ಕುಂಚಗನೂರ ಗ್ರಾಮದ ಬಳಿ ರೈತ ಮೊಸಳೆಗೆ ಹೇಗೆ ಬಲಿಯಾದ ಗೊತ್ತಾ?

ಸಪ್ತಸಾಗರ ವಾರ್ತೆ,ವಿಜಯಪುರ, ಆ. 23:
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಚಗನೂರ ಗ್ರಾಮದ ಬಳಿ ರೈತನೊಬ್ಬ ಕೃಷ್ಣಾ ನದಿಯಲ್ಲಿ ಮೊಸಳೆಗೆ ಬಲಿಯಾದ ಅವಘಡ ಶನಿವಾರ ಸಂಭವಿಸಿದೆ.
ರೈತ ಮೊಸಳೆಗೆ ಹೇಗೆ ಬಲಿಯಾದ ಎಂಬ ಡಿಟೇಲ್ಸ್ ಇಲ್ಲಿದೆ ನೋಡಿ.
ಮುದ್ದೇಬಿಹಾಳ ತಾಲೂಕಿನ ಕುಂಚಗನೂರ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ
ಎತ್ತುಗಳ ಮೈ ತೊಳೆಯಲು ಹೋಗಿದ್ದ
ಖಾಸಪ್ಪ‌ ಕಂಬಳಿ (38) ಎಂಬುವನನ್ನು ಮೊಸಳೆ ಎಳೆದುಕೊಂಡು ಹೋಗಿದೆ.
ರೈತ ಖಾಸಪ್ಪ ಎತ್ತುಗಳ ಮೈ ತೊಳೆಯುವಲ್ಲಿ ಮೈ ಮರೆತಿದ್ದ. ಇದೇ ವೇಳೆ ಹಸಿವಿನಿಂದ ಚಡಪಡಿಸುತ್ತಿದ್ದ ಮೊಸಳೆ ಬೇಟೆಗಾಗಿ ಹೊಂಚು ಹಾಕಿ ಕಾಯುತ್ತಿತ್ತು. ತಡ ಮಾಡದೆ ಮೊಸಳೆ ರೈತನನ್ನು ನೀರಿನ ಆಳಕ್ಕೆ ಎಳೆದುಕೊಂಡು ಹೋಗಿ ತಿಂದು ಹಾಕಿದೆ.
ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ
ರೈತ ಖಾಸಪ್ಪನಿಗಾಗಿ ಶೋಧ ನಡೆಸಿದರು.
ನದಿ ಭಾಗದ 42 ಗ್ರಾಮಗಳಲ್ಲಿ ‌ಮೊಸಳೆ ಕಾಟ ಅವ್ಯಾಹತವಾಗಿ ಮುಂದುವರೆದಿದೆ. ಅರಣ್ಯ ಇಲಾಖೆಯವರು ಮೊಸಳೆಗಳನ್ನು ನಿಯಂತ್ರಣ ಮಾಡಿಲ್ಲ.
ಅರಣ್ಯ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಜನರು ಮೊಸಳೆಗೆ ಬಲಿಯಾಗುವುದು ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೆ ವೇಳೆ ಮೊಸಳೆ ಕಾಟವನ್ನು ಅರಣ್ಯ ಇಲಾಖೆಯವರು ಸಂಪೂರ್ಣವಾಗಿ ನಿಯಂತ್ರಣ ಮಾಡಿ ಜನರ ಜೀವ ರಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ.
ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ಘಟನೆ ನಡೆದಿದೆ.

Share