ಎ. ಎಸ್.ಐ ಹಾದಿಮನಿಯವರಿಗೆ ಬೀಳ್ಕೊಡುಗೆ

ಸಪ್ತಸಾಗರ ವಾರ್ತೆ,ವಿಜಯಪುರ, ಜೂ. 5:

ಸೇವಾ ನಿವೃತ್ತಿ ಹೊಂದಿದ ಗೋಳ ಗುಮ್ಮಜ್ ಪೊಲೀಸ್ ಠಾಣೆಯ ಎಎಸ್ಐ ಎಂ. ಎ. ಹಾದಿಮನಿ ಅವರಿಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಠಾಣೆಯ ಮೇಲ್ಚಾವಣಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಹಾದಿಮನಿ ಅವರಿಗೆ ಶಾಲು, ಹೂವಿನ ಹಾರ ಹಾಗೂ ಫಲಪುಷ್ಪ ನೀಡಿ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಅನೇಕರು ಈ ಸಮಾರಂಭದಲ್ಲಿ ಹಾದಿಮನಿ ಅವರ ಪ್ರಾಮಾಣಿಕತೆ ದಕ್ಷತೆ ಹಾಗೂ ಸೇವಾ ನಿಷ್ಠೆಯನ್ನು ಪ್ರಶಂಶಿಸಿ ಮಾತನಾಡಿದರು.
ಗೋಳ ಗುಮ್ಮಜ್ ಪೊಲೀಸ್ ಠಾಣೆಯ ಸಿಪಿಐ ಸಂಜೀವ್ ಕುಮಾರ್ ಬಳೆಗಾರ, ಪಿಎಸ್ಐಗಳಾದ ಮಹ್ಮದ ಘೋರಿ, ಹಸೀನಾ ವಾಲಿಕಾರ, ಎಎಸ್ಐ ಎಸ್.ಆರ್. ಹಂಗರಗಿ, ಸಿಬ್ಬಂದಿಗಳಾದ ರಾಜು ಬೂದಿಹಾಳ, ಎನ್. ಯು. ರಾಠೋಡ, ಬಂದು ನಿಡೋಣಿ ಮತ್ತಿತರರು ಹಾಜರಿದ್ದು ಹಾದಿಮನಿಯವರಿಗೆ ಅಭಿನಂದಿಸಿದರು.

Share this