ಜು. 28ರಂದು ಹುಚ್ಚು ನಾಯಿ ರೋಗ ನಿರೋಧಕ ಉಚಿತ ಲಸಿಕೆ ಕಾರ್ಯಕ್ರಮ

Bಸಪ್ತಸಾಗರ ವಾರ್ತೆ, ವಿಜಯಪುರ, ಜು. 23:
ಹುಚ್ಚು ನಾಯಿ ರೋಗ ನಿರೋಧಕ ಉಚಿತ ಲಸಿಕಾ ಕಾರ್ಯಕ್ರಮ ಜು. 28ರಂದು ನಗರದ ರಾಘವೇಂದ್ರ ಕಾಲೋನಿ ಯಲ್ಲಿರುವ ಶ್ರೀರಕ್ಷಾ ಮುದ್ದು ಪ್ರಾಣಿಗಳ ಚಿಕಿತ್ಸಾ ಹಾಗೂ ಸಲಹಾ ಕೇಂದ್ರದಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ನಡೆಯಲಿದೆ.
ರೋಟರಿ ಸಂಸ್ಥೆ ವಿಜಯಪುರ ಉತ್ತರ ಹಾಗೂ ಶ್ರೀ ರಕ್ಷಾ ಮುದ್ದು ನಾಯಿಗಳ ಚಿಕಿತ್ಸಾ ಕೇಂದ್ರ ಇವರ ಸಹಯೋಗದಲ್ಲಿ ನಾಯಿಗಳಿಗೆ ಮಾರಕವಾದ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರಣ ಎಲ್ಲ ಮುದ್ದು ನಾಯಿ ಮಾಲೀಕರು ತಮ್ಮ ಸಾಕಿದ ನಾಯಿಗಳಿಗೆ ಲಸಿಕೆ ಹಾಕಿಸಿಕೊಂಡು ಮಾರಕ ರೋಗದಿಂದ ತಮ್ಮ ಮುದ್ದು ನಾಯಿಗಳನ್ನು ರಕ್ಷಿಸಿಕೊಳ್ಳಬೇಕೆಂದು ಕೋರಲಾಗಿದೆ. ಹೆಚ್ಚಿನ ವಿವರಗಳಿಗೆ ರೋ. ಸಂತೋಷ ಔರಸಂಗ, ರೋ. ಅವಿನಾಶ ಭಾಹೇತಿ ಮತ್ತು ಡಾ. ಪ್ರಾಣೇಶ ಜಹಗಿರದಾರ ಮೊ:6362746378 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

Share