ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಜಿಲ್ಲಾ ಮಟ್ಟದ ರೆಂಜರ್ಸ್ ಪ್ರೇರಣಾ ತರಬೇತಿ ಶಿಬಿರ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 1: ನಗರದ ಬಿ ಎಲ್ ಡಿ ಇ ಸಂಸ್ಥೆಯ ಬಂಗಾರಮ್ಮ ಸಜ್ಜನ ಪದವಿ ಕಾಲೇಜು ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಜಿಲ್ಲಾ ಮಟ್ಟದ ರೆಂಜರ್ಸ್ ಪ್ರೇರಣಾ ತರಬೇತಿ ಶಿಬಿರ ಉದ್ಘಾಟನೆ ಮಾಡಲಾಯಿತು. ಶಿಬಿರದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ರೆಂಜರ್ಸ್ ವಿದ್ಯಾರ್ಥಿನಿಯರು ಉತ್ಸಾಹದಿಂದ ಭಾಗವಹಿಸಿದರು
ಮೊದಲಿಗೆ ಅಗಷ್ಟ 1 ರಂದು ಅಂತರಾಷ್ಟ್ರೀಯ ಸ್ಕಾರ್ಫ್ ಡೆ ಯನ್ನು ಕಾಲೇಜಿನ ಉಪನ್ಯಾಸಕರಿಗೆ ಸ್ಕಾರ್ಫ್ ಧಾರಣೆ ಮಾಡುವದರ ಮೂಲಕ ಆಚರಣೆ ಆಚರಣೆ ಮಾಡಲಾಯಿತು
ಶಿಬಿರದಲ್ಲಿ ಭಾಗವಹಿಸಿದ ರೆಂಜರ್ಸ್ ವಿದ್ಯಾರ್ಥಿನಿಯರು ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ನಾಯಕತ್ವ ಹಾಗೂ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳುವ ಅವಕಾಶವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ತರಬೇತು ಆಯುಕ್ತರು ಶ್ರೀ ಎಸ್ ಎಸ್ ಬಮ್ಮನಹಳ್ಳಿ ಅವರು
ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಮಟ್ಟದ ರೆಂಜರ್ಸ್ ಪ್ರೇರಣಾ ತರಬೇತಿ ಶಿಬಿರ ನಮ್ಮೆಲ್ಲರಿಗೂ ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದೆ. ಇಂತಹ ಶಿಬಿರಗಳು ವಿದ್ಯಾರ್ಥಿನಿಯರಲ್ಲಿ ಶಿಸ್ತು, ನಾಯಕತ್ವ, ಸೇವಾ ಮನೋಭಾವ, ಆತ್ಮವಿಶ್ವಾಸ ಹಾಗೂ ರಾಷ್ಟ್ರಪ್ರೇಮದಂತಹ ಮೌಲ್ಯಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಕಾರ್ಯಕ್ರಮ ಉದ್ದೇಶೀಸಿ ಜಿಲ್ಲಾ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಉಪಾಧ್ಯಕ್ಷರು ಮತ್ತು ಎಸ್ ಎಸ್ ಆವರಣದ ಆಡಳಿತಧಿಕಾರಿಗಳಾದ ಪ್ರೊ. ಐ.ಎಸ್. ಕಾಳ್ಳಪನವರ ಈ ಶಿಬಿರದಲ್ಲಿ ಪರಿಣಿತ ತರಬೇತುದಾರರಿಂದ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ದೊರೆಯಲಿದ್ದು, ಪ್ರತಿಯೊಬ್ಬ ರೆಂಜರ್ ತಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಲು ಇದು ಉತ್ತಮ ಅವಕಾಶವಾಗಿದೆ. ಇಲ್ಲಿ ಕಲಿಯುವ ಪ್ರತಿಯೊಂದು ವಿಷಯವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರಾಗುವ ಸಂಕಲ್ಪವನ್ನು ಎಲ್ಲರೂ ಮಾಡಬೇಕೆಂದು ನಾನು ಆಶಿಸುತ್ತೇನೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಂಗಾರಮ್ಮ ಸಜ್ಜನ ಕಾಲೇಜಿನ ಪ್ರಾಚಾರ್ಯ ವಾಯ್ ತಮ್ಮಣ್ಣ ಇಂದು ಆಯೋಜಿಸಲಾಗಿರುವ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರೆಂಜರ್ಸ್ ಜಿಲ್ಲಾ ಮಟ್ಟದ ಪ್ರೇರಣಾ ತರಬೇತಿ ಶಿಬಿರವು ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪಾಲನೆ, ನಾಯಕತ್ವ, ಸೇವಾ ಮನೋಭಾವ, ಆತ್ಮವಿಶ್ವಾಸ ಮತ್ತು ರಾಷ್ಟ್ರೀಯ ಏಕತೆಯಂತಹ ಮೌಲ್ಯಗಳನ್ನು ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ಪಾತ್ರ ಅನನ್ಯವಾಗಿದೆ. ಇಂತಹ ತರಬೇತಿ ಶಿಬಿರಗಳು ಕೇವಲ ಪಾಠ ಕಲಿಸುವುದಲ್ಲ, ಜೀವನವನ್ನು ರೂಪಿಸುವ ಕಾರ್ಯವನ್ನು ಮಾಡುತ್ತವೆ. ಇಲ್ಲಿ ನೀವು ಪಡೆಯುವ ಅನುಭವ, ಕೌಶಲ್ಯ ಮತ್ತು ಮೌಲ್ಯಗಳು ನಿಮ್ಮ ಭವಿಷ್ಯದ ಯಶಸ್ಸಿಗೆ ಭದ್ರ ಬುನಾದಿಯಾಗಲಿವೆ. ಎಲ್ಲಾ ರೆಂಜರ್ಸ್ ವಿದ್ಯಾರ್ಥಿನಿಯರು ಈ ಶಿಬಿರದ ಪ್ರತಿಯೊಂದು ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕಲಿತ ವಿಷಯಗಳನ್ನು ತಮ್ಮ ಶಾಲೆ ಹಾಗೂ ಸಮಾಜದ ಅಭಿವೃದ್ಧಿಗೆ ಬಳಸಬೇಕು. ಸೇವೆಯೇ ನಮ್ಮ ಧ್ಯೇಯವಾಗಿರಬೇಕು ಎಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು ಕಾರ್ಯಕ್ರಮ ದಲ್ಲಿ ಜಿಲ್ಲಾ ಸಹಾಯಕ ತರಬೇತಿ ಆಯುಕ್ತರಾದ ರಾಜು ಆಲಕುಂಟೆ, ಕಾಲೇಜಿನ ಕೋ ಆರ್ಡಿನಾರಆಗಿರುವ ಭಕ್ತಿ ಮಹೇಂದ್ರಕರ, ರೇಂಜರ್ ಲೀಡರ ಸ್ವೇತಾ ಘಂಟಿ ಮೇಡಂ, ಜಿಲ್ಲಾ ಸಂಘಟನಾ ಆಯುಕ್ತರು ಡಿ ಬಿ ಅತ್ತಾರ, ಸ್ಕೌಟ್ ಮಾಸ್ಟರ್ ಡಿ ಕೆ ರಾಠೋಡ, ಮತ್ತು ರೇಂಜರ್ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Share this