ಜೂ. 13ರಂದು ಜಿಲ್ಲಾ ಮಟ್ಟದ ಅಸ್ಮಿತಾ ಖೇಲೋ ಇಂಡಿಯಾ ವುಮೆನ್ಸ್ ಸೈಕ್ಲಿಂಗ್ ಸಿಟಿ ಲೀಗ್

ಸಪ್ತಸಾಗರ ವಾರ್ತೆ, ವಿಜಯಪುರ, ಜೂ. 11:
ಜಿಲ್ಲಾ ಮಟ್ಟದ ಅಸ್ಮಿತಾ ಖೇಲೋ ಇಂಡಿಯಾ ವುಮೆನ್ಸ್ ಸೈಕ್ಲಿಂಗ್ ಸಿಟಿ ಲೀಗ್ ಜೂ. 13ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ವರೆಗೆ ನಗರದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಅಮೇಚೂರು ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ರಾಜು ಬಿರಾದಾರ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಸ್ಪೋರ್ಟ್ಸ್ ಅಥಾರಿಟಿ ಆಪ್ ಇಂಡಿಯಾ, ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಅಮೇಚೂರು ಸೈಕ್ಲಿಂಗ್ ಅಸೋಸಿಯೇಷನ್, ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್, ವಿಶಾಲ ಸೈಕಲ್ ಮಾಲ್, ವಿಜಯಪುರ ಸೈಕ್ಲಿಂಗ್ ಗ್ರೂಪ್, ಜಿಲ್ಲಾ ಆಡಳಿತ ಹಾಗೂ ಯುವಜನ ಸೇವೆ ಮತ್ತು ಯುವ ಸಬಲೀಕರಣ ಕ್ರೀಡಾ ಇಲಾಖೆ ಸರಕಾರದಲ್ಲಿ ಈ ಕ್ರೀಡಾಪಟು ಆಯೋಜಿಸಲಾಗಿದೆ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂಸದ ರಮೇಶ ಜಿಗಜಿಣಗಿ ಸೈಕ್ಲಿಂಗ್ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಜೂ. 12ರ ಸಂಜೆವರೆಗೂ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಸುಮಾರು ಎರಡು ನೂರು ಸೈಕ್ಲಿಸ್ಟ್ ಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
13 ರಿಂದ 16 ವರ್ಷದೊಳಗಿನ ಬಾಲಕಿಯರಿಗಾಗಿ 5 ಕಿ.ಮೀ, 17 ಮತ್ತು 18 ವರ್ಷದೊಳಗಿನ ಬಾಲಕಿಯರಿಗಾಗಿ ೧೦ ಕಿಲೋಮೀಟರ, 19 ವಯಸ್ಸಿನ ಮೇಲ್ಪಟ್ಟ ಮಹಿಳೆಯರಿಗಾಗಿ 20 ಕಿ. ಮೀ,
ಸಾಮಾನ್ಯ ಸೈಕಲ್ ಸವಾರರಿಗಾಗಿ 16 ವರ್ಷದ ಬಾಲಕಿಯರಿಗಾಗಿ ಮೂರು ಕಿಲೋಮೀಟರ್, 18 ವರ್ಷದ ಬಾಲಕಿರಿಗಾಗಿ 6 ಕಿ. ಮೀ ಹಾಗೂ 19 ವರ್ಷ ಮೇಲ್ಪಟ್ಟ ಮಹಿಳೆಯರಿಗಾಗಿ 10 ಕಿಲೋಮೀಟರ್ ವಿಭಾಗಗಳಲ್ಲಿ ಸೈಕ್ಲಿಂಗ್ ಕ್ರೀಡಾಕೂಟ ಏರ್ಪಡಿಸಲಾಗಿದೆ ಎಂದು ವಿವರಿಸಿದರು.
ಮಹಿಳಾ ಸಬಲೀಕರಣ ಉದ್ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಈ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಎಲ್ಲ ಜಿಲ್ಲೆಗಳಲ್ಲೂ ಇಂಥ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗುತ್ತಿದೆ ಎಂದವರು ಹೇಳಿದರು.
ಸೈಕ್ಲಿಂಗ್ ವೆಲೋಡ್ರಮ ಬಳಸಿಕೊಳ್ಳಲು ಇನ್ನೂ ಸಣ್ಣ ಪುಟ್ಟ ಕೆಲಸಗಳು ಬಾಕಿ ಇರುವುದರಿಂದ ವಿಳಂಬವಾಗಲಿದೆ. ಹೀಗಾಗಿ ಈ ಕ್ರೀಡಾಕೂಟವನ್ನು ವೆಲೋಡ್ರಮನಲ್ಲಿ ಆಯೋಜನೆ ಮಾಡುತ್ತಿಲ್ಲ ಎಂದರು.
ಅಕ್ಟೋಬರ್ ವೇಳೆಗೆ ರಾಜ್ಯಮಟ್ಟದ ಕ್ರೀಡಾಕೂಟವನ್ನು ವೆಲೋಡ್ರಮನಲ್ಲಿ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದರು.
ಉಪಾಧ್ಯಕ್ಷ ಜಿ. ಎಂ. ಪತ್ತಾರ, ಪ್ರದೀಪ್ ರಾಥೋಡ್, ನಿಜಪ್ಪ ಎಂಟೆತ್ತ, ಸಂಜೀವ್ ಪಡತರೆ, ಲಕ್ಷ್ಮಣ ತೇರದಾಳ, ಶ್ರೀಕಾಂತ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

Share this