ಉಪರಾಷ್ಟ್ರಪತಿ ರಾಜೀನಾಮೆ ವಿವರ ಗೊತ್ತಿಲ್ಲ: ಮಲ್ಲಿಕಾರ್ಜುನ ಖರ್ಗೆ


ಸಪ್ತಸಾಗರ ವಾರ್ತೆ ವಿಜಯಪುರ, ಜು.27
ಉಪರಾಷ್ಟ್ರಪತಿ ಜಗದೀಪ ಧನಕರ್ ಅವರ ರಾಜೀನಾಮೆ ವಿಚಾರ ನನಗೆ ಗೊತ್ತಿಲ್ಲ. ವಿವರವನ್ನು ಅವರಿಗೆ ಕೇಳಿ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಧನಕರ್ ಅವರು ಯಾವಾಗಲೂ ಸರ್ಕಾರದ ಪರವಾಗಿಯೇ ಇರುತ್ತಿದ್ದರು. ರಾಜೀನಾಮೆ ನೀಡಿರುವ ಕಾರಣವನ್ನು ಅವರೇ ಹೇಳಬೇಕು ಎಂದರು.
ರೈತರ ಸಮಸ್ಯೆಗಾಳಾಗಲಿ, ಬಡವರ ಸಮಸ್ಯೆಗಳಾಗಲಿ, ಅಂತರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಮಾತನಾಡಲು ನಮಗೆ ಅವರು ಅವಕಾಶ ನೀಡುತ್ತಿರಲಿಲ್ಲ.
ಲೋಕಸಭೆಯಲ್ಲಿ ಬಡವರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದರೆ ಅದಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಹಿಂದೂ ಮುಸ್ಲಿಂ ಗಲಾಟೆ ಬಗ್ಗೆ ಮಾತನಾಡಿದರೂ ಅವರು ನಮಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,
ಈ ಬಗ್ಗೆ ಈಗ ಏನನ್ನು ಹೇಳಲ್ಲ. ನಂತರ ತಿಳಿಸುವೆ ಎಂದು ನುಡಿದರು.

Share