ಉಚಿತ ಆರೋಗ್ಯ ಶಿಬಿರ ಯಶಸ್ವಿ

ಸಪ್ತಸಾಗರ ವಾರ್ತೆ, ವಿಜಯಪುರ, ಆ. 4: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ (ರಿ) ಜಿಲ್ಲಾ ಯುವ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಯಶಸ್ವಿಯಾಯಿತು.
ಈ ಶಿಬಿರದಲ್ಲಿ ಕಣ್ಣು, ಕ್ಯಾನ್ಸರ್, ಬಿಪಿ, ಶುಗರ್, ಸಾಮಾನ್ಯ ಚಿಕಿತ್ಸೆ ಹಾಗೂ ಕಿವಿ ,ಮೂಗು, ಗಂಟಲು, ವಿವಿಧ ತಜ್ಞವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು.
130 ಜನರ ಕಣ್ಣಿನ ತಪಾಸಣೆ ನಡೆಸಲಾಯಿತು. ಈ ರೋಗಿಗಳ ಪೈಕಿ 14 ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡುವುದಾಗಿ ಘೋಷಿಸಲಾಯಿತು.
120 ಮಂದಿ ಬಿಪಿ, ಶುಗರ್, ಕ್ಯಾನ್ಸರ್, ಕಿವಿ, ಮೂಗು, ಗಂಟಲು ಇನ್ನಿತರ ಸಾಮಾನ್ಯ ರೋಗಿಗಳನ್ನು ತಪಾಸಣೆ ನಡೆಸಿ ಸೂಕ್ತ ಆರೋಗ್ಯ ಸಲಹೆ ನೀಡಲಾಯಿತು.

Share