ಸಪ್ತ ಸಾಗರ ವಾರ್ತೆ, ವಿಜಯಪುರ, ಜು. 22:
ಸಾಲಬಾಧೆಯಿಂದ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಬಲೇಶ್ವರ ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ನಡೆದಿದೆ.
ಶಿವಾಜಿ ಘೋಲಫ (56) ನೇಣಿಗೆ ಶರಣಾದ ರೈತ.
ಕೆಬಿಜಿ ಬ್ಯಾಂಕ್ ನಲ್ಲಿ 3 ಲಕ್ಷ ಸಾಲ,
ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿಯೂ ಸಾಲ ಮಾಡಿದ್ದ. ಖಾಸಗಿಯವರ ಕಡೆಗೂ ರೈತ ಶಿವಾಜಿ ಸಾಲ ಮಾಡಿದ್ದ.
ರೈತ ಶಿವಾಜಿ ತನ್ನ ಜಮೀನಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರ್ಜುಣಗಿಯಲ್ಲಿ ರೈತ ಆತ್ಮಹತ್ಯೆ
