ಸಪ್ತಸಾಗರ ವಾರ್ತೆ, ವಿಜಯಪುರ, ಆ. 16: ಜಿಲ್ಲೆಯಾದ್ಯಂತ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟವನ್ನು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಆಗಸ್ಟ್ 18 ರಿಂದ ಹಮ್ಮಿಕೊಳ್ಳಲಾಗಿದೆ.
ಆ.18ರಂದು ಸಿಂದಗಿ ತಾಲೂಕಾ ಕ್ರೀಡಾಕೂಟ ಸಿಂದಗಿ ತಾಲೂಕಾ ಕ್ರಿಡಾಂಗಣದಲ್ಲಿ, ಆಗಸ್ಟ್ 19ರಂದು ಮುದ್ದೇಬಿಹಾಳ ತಾಲೂಕಿನ ಕ್ರೀಡಾಕೂಟವನ್ನು ಮುದ್ದೇಬಿಹಾಳದ ಎಂಜಿವಿಸಿ ಕಾಲೇಜ್ ಮುದ್ದೇಬಿಹಾಳದಲ್ಲಿ ಹಾಗೂ ದೇವರ ಹಿಪ್ಪರಗಿಯ ಶ್ರೀ ಸಿದ್ಧೇಶ್ವರ ಪ್ರೌಢಶಾಲೆ ಮೈದಾನದಲ್ಲಿ, ಆಗಸ್ಟ್ 21ರಂದು ತಾಳಿಕೋಟೆ ತಾಲೂಕಿನ ಕ್ರೀಡಾಕೂಟವನ್ನು ಬ್ರಿಲಿಯಂಟ್ ಹೈಸ್ಕೂಲಿನಲ್ಲಿ ಹಾಗೂ ಆಲಮೇಲ ತಾಲೂಕಿನ ಕ್ರೀಡಾಕೂಟವನ್ನು ಸರಕಾರಿ ಹಿರಿಯ ಮಾದರಿ ಶಾಲೆಯ ಆವರಣದಲ್ಲಿ, ಆ.24ರಂದು ಬಬಲೇಶ್ವರ ತಾಲೂಕಿನ ಕ್ರೀಡಾಕೂಟವನ್ನು ಮಮದಾಪೂರದ ಕೆಪಿಎಸ್ಯಲ್ಲಿ, ಆ.25ರಂದು ಬಸವನ ಬಾಗೇವಾಡಿ ತಾಲೂಕಿನ ಎಸ್.ಬಿ.ಪಿ.ಯು ಕಾಲೇಜಿನ ಮೈದಾನದಲ್ಲಿ, ಆ.26ರಂದು ಇಂಡಿ ತಾಲೂಕಿನ ಕ್ರೀಡಾಕೂಟವನ್ನು ತಾಲೂಕು ಕ್ರೀಡಾಂಗಣದಲ್ಲಿ, ಆ.29ರಂದು ನಿಡಗುಂದಿ ತಾಲೂಕು ಕ್ರೀಡಾಕೂಟವನ್ನು ಎಂ.ಪಿಎಸ್ ಶಾಸಕರ ಮಾದರಿ ಶಾಲೆಯ ಆಲಮಟ್ಟಿಯಲ್ಲಿ, ಚಡಚಣ ತಾಲೂಕಿನ ಸಂಗಮೇಶ್ವರ ಪ್ರೌಢ ಶಾಲೆ ಚಡಚಣದಲ್ಲಿ, ವಿಜಯಪುರ ತಾಲೂಕಿನ ಕ್ರೀಡಾಕೂಟವನ್ನು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಾಗೂ ಆ.31ರಂದು ತಿಕೋಟಾ ತಾಲೂಕಿನ ಕ್ರೀಡಾಕೂಟವನ್ನು ಸೋಮದೇವರಹಟ್ಟಿಯಲ್ಲಿ, ಕೋಲಾರ ತಾಲೂಕಿನ ಕ್ರೀಡಾಕೂಟವನ್ನು ಸಂಗಮೇಶ್ವರ ಪ್ರಾಥಮಿಕ, ಪ್ರೌಢಶಾಲೆಯ ಮೈದಾನದಲ್ಲಿ, ಆಯೋಜಿಸಲಾಗಿದೆ.
ಮುದ್ದೇಬಿಹಾಳ ತಾಲೂಕಿಗೆ ಸಂಬಂಧಿಸಿದಂತೆ, ಸುರೇಶ ಆಲೂರ ಮೊ:8971806865, ತಾಳಿಕೋಟೆ ತಾಲೂಕಿಗೆ ಸುರೇಶ ಆಲೂರ ಮೊ:8971806852,ತಿಕೋಟಾ ತಾಲೂಕಿಗೆ ಎನ್.ಆರ್.ಚವ್ಹಾಣ ಮೊ:9480678097,ಬಬಲೇಶ್ವರ ತಾಲೂಕಿಗೆ ಎನ್.ಆರ್ ಚವ್ಹಾಣ ಮೊ:9480678097, ಇಂಡಿ ತಾಲೂಕಿಗೆ ಸಿ.ಎಸ್.ವಾಲೀಕಾರ ಮೊ:9880146219, ಬಸವನ ಬಾಗೇವಾಡಿ ತಾಲೂಕಿಗೆ ಎಸ್.ಎಸ್.ಅವಟಿ ಮೊ:9663297654, ಕೊಲ್ಹಾರ ತಾಲೂಕಿಗೆ ಎಸ್.ಎಸ್.ಅವಟಿ ಮೊ:9663297654, ನಿಡಗುಂದಿ ತಾಲೂಕಿಗೆ ಎಸ್.ಎಸ್.ಅವಟಿ ಮೊ:9663297654,ಚಡಚಣ ತಾಲೂಕಿಗೆ ಎಂ.ಬಿ.ಬಿರಾದಾರ ಮೊ: 9448580729,ವಿಜಯಪುರ ತಾಲೂಕಿಗೆ ಎಸ್.ಜೆ ಬಿರಾದಾರ ಮೊ:9901111538, ಸಿಂದಗಿ ತಾಲೂಕಿಗೆ ರಮೇಶ ಬಿರಾದಾರ ಮೊ:8105849347, ದೇವರ ಹಿಪ್ಪರಗಿ ತಾಲೂಕಿಗೆ ರಮೇಶ ಬಿರಾದಾರ ಮೊ:8105849347 ಹಾಗೂ ಆಲಮೇಲ ತಾಲೂಕಿಗೆ ರಮೇಶ ಬಿರಾದಾರ ಮೊ:8105849347 ಕ್ರೀಡಾಕೂಟದ ಸಂಯೋಜಕರನ್ನು ಸಂಪರ್ಕಿಸಬಹುದಾಗಿದೆ.
ಆ. 18ರಿಂದ ಜಿಲ್ಲೆಯಾದ್ಯಂತ ತಾಲೂಕಾ ಮಟ್ಟದ ಕ್ರೀಡಾಕೂಟ
