ಸ್ಕೇಟಿಂಗ್ ಸ್ಪರ್ಧೆಯಲ್ಲಿ ಬಿಎಲ್ ಡಿಇ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 17: ಬಿ.ಎಲ್.ಡಿ.ಇ ಸಂಸ್ಥೆಯ ಜಮಖಂಡಿಯಲ್ಲಿರುವ ಬಿ.ಎಲ್.ಡಿ.ಇ ಸ್ಪೋರ್ಟ್ ಅಕಾಡೆಮಿಯ ವಿದ್ಯಾರ್ಥಿಗಳು 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ 79 ನಿಮಿಷಗಳ ಸತತ ಸ್ಕೇಟಿಂಗ್ ನಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಯುನೈಟೆಟ್ ಸ್ಟೇಟ್ ಆಫ್ ಅಮೇರಿಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಜೀನಿಯಸ್ ಇಂಡಿಯನ್ ಬುಕ್ ಆಫ್ ವರ್ಡ್ಲ್ ರೆಕಾರ್ಡ್ಸ್ ಮತ್ತು ಯು. ಎನ್. ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಜಂಟಿಯಾಗಿ ಶುಕ್ರವಾರ ದೇಶಾದ್ಯಂತ ಜಿಲ್ಲಾ ಕೇಂದ್ರದಲ್ಲಿ ಸ್ಕೇಟಿಂಗ್ ಆಯೋಜಿಸಿತ್ತು. ಬಾಗಲಕೋಟೆ ಜಿಲ್ಲೆಯ ಕಾರ್ಯಕ್ರಮದ ಜಮಖಂಡಿಯಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿ.ಎಲ್.ಡಿ.ಇ ಸ್ಪೋರ್ಟ್ ಅಕ್ಯಾಡೆಮಿಯ ಸಂಚಾಲಕ ಮತ್ತು ಸ್ಕೇಟಿಗ್ ಹಾಗೂ ವ್ಹಾಲಿಬಾಲ್ ತರಬೇತುದಾರ ಸಂಜಯ ಮನ್ನಿಕೇರಿ ಅವರ ಮಾರ್ಗದರ್ಶನದಲ್ಲಿ 27 ಜನ ವಿದ್ಯಾರ್ಥಿಗಳು ಭಾಗವಹಿಸಿ ಸತತ 79 ನಿಮಿಷ ಸ್ಕೇಟಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಜಮಖಂಡಿ ಬಿ.ಎಲ್.ಡಿ.ಇ ಸಿ.ಬಿ.ಎಸ್.ಇ ಶಾಲೆ ಸೇರಿದಂತೆ ನಾನಾ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ, ಇದಕ್ಕೂ ಮುಂಚೆ ಈ ಕ್ರೀಡಾಪಟುಗಳು ಮೂರು ತಿಂಗಳು ತರಬೇತಿ ಪಡೆದಿದ್ದರು. ಶುಕ್ರವಾರ ಸಂಜೆ 5 ಗಂಟೆಗೆ ಪ್ರಾರಂಭವಾದ ಈ ಸ್ಕೇಟಿಂಗ್ ಸಂಜೆ 6 ಗಂಟೆ 19 ನಿಮಿಷಕ್ಕೆ ಮುಕ್ತಾಯವಾಯಿತು.
ಈ ವಿಶೇಷ ಸ್ಕೇಟಿಂಗ್ ನಲ್ಲಿ ಪಾಲ್ಗೋಂಡು ಹೆಮ್ಮೆ ತಂದಿರುವ ವಿದ್ಯಾರ್ಥಿಗಳು ಮತ್ತು ತರಬೇತುದಾರ ಸಂಜಯ ಮನ್ನಿಕೇರಿ ಅವರ ಸಾಧನೆಯಲ್ಲಿ ಬಿ.ಎಲ್.ಡಿ.ಇ ಜಮಖಂಡಿ ಆವರಣದ ಆಡಳಿತಾಧಿಕಾರಿ ಎಸ್. ಎಚ್. ಲಗಳಿ, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಜಿ. ಎಂ. ವೀರಭದ್ರಪ್ಪ, ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಶಿವಕುಮಾರ, ಬಿ. ಎಡ್. ಕಾಲೇಜಿನ ಪ್ರಾಚಾರ್ಯ ಹುಸೇನ ಮಿಯಾ, ಡಿಗ್ರಿ ಕಾಲೇಜಿನ ಪ್ರಾಚಾರ್ಯ ಪಿ. ಡಿ. ಪೋಳ, ಪಿಯು ಕಾಜೇಜಿನ ಪ್ರಾಚಾರ್ಯರಾದ ಎಂ. ಎಂ. ಪುಟ್ಟಣ್ಣನವರ, ಬಿ. ಐ. ಕರಳಟ್ಟಿ ಅವರು ಸನ್ಮಾನಿಸಿ ಅಭಿನಂದಿಸಿದರು.
ಸ್ಪೋರ್ಟ್ಸ್ ಅಕಾಡೆಮಿ ವಿದ್ಯಾರ್ಥಿಗಳ ಈ ಸಾಧನೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಮತ್ತು ಸಚಿವ ಎಂ. ಬಿ. ಪಾಟೀಲ, ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಸಂತಸ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳು ಮತ್ತು ತರಬೇತುದಾರರನ್ನು ಅಭಿನಂದಿಸಿದ್ದಾರೆ.

Share