ಸಪ್ತಸಾಗರ ವಾರ್ತೆ ವಿಜಯಪುರ, ಸೆ. 20: ನಗರದ ಬಿ.ಎಲ್.ಡಿ.ಇ ಡಿಮ್ಡ್ ವಿಶ್ವವಿದ್ಯಾಲಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (AB-ARK) ಯೋಜನೆ ಅಡಿಯಲ್ಲಿ ರೋಗಿಗಳು (AB-ArK) ಪ್ಯಾಕೇಜ್ ಗಳಲ್ಲಿ 900 (3A) ಕೋಡ್ ಗಳು ಮತ್ತು 254 (2B) ಕೋಡ್ ಗಳಲ್ಲಿ ಬರುವ ಕಾಯಿಲೆಗಳಿಗೆ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಂದ ಶಿಫಾರಸು ಇಲ್ಲದೇ ನೇರವಾಗಿ ಚಿಕಿತ್ಸೆ ಪಡೆಯಬಹುದಾಗಿದೆ.
ಈ ಮುಂಚೆ ಈ ಸ್ಕೀಂ ನಡಿ ನವಜಾತ ಶಿಶುಗಳ ತೀವ್ರ ನಿಗಾ ಘಟಕಗಳು, ಕಾರ್ಡಿಯೋಥೊರಾಸಿಕ್ ಮತ್ತು ಪ್ಲಾಸ್ಚಿ ಶಸ್ತ್ರಚಿಕಿತ್ಸೆ, ಹೃದ್ರೋಗ, ನರಶಸ್ತ್ರಚಿಕಿತ್ಸೆ, ಸಂಕೀರ್ಣ ಮೂಳೆ ಶಸ್ತ್ರಚಿಕಿತ್ಸೆಗಳ ವಿಶೇಷತೆಗಳಿಗಾಗಿ 2B ಮತ್ತು 3A ನ ಎಲ್ಲಾ ಕೋಡ್ ಗಳ ಅಡಿಯಲ್ಲಿ ಕಾರ್ಯವಿಧಾನಗಳಿಗೆ ಸೇವೆಗಳನ್ನು ಪಡೆಯಲು ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಯಗಳಿಂದ ಶಿಫಾರಸು ಪತ್ರ ಪಡೆದು ತರಬೇಕಿತ್ತು. ಆದರೆ, ಸರಕಾರ ಈಗ ಈ ಕೋಡ್ ಗಳ ಅಡಿ ಬರುವ ಕಾಯಿಲೆಗಳಿಗೆ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ನೇರವಾಗಿ ಚಿಕಿತ್ಸೆ ಪಡೆಯಲು ಅವಕಾಶ ಒದಗಿಸಿದೆ.
ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಆರ್. ಎಂ. ಹೊನ್ನುಟಗಿ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಬಿಎಲ್ ಡಿಇ ಆಸ್ಪತ್ರೆಯಲ್ಲಿ ನೇರ ಆರೋಗ್ಯ ಚಿಕಿತ್ಸೆ


