ಸಪ್ತಸಾಗರ ವಾರ್ತೆ, ವಿಜಯಪುರ, ಆ. 13: ನಗರದ ಗಾಂಧಿ ಚೌಕ್ ನಲ್ಲಿರುವ ಶಿಕ್ಷಣ ಇಲಾಖೆಯ ಮಹಿಳಾ ಶಾಲಾ ಕಾಲೇಜು ಕ್ಯಾಂಪಸ್ ನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಮೂಲಭೂತ ಸೌಕರ್ಯ ಮತ್ತು ನೂತನ ಕಟ್ಟಡ ಮಂಜೂರು ಮಾಡಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಅಕ್ಷಯಕುಮಾರ ಅಜಮನಿ ಅವರು ಮಾತನಾಡಿ, ಗಾಂಧಿ ಚೌಕ್ ಕ್ಯಾಂಪಸ್ ನಲ್ಲಿ ಇರುವ ಮಹಿಳಾ ಶಾಲಾ ಕಾಲೇಜು ಐತಿಹಾಸಿಕ ಹಿನ್ನಲೆವುಳ್ಳದ್ದಾಗಿದೆ. ಬ್ರಿಟಿಷರ ಕಾಲದಿಂದಲ್ಲಿ ಪ್ರಾರಂಭವಾದ ಈ ಕಾಲೇಜು ಇದು ಮಹಿಳೆಯರಿಗಾಗಿಯೇ ಇರುವುದು ವಿಶೇಷ. ಇಲ್ಲಿ ಒಂದನೇ ತರಗತಿ ಯಿಂದ ಹಿಡಿದು ಪದವಿ ವಿದ್ಯಾರ್ಥಿಗಳ ವರೆಗೂ ಕಲಿತಕ್ಕಂತ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಆದರೆ ಈ ಕ್ಯಾಂಪಸ್ ದುರ್ದೈವ ಏನೆಂದರೆ ಹಳೆ ಕಾಲದ ಕಟ್ಟಡಗಳೆ ಇನ್ನು ಇವೆ..ಬೇರೆ ಬೇರೆ ಹಳ್ಳಿಗಳಿಂದ ಓದಲು ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಬರುತ್ತಿದ್ದಾರೆ ಎಂದರು.
ಕಲಿಯಲು ಬರುವ ವಿದ್ಯಾರ್ಥಿಗಳಿಗನುಗುಣವಾಗಿ ಕಟ್ಟಡಗಳು, ಕೋಣಿಗಳು, ಗ್ರಂಥಾಲಯ, ಮಹಿಳಾ ವಿಶೇಷ ಕೊಣೆಗಳು, ಗಣಕಯಂತ್ರದ ಕೊಠಡಿಗಳು, ವಿವಿಧ ತರಬೇತಿಗಳ ವ್ಯವಸ್ಥೆಗಳನ್ನು ಇಲ್ಲಿಯವರೆಗೆ ನೀಡದೆ ಇರುವುದು ವಿಪರ್ಯಾಸ. ಇಲ್ಲಿ ಜನಪ್ರತಿನಿದಿಗಳು ನಿಷ್ಕಾಳಜಿ ತೋರಿರುವುದು ಅರ್ಥವಾಗುತ್ತಿಲ್ಲ ಎಂದರು.
ಸ್ವತಂತ್ರ ಸಿಕ್ಕು ಇಂದಿಗೆ 76 ವರ್ಷಗಳು ಕಳೆದಿವೆ. ಆದರೂ ಒಂದು ಕ್ಯಾಂಪಸ್ ಅಭಿವೃದ್ಧಿ ಮಾಡಲು ಇಲ್ಲಿಯ ಜನ ಪ್ರತಿನಿಧಿಗಳಿಗೆ ಆಗುತ್ತಿಲ್ಲ ಎನ್ನುವುದನ್ನು ನೋಡಿದರೆ ವಿದ್ಯಾರ್ಥಿಗಳ ಮೇಲಿರುವ ನಿಷ್ಕಾಳಜಿ ಎದ್ದು ಕಾಣುತ್ತದೆ ಎಂದು ಹೇಳಿದರು.
ವಿದ್ಯಾರ್ಥಿನಿಯರ ಅಭಿವೃದ್ಧಿಯ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜವಾಬ್ದಾರಿ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಹೋರಾಟ ಮಾಡಲು ಕರೆ ಕೊಡುತ್ತೇಂದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂದೇಶ ಕುರಿ, ಯಮನೂರಿ ಮಾದರ, ಯಾಶೀನ್ ಇನಾಮದಾರ, ವೀರೇಶ ಕೊಪ್ಪಳ, ಪ್ರತಾಪ, ಸೌಮ್ಯ, ವಿಜಯಲಷ್ಕ್ಮಿ ಮುಂತಾದ ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.
ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಮೂಲಭೂತ ಸೌಕರ್ಯ, ನೂತನ ಕಟ್ಟಡ ಮಂಜೂರಿಗೆ ಆಗ್ರಹಿಸಿ ಡಿ.ವಿ.ಪಿ ಮನವಿ
