10 ಕೆಜಿ ಫೈಬರ್ ಗ್ಯಾಸ್ ಸಿಲಿಂಡರ್ ವಿತರಣೆ ಆರಂಭ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 12: ಭಾರತ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್‌ (ಬಿಪಿಸಿಎಲ್) ಸಹಯೋಗದಲ್ಲಿ ಭಾರತ್ ಗ್ಯಾಸ್‌ನ 10 ಕೆಜಿ ತೂಕದ ನೂತನ ಫೈಬರ್ ಸಿಲಿಂಡರ್ ವಿತರಣಾ ಕಾರ್ಯಕ್ಕೆ ನಗರದ ಮಧುವನ ಸಭಾಂಗಣದಲ್ಲಿ ವೈಭವದ ಚಾಲನೆ ದೊರೆಯಿತು.
ಸಮಾರಂಭದಲ್ಲಿ ನೂತನ ಫೈಬರ್ ಸಿಲಿಂಡರ್ ಅನಾವರಣಗೊಳಿಸಿ ಗ್ರಾಹಕರಿಗೆ ಹಸ್ತಾಂತರಿಸಲಾಯಿತು.
ಈ ವೇಳೆ ಮಾತನಾಡಿದ ಸಮಾಜ ಸೇವಕ ಹಾಗೂ ಓಂ ಸಾಯಿ ಹೋಂ ನೀಡ್ಸ್ ಮುಖ್ಯಸ್ಥ ಉಮೇಶ ಕಾರಜೋಳ, ಅಡುಗೆ ಅನಿಲವು ಜನಜೀವನದ ಅವಿಭಾಜ್ಯ ಅಗತ್ಯ ವಸ್ತುವಾಗಿದೆ. ಈ ಹಿಂದೆ ಭಾರೀ ಲೋಹದ ಸಿಲಿಂಡರ್‌ಗಳ ಸಂಪರ್ಕ ಪಡೆಯುವುದು ಹಾಗೂ ಅವುಗಳನ್ನು ಸಾಗಿಸುವುದು ಗ್ರಾಹಕರಿಗೆ ಕಷ್ಟಕರವಾಗಿತ್ತು. ಇದೀಗ 10 ಕೆಜಿ ತೂಕದ ಫೈಬರ್ ಸಿಲಿಂಡರ್ ಪರಿಚಯವಾಗಿರುವುದರಿಂದ ಸುಲಭವಾಗಿ ಸಾಗಾಟ ಮಾಡಬಹುದಾಗಿದ್ದು, ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಬಿಪಿಸಿಎಲ್ ಹಿರಿಯ ಅಧಿಕಾರಿ (ಮ್ಯಾನೇಜರ್) ಧರ್ಮರಾಜನ್ ನೂತನ ಫೈಬರ್ ಸಿಲಿಂಡರ್‌ನ ವಿಶೇಷತೆಗಳು ಹಾಗೂ ಬಳಕೆಯ ಅನುಕೂಲಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿಜಯಕುಮಾರ ಪಾಟೀಲ್, ಡಿ.ಎಸ್.ಪಿ. ಟಿ.ಎಸ್. ಸುಲ್ಪಿ, ಎಂ. ಕಾರ್ತಿಕೆಯನ್, ವಿಲಾಸ ವ್ಯಾಸ, ಸಚೀನ ಪಟ್ಟಣಶೆಟ್ಟಿ ಹಾಗೂ ಶ್ರೀನಿವಾಸ ಕಾಂಬ್ಳೆಕರ್ ಉಪಸ್ಥಿತರಿದ್ದರು.

Share this