ಹೈಪೋಥೈರಾಯ್ಡಿಸಮ್ ಕುರಿತು ಉಚಿತ ತಪಾಸಣೆ ಮತ್ತು ಆಯುರ್ವೇದ ಹಾಗೂ ಯೋಗ ಚಿಕಿತ್ಸೆ ಶಿಬಿರ

ಸಪ್ತಸಾಗರ ವಾರ್ತೆ, ವಿಜಯಪುರ, ಫೆ. 18:
ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ‌ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದಲ್ಲಿ‌ ಫೆಬ್ರುವರಿ 23ರಿಂದ ಮಾರ್ಚ 7ರ ವರೆಗೆ 15 ದಿನಗಳ ಕಾಲ ಹೈಪೋಥೈರಾಯ್ಡಿಸಮ್ ಕುರಿತು ಉಚಿತ ತಪಾಸಣೆ ಮತ್ತು ಆಯುರ್ವೇದ ಹಾಗೂ ಯೋಗ ಚಿಕಿತ್ಸೆ ಶಿಬಿರ ನಡೆಯಲಿದೆ.
ಹೈಪೋಥೈರಾಯ್ಡಿಸಮ್ ಎಂದು ದೃಢ ಪಟ್ಟಿರುವ ಮತ್ತು ತೂಕ ಹೆಚ್ಚಾಗುವುದು, ಕೂದಲು ಉದುರುವುದು, ಚರ್ಮ ಒಣಗುವುದು, ಸದಾ ದಣಿವು, ಚಳಿ ಹೆಚ್ಚು ಅನಿಸುವುದು, ಮಲ ಬದ್ಧತೆ, ಖಿನ್ನತೆ, ಹಾಗೂ ಮಹಿಳೆಯರ ಮಾಸಿಕ ಅಸಮತೋಲನ ಈ ಲಕ್ಷಣಗಳನ್ನು ಹೊಂದಿರುವವರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೊಂದಾಯಿಸಲು ಕಾಲೇಜಿನ ವೈದ್ಯರಾದ ಡಾ. ಭುವನೇಶ್ವರಿ ಪಾಟೀಲ ಅವರನ್ನು ಸಂಪರ್ಕಿಸಬೇಕು ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಆಯುರ್ವೇದ ಮಹಾವಿದ್ಯಾಲಯದ ಹೈಟೆಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.‌ ಸಂಜಯ ಕಡ್ಲಿಮಟ್ಟಿ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ‌ ಮೊಬೈಲ್ ಸಂಖ್ಯೆ: 8123595928 ಮತ್ತು 9739781811 ಸಂಪರ್ಕಿಸಬಹುದಾಗಿದೆ.

Share this