ಸಪ್ತಸಾಗರ ವಾರ್ತೆ, ವಿಜಯಪುರ, ಆ.3: ಭಾರತದಲ್ಲಿ ಸ್ನೇಹಿತರ ದಿನಾಚರಣೆಯನ್ನು ಆಗಸ್ಟ್ ತಿಂಗಳ ಮೊದಲ ಭಾನುವಾರದೆಂದು ಆಚರಿಸಲಾಗುತ್ತದೆ, ಸ್ನೇಹ ಎಂಬುದು ಪದಗಳಿಗೆ ನಿಲುಕದೆ ಇರುವ ಸಂಬಂಧ, ನಂಬಿಕೆ ಮತ್ತು ವಿಶ್ವಾಸದ ಪ್ರತಿಕವೇ ಸ್ನೇಹ, ಜೀವಕ್ಕೆ ಜೀವ ಕೊಡುವ ಸ್ನೇಹ ಆದರ್ಶವಾದದ್ದು, ನಂಬಿದವರಿಗೆ ಮೋಸ ಮಾಡುವುದು ದ್ರೋಹ ಬಗೆಯುವವನು ಎಂದಿಗೂ ಸ್ನೇಹಿತನಾಗಲಾರ ಅವನು ಮಿತ್ರದ್ರೋಹಿ, ಅಂತ ಸ್ನೇಹ ನಮ್ಮದಾಗಬಾರದು. ಕೃಷ್ಣ ಕುಚಲ, ರಾಮ -ಸುಗ್ರಿ, ಕರ್ಣ ದುರ್ಯೋಧನರ ಸ್ನೇಹದಂತ ಶ್ರೇಷ್ಠ ಗೆಳೆತನ ಇದ್ದರೆ ಗೆಳೆತನಕ್ಕೊಂದು ಬೆಲೆ ಎಂದು ಸಾಹಿತಿ, ಪ್ರೊ. ಎ.ಎಚ್. ಕೊಳಮಲಿ ಹೇಳಿದರು.
ಭಾನುವಾರ ನಗರದ ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಕನಕ ಪೂರ್ವ ಪ್ರಾಥಮಿಕ ಪಬ್ಲಿಕ್ ಶಾಲೆ ಹಾಗೂ ನವೋದಯ ಕೋಚಿಂಗ್ ಸೆಂಟರ್ ನಲ್ಲಿ ಸ್ನೇಹಿತರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಪ್ರಭು ಕೊಳಮಲಿ ಮಾತನಾಡಿ ಭಾರತ ದೇಶ ಸಂಸ್ಕಾರ ಸಂಸ್ಕೃತಿಯ ಬೀಡು ಗೆಳೆತನಕ್ಕೆ ಅಪಾರವಾದ ಶಕ್ತಿ ಇದೆ ಹೆಗಲಿಗೆ ಹೆಗಲು ಕೊಡುವ ಸ್ನೇಹಿತರು ನಿಜವಾದ ಸ್ನೇಹಿತರಂದು ಹೇಳಿದರು.
ನಿರ್ದೇಶಕ ರಾಮಸ್ವಾಮಿ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಲಾ ವಿದ್ಯಾರ್ಥಿಗಳು ಪರಸ್ಪರ ಸ್ನೇಹಿತರಿಗೆ ಸ್ನೇಹಿತರ ದಿನಾಚರಣೆಯ ದಾರವನ್ನು ಕಟ್ಟುವುದರ ಮೂಲಕ ಸಿಹಿ ಹಂಚಿ ವಿಶೇಷ ರೀತಿಯಿಂದ ಮಕ್ಕಳು ಸ್ನೇಹಿತನದ ಒಗ್ಗಟ್ಟನ್ನು ಪ್ರದರ್ಶಿಸಿ ಸ್ನೇಹಿತರ ದಿನಾಚರಣೆಯನ್ನು ಆಚರಿಸಿದರು.
ವಿದ್ಯಾರ್ಥಿ ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಕನಕ ಪಬ್ಲಿಕ್ ಶಾಲೆಯಲ್ಲಿ ಸ್ನೇಹಿತರ ದಿನಾಚರಣೆ


