ವಿಜಯಪುರ ಐತಿಹಾಸಿಕ ಸ್ಮಾರಕ ತಾಜಬಾವಡಿಗೆ ಜಿಲ್ಲಾಧಿಕಾರಿ ಡಾ. ಆನಂದ‌ ಭೇಟಿ, ಪರಿಶೀಲನೆ

ಸಪ್ತಸಾಗರ ವಾರ್ತೆ, ವಿಜಯಪುರ,ಸೆ.23:
ನಗರದಲ್ಲಿ ಇರುವ ಐತಿಹಾಸಿಕ ಬಾವಿಯಾದ ತಾಜಬಾವಡಿ ಸ್ಮಾರಕಕ್ಕೆ ಜಿಲ್ಲಾಧಿಕಾರಿ ಡಾ. ಆನಂದ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದರು.
ಅಡಾಪ್ಟ ಎ ಮೊನೊಮೆಂಟ್ ಯೋಜನೆಯಡಿ ತಾಜಬಾವಡಿ ಸ್ಮಾರಕವನ್ನು World Monument Fund India Associations Mumbai ಸಂಸ್ಥೆ ಅವರು ದತ್ತು ಪಡೆದಿದ್ದು, ಈ ಸ್ಮಾರಕದಲ್ಲಿ ಸಂರಕ್ಷಣೆ ಮತ್ತು ಪ್ರವಾಸಿ ಮೂಲಭೂತ ಸೌಕರ್ಯಗಳು, ಸೌಂದರೀಕರಣ, ಸುಧಾರಿತ ಪ್ರವಾಸಿ ಸೌಕರ್ಯಗಳನ್ನು ಒದಗಿಸಿ ದೇಶಿ-ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಹಲವು ಯೋಜನೆ ರೂಪಿಸಿ ಹಮ್ಮಿಕೊಂಡಿರುತ್ತಾರೆ.
ತಾಜಬಾವಡಿ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಕರ್ಯ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಜರುಗಿಸಲು ಡಿಸಿ ಸೂಚಿಸಿದರು.
ಕಲುಷಿತ ನೀರು ಬಾವಡಿ ಸೇರದಂತೆ ಅಗತ್ಯ ಕ್ರಮವಹಿಸುವುದು.ಡಿಸೆಂಬರ‌ ಒಳಗಾಗಿ ನೀರನ್ನು ಸಾರ್ವಜನಿಕ ಬಳಕೆಗೆ ಉಪಯೋಗಿಸಲು ಒದಗಿಸಬೇಕು. ತಾಜಬಾವಡಿಯ ಆವರಣದಲ್ಲಿರುವ ವಿದ್ಯುತ್ ಪರಿವರ್ತಕ ಬೇರೆಡೆ ಸ್ಥಳಾಂತರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ‌‌ ಸಂದರ್ಭದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಿನ್ನೆಲೆಯಲ್ಲಿ ಕರಪತ್ರ ಬಿಡುಗಡೆಗೊಳಿಸಿದರು.
ಮಹಾನಗರಪಾಲಿಕೆ ಆಯುಕ್ತ ವಿಜಯ‌ ಮೆಕ್ಕಳಕಿ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ ಅರವಿಂದ ಹೂಗಾರ, World Monument Funds India Associations, Mumbai ಸಂಸ್ಥೆಯ ಅನಾಬೇಲ್ ಲೋಪೆಜ್ ಯೋಜನಾ ನಿರ್ದೇಶಕರು ಹಾಗೂ ಸಂಸ್ಥೆಯ ಪಧಾದಿಕಾರಿಗಳಾದ ಬಿ.ಶರತಚಂದ್ರ, ಪಾಲಿಕೆ ಸದಸ್ಯರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share