ಸಪ್ತಸಾಗರ ವಾರ್ತೆ, ವಿಜಯಪುರ,ಜು.೯: ಬಿ. ಎಲ್. ಡಿ. ಇ ಸಂಸ್ಥೆಯ ಎ. ವಿ. ಎಸ್ ಆಯುರ್ವೇದ ಮಹಾವಿದ್ಯಾಲಯದ ವಿಶ್ವಚರ್ಮ ಆರೋಗ್ಯ ದಿನದ ಅಂಗವಾಗಿ ಜುಲೈ ೧೧ ಮತ್ತು ೧೨ರಂದು ನಾನಾ ರೀತಿಯ ಚರ್ಮ ರೋಗಗಳ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿದೆ.
ಎರಡು ದಿನಗಳ ಈ ಶಿಬಿರದಲ್ಲಿ ಚರ್ಮರೋಗದ ಲಕ್ಷಣಗಳಾದ ಮೊಡವೆ, ಭಂಗು, ಇಸುಬು, ಗಜಕರ್ಣ ಮುಂತಾದ ದೀರ್ಘ ಕಾಲಿನ ಸಮಸ್ಯೆಗಳ ಉಚಿತ ತಪಾಸಣೆ ನಡೆಯಲಿದೆ. ಚರ್ಮರೋಗದ ಸಮಸ್ಯೆ ಇರುವವರು ಈ ಉಚಿತ ತಪಾಸಣೆ ಶಿಬಿರದ ಪ್ರಯೋಜನ ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೯೩೪೩೮೭೭೬೭೦ ಮತ್ತು ೯೫೧೩೩೯೭೪೧೩ ಸಂಪರ್ಕಿಸುವತೆ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
Editor
Rudrappa B Asangi
Editor
Managing Editor
Chetan Asangi
Managing Editor