ಸಪ್ತಸಾಗರ ವಾರ್ತೆ, ವಿಜಯಪುರ, ಆ. 14:
ಸರಕಾರಿ ಶಾಲೆಗಳು ಬೆಳೆಯಬೇಕು ಅಂದಾಗ ಮಾತ್ರ ಬಡ ಮಕ್ಕಳು ಬೆಳೆದು ಸಾಧನೆ ಮಾಡಲು ಸಾಧ್ಯ ಎಂದು ಡಾ.ಎಲ್.ಎಚ್ ಬಿದರಿ ಹೇಳಿದರು.
ನಗರದ ಸರಕಾರಿ ಗಂಡು ಮಕ್ಕಳ ಶಾಲೆ ನಂ ೫ ರಲ್ಲಿ ಎಚ್.ಟಿ.ಬಿದರಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಶಾಲೆಯ ಮಕ್ಕಳಿಗೆ ಕಂಪ್ಯೂಟರ್ ಹಾಗೂ ಟೆಬಲ್‌ಗಳ ದೇಣಿಗೆ ಹಾಗೂ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು.
ಇದು ನಾನು ಕಲಿತ ಶಾಲೆ ನನ್ನ ಶಾಲೆ ಮೇಲೆ ನನಗೆ ಹಮ್ಮೆ ಇದೆ. ಅದಕ್ಕಾಗಿ ನಾನು ನಮ್ಮ ಎಚ್.ಟಿ.ಬಿದರಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಈ ಶಾಲೆಯನ್ನು ದತ್ತು ಪಡೆದುಕೊಂಡು ಈ ಶಾಲೆಯ ಸಂಪೂರ್ಣ ಅಭಿವೃದ್ಧಿಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೇನೆ. ಇಲ್ಲಿಯ ಮಕ್ಕಳು ಚೆನ್ನಾಗಿ ಕಲಿಯಬೇಕು. ಆ ಕಾರಣಕ್ಕಾಗಿ ಟ್ರಸ್ಟ್ ವತಿಯಿಂದ ಶಿಕ್ಷಕರ ನೇಮಕಾತಿ ಮಾಡಿ ಉಚಿತ ಸ್ಪರ್ಧಾತ್ಮಕ ಪರಿಕ್ಷೆಗಳ ತರಬೇತಿ, ಉಚಿತ ಕಂಪ್ಯೂರ‍್ಸ್ ಮತ್ತು ಕಂಪ್ಯೂಟರ್ ಹೇಳಲು ಶಿಕ್ಷಕರನ್ನು ಸಹ ನೇಮಿಸಲಾಗಿದೆ. ಅಷ್ಟೇ ಅಲ್ಲದೆ ನಮ್ಮ ಡಾ. ಬಿದರಿಯವರ ಅಶ್ವಿನಿ ಆಸ್ಪತ್ರೆಯಿಂದ ಈ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಸಹ ನೀಡಲಾಗುತ್ತಿದೆ. ಇಷ್ಟೆಲ್ಲಾ ನಾವು ಮಾಡುತ್ತಿರುವುದು ಈ ಶಾಲೆಯಲ್ಲಿ ಮಕ್ಕಳಿಗೆ ಎಲ್ಲ ಸೌಕರ್ಯಗಳು ಸಿಗಬೇಕು. ಶಾಲಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಬೇಕು ಎಂಬ ಅಭಿಲಾಷೆಯಿಂದ ಮಾಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಸೌಕರ್ಯಗಳನ್ನು ಶಾಲೆಗೆ ನಮ್ಮ ಟ್ರಸ್ಟ್ ಮೂಲಕ ಒದಗಿಸಲಾಗುವುದು. ಎಲ್ಲ ಪಾಲಕರು ಇದರ ಸದುಪಯೋಗ ಪಡೆದುಕೊಂಡು ತಮ್ಮ ಮಕ್ಕಳಿಗೆ ಈ ಶಾಲೆಯಲ್ಲಿಯೇ ಪ್ರವೇಶಾತಿ ಕೊಡಿಸಬೇಕು. ಈ ನಿಟ್ಟಿನಲ್ಲಿ ಖಾಸಗಿ ಶಾಲೆಗೂ ಮೀರುವ ಸೌಕರ್ಯಗಳನ್ನು ನಾವು ಇಲ್ಲಿ ನೀಡುತ್ತಿದ್ದೇವೆ. ಇದರ ಪ್ರಯೋಜನ ಮಕ್ಕಳಿಗೆ ಆಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯ ರಾಜು ಮಗಿಮಠ, ಶಾಲಾ ಮುಖ್ಯ ಗುರುಗಳಾದ ಬಸವರಾಜ ಚಲವಾದಿ, ದೈಹಿಕ ಶಿಕ್ಷಕ ಬೇನೂರ, ಹಾಗೂ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಾಲಾ ಮಕ್ಕಳಿಗೆ ಉಚಿತ ಕಂಪ್ಯೂಟರ್ ವಿತರಣೆ
