾನ ಬಳಕೆ ಕುರಿತು ಮಾತನಾಡಿದರು.
ಡಾ. ರಮೇಶ ಬೀರಗೆ ಆಧುನಿಕ ಕೃಷಿಯಲ್ಲಿ ಯಂತ್ರೋಪಕರಣಗಳು ಕುರಿತು ಮಾತನಾಡಿದರು.
ಶ್ರೀಶೈಲ ರಾಠೋಡ ಹಾಗೂ ಗಿರೀಶ ಭದ್ರಗೊಂಡ ಕೃಷಿಯಲ್ಲಿ ತಂತ್ರಜ್ಞಾನ ಅತ್ಯವಶ್ಯಕ ಕುರಿತು ಉಪನ್ಯಾಸ ನೀಡಿದರು.
ಪ್ರಕಾಶ ಡೋಮನಾಳ, ನಿಂಗಪ್ಪ ಬಾಗೇವಾಡಿ, ಡಾ. ಎಂ.ಬಿ. ಮಂಜುನಾಥ, ಡಾ. ಸುನೀತಾ ಎನ್. ಡಿ., ಡಾ. ಬಸಮ್ಮ, ಡಾ. ವಿ.ಆಯ್. ಬೆಣಗಿ ಉಪಸ್ಥಿತರಿದ್ದರು. ಧಾರವಾಡ ಕೃಷಿ ಕಾಲೇಜ್ ವಿಸ್ತರಣಾ ನಿರ್ದೇಶಕ.ಡಾ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಡಾ. ಪ್ರಕಾಶ ತಮಗೊಂಡ ನಿರೂಪಿಸಿದರು. ಡಾ. ಎಂ.ವಾಯ್. ತೆಗ್ಗಿ ವಂದಿಸಿದರು.

Share this