ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ರೈತರ ಆಗ್ರಹ

ಸಪ್ತಸಾಗರ ವಾರ್ತೆ,ವಿಜಯಪುರ, ಮಾ. 1 :
ತಾಲೂಕಿನ ಬೊಮ್ಮನಹಳ್ಳಿ, ಗುಣಕಿ, ಮಿಂಚನಾಳ, ಡೋಮನಾಳ, ಕನ್ನಾಳ ಗ್ರಾಮದಲ್ಲಿ ವಿದ್ಯುತ್ ಕಣ್ಣುಮುಚ್ಚಾಲೆಯಿಂದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದು ಸಾಕಾಗಿದೆ ೨ ವರ್ಷಗಳ ಹಿಂದೆ ಕನ್ನೂರಿನಲ್ಲಿ ಉದ್ಘಾಟನೆ ಆಗಬೇಕಿರುವ ೧೧೦ ಕೆ.ವಿ ಕೆ.ಇ.ಬಿ ಇನ್ನು ಉದ್ಘಾಟನೆ ಮಾಡದೇ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷö್ಯದಿಂದ ಈ ಬಾಗದ ಸಾರ್ಚಜನಿಕರಿಗೆ, ರೈತರಿಗೆ , ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ.
ಕನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ವಿಜಯಪುರದ ಗ್ರಾಮೀಣವಲಯದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿ ಶೀಘ್ರದಲ್ಲಿ ಕನ್ನೂರಿನಲ್ಲಿಯ ಹೊಸ ಕೆ.ಇ.ಬಿ ಉದ್ಘಾಟನೆ ಮಾಡಿ ರೈತರ ಜಮೀನುಗಳಿಗೆ 7 ಘಂಟೆ ತ್ರೀಫೇಸ್ ವಿದ್ಯುತ್ ಮತ್ತು ತೋಟದ ಮನೆಗಳಿಗೆ ರಾತ್ರಿ ಸಿಂಗಲ್ ಫೇಸ್ ವಿದ್ಯುತ್ ವಿತರಣೆ ಮಾಡಬೇಕು. ಈಗ ಪರೀಕ್ಷೆ ಸಮಯವಿರುವುದರಿಂದ ವಿದ್ಯುತ್ ವಿತರಣೆಯಲ್ಲಿ ಚೆಲ್ಲಾಟ ಮಾಡಬಾರದು ಎಂದು ಆಗ್ರಹಿಸಲಾಯಿತು.
ಕೂಡಲೇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕನ್ನೂರಿನಲ್ಲಿ ಕೆ.ಇ.ಬಿ ಉದ್ಘಾಟನೆ ಮಾಡಬೇಕು. ಇಲ್ಲವಾದಲ್ಲಿ ಮಾರ್ಚ್ 5 ರಂದು ಸುತ್ತಮುತ್ತಲಿನ ನೂರಾರು ರೈತರೊಂದಿಗೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಮನವಿ ಸಲ್ಲಿಸಿ ಎಚ್ಚರಿಕೆ ನೀಡಲಾಯಿತು.
ಈ ವೇಳೆ ವಿಜಯಪುರ ತಾಲೂಕಾ ಉಪಾರ್ಧಯಕ್ಷ ಸತೀಶ ದಾಶ್ಯಾಳ, ಮಾಂತಗೌಡ ಬಿರಾದಾರ, ರಾಮನಗೌಡ ಬಿರಾದಾರ, ವೀರೇಶ ಮುರಗುಂಡಿ, ಶ್ರೀನಾಥ ದಾಶ್ಯಾಳ, ಕಾಂತು ಗಾಡವೆ, ಸಿದ್ದರಾಮ ದಾಶ್ಯಾಳ, ಅಶೋಕಗೌಡ ಬಿರಾದಾರ, ಗುರಣ್ಣಗೌಡ ಪಾಟೀಲ, ಗಿರಿಮಲ್ಲ ಕೋನಳ್ಳಿ, ಯಶವಂತ ಬಡಿಗೇರ, ಗುರುಶಾಂತ ಬಬಲೇಶ್ವರ, ದಯವಂತರಾಯ ರೇವಶೆಟ್ಟಿ ಸೇರಿದಂತೆ ಇತರರು ಇದ್ದರು.

Share this