ಸಪ್ತಸಾಗರ ವಾರ್ತೆ ವಿಜಯಪುರ, ಸೆ. 29: ಇಸ್ಕಾನ್ ವಿಜಯಪುರ ತಂಡದಿಂದ ಅಕ್ಟೊಬರ್ 1 ರಂದು ನಗರದ ಕಿತ್ತೂರು ರಾಣಿ ಚೆನ್ನಮ್ಮ ಸಭಾಭವನದಲ್ಲಿ ಸಾಯಂಕಾಲ 5:30ಕ್ಕೆ ದಸರಾ ಉತ್ಸವ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಇಸ್ಕಾನ್ ಹುಬ್ಬಳ್ಳಿ ಧಾರವಾಡ ಇವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದೆ.
ಶ್ರೀ ರಾಮ ದೇವರ ಅಭಿಷೇಕ, ಭಕ್ತರಿಂದ ಹರಿನಾಮ ಸಂಕೀರ್ತನೆ, ಪಲ್ಲಕಿ ಉತ್ಸವ, ಭರತನಾಟ್ಯ, ಮಕ್ಕಳಿಂದ ವಿವಿಧ ವೇಷಭೂಷಣ ಸ್ಪರ್ಧೆ ನಂತರದಲ್ಲಿ ಪ್ರಪ್ರಥಮವಾಗಿ ವಿಜಯಪುರದಲ್ಲಿ 35 ಅಡಿ ರಾವಣ ದಹನ ಕಾರ್ಯಕ್ರಮ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಮೊ.
9036329108 / 9743231256 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ವಿಜಯಪುರದಲ್ಲಿ ಪ್ರಪ್ರಥಮ ಬಾರಿಗೆ ರಾವಣ ದಹನ ಕಾರ್ಯಕ್ರಮ


