ದೋಣಿ ನದಿ ಪ್ರವಾಹ: ಸಾತಿಹಾಳ ಸೇತುವೆ ಜಲಾವೃತ, ರಸ್ತೆ ಸಂಚಾರಕ್ಕೆ ವ್ಯತ್ಯಯ

ಸಪ್ತಸಾಗರ ವಾರ್ತೆ, ವಿಜಯಪುರ, ಆ. ಮಳೆ ಅಬ್ಬರ ಕಡಿಮೆಯಾದರೂ ದೋಣಿ ನದಿ ಪ್ರವಾಹ ಇನ್ನು ಇಳಿಕೆಯಾಗಿಲ್ಲ. ಹೆಚ್ಚಾದ ನೀರಿನ ಹರಿವಿನಿಂದ ದೇವರ ಹಿಪ್ಪರಗಿ ತಾಲೂಕಿನ ಸಾತಿಹಾಳ ಬಳಿ ಸೇತುವೆ ಜಲಾವೃತಗೊಂಡಿದೆ. ಇದರಿಂದ ರಸ್ತೆ ಸಂಚಾರಕ್ಕೆ ತೀವ್ರ ಅಡಚಣಿಯಾಗಿದೆ.
ನಿನ್ನೆ ರಾತ್ರಿ ದೋಣಿ ನದಿ ಉಗಮ ಸ್ಥಾನದಲ್ಲಿ ಭಾರಿ ಪ್ರಮಾಣದ ಮಳೆ ಸುರಿದಿದ್ದರಿಂದ ದೇವರ ಹಿಪ್ಪರಗಿ ತಾಲೂಕಿನಲ್ಲಿ ಹರಿದಿರುವ ದೋಣಿ ನದಿಗೆ
ಇಂದು ಮಳೆ ಕಡಿಮೆಯಾಗಿದ್ದರೂ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ
ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸಾತಿಹಾಳ ಗ್ರಾಮದ ಬಳಿಯ ಸೇತುವೆ ಜಲಾವೃತಗೊಂಡಿದೆ.
ಸೇತುವೆ ಮುಳುಗಿದ ಪರಿಣಾಮ ಬಸವನಬಾಗೇವಾಡಿ ತಾಲೂಕಿನ ಸಾತಿಹಾಳ- ದೇವರಹಿಪ್ಪರಗಿ ಸಂಪರ್ಕ ಕಡಿತವಾಗಿದೆ.
ಜಲಾವೃತಗೊಂಡ ಸೇತುವೆ ಮೇಲೆ ಜನರು
ಅಪಾಯವನ್ನೂ ಲೆಕ್ಕಿಸದೇ ಓಡಾಡುತ್ತಿದ್ದಾರೆ. ನೀರಲ್ಲಿ ಮುಳುಗಿರುವ ಸೇತುವೆ ಮೇಲೆ ಬೈಕ್ ಹಾಗೂ ಇತರೆ ವಾಹನಗಳ ಸಂಚಾರ ಎಂದಿನಂತೆ ನಡೆದಿದ್ದು, ಸ್ವಲ್ಪ ಜಾಗರೂಕತೆ ತಪ್ಪಿದರೆ ಅಪಾಯ ತಪ್ಪಿದಲ್ಲ.
ಆತಂಕಗೊಂಡ ಗ್ರಾಮಸ್ಥರು
ಸಾತಿಹಾಳ ಸೇತುವೆಯನ್ನು ಎತ್ತರಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Share