ಸಪ್ತ ಸಾಗರ ವಾರ್ತೆ ವಿಜಯಪುರ, ಅ. 2: ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲೆಯ ಪಕ್ಷದ ಕಾರ್ಯಾಲಯದಲ್ಲಿ ಜಗದ್ಗುರು ಮಧ್ವಾಚಾರ್ಯರ, ಮಹಾತ್ಮಾ ಗಾಂಧಿಜಿ ಹಾಗೂ ಲಾಲ ಬಹದ್ದೂರ ಶಾಸ್ತ್ರಿರವರ ಜಯಂತಿಯನ್ನು ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬೆಳಗಾವಿ ವಿಭಾಗ ಪ್ರಭಾರಿ ಚಂದ್ರಶೇಖರ ಕವಟಗಿ ಆವರು ಮಾತನಾಡಿ, ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ಜೀವನ, ಎದುರಾದ ಸವಾಲುಗಳು, ಅವರ ವ್ಯಕ್ತಿತ್ವದ ಬಗ್ಗೆ ವಿವರವಾಗಿ ಮಾತನಾಡಿದರು. ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ನಮಗೆ ಕಲಿಸಿಕೊಟ್ಟ ಪಾಠಗಳು ಹಲವು. ಸತ್ಯ, ಸರಳತೆ, ಪ್ರಾಮಾಣಿಕತೆ ಮತ್ತು ದೇಶಕ್ಕಾಗಿ ತ್ಯಾಗದ ಮಹತ್ವ. ಕೇವಲ ಐದೂವರೆ ಅಡಿ ಎತ್ತರದ ಈ ಪುಟ್ಟ ಮನುಷ್ಯ, ತನ್ನ ವ್ಯಕ್ತಿತ್ವ ಮತ್ತು ನಾಯಕತ್ವದಿಂದ ಹಿಮಾಲಯದಷ್ಟು ಎತ್ತರಕ್ಕೆ ಏರಿ ನಿಂತರು. ಅವರ ಆದರ್ಶಗಳನ್ನು ಅನುಸರಿಸುವ ಮೂಲಕ, ನಾವೆಲ್ಲರೂ ಒಂದು ಬಲಿಷ್ಠ, ಸ್ವಾಭಿಮಾನಿ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸುವಲ್ಲಿ ನಮ್ಮ ಪಾಲನ್ನು ನಿರ್ವಹಿಸೋಣ ಎಂದರು.
ಜಿಲ್ಲಾ ಕಾರ್ಯದರ್ಶಿ ಕೃಷ್ಣಾ ಗುನ್ನಾಳಕರ ಮಾತನಾಡಿ, ಜಗದ್ಗುರು ಮಧ್ವಾಚಾರ್ಯರ 787 ನೇ ಜಯಂತಿ ಆಚರಿಸಲಾಗುತ್ತಿದೆ. ದೈತ ವೇದಾಂತ ತತ್ವಶಾಸ್ತ್ರದ ಪ್ರಮುಖ ಪ್ರತಿಪಾದಕರು. ಹಿಂದೂ ಪಂಚಾಂಗದ ಪ್ರಕಾರ, ಇವರ ಜಯಂತಿಯನ್ನು ಸಾಮಾನ್ಯವಾಗಿ ಆಶ್ವಯುಜ ಶುಕ್ಲ ಪಕ್ಷದ ದಶಮಿ ತಿಥಿಯಂದು, ಅಂದರೆ ವಿಜಯದಶಮಿಯ ದಿನದಂದು ಆಚರಿಸಲಾಗುತ್ತದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ವಿ.ಪ ಸದಸ್ಯರಾದ ಅರುಣ ಶಹಾಪೂರ, ಉಮೇಶ ಕಾರಜೋಳ, ಭೀಮಾಶಂಕರ ಹದನೂರ, ಗೋಪಾಲ ಘಟಕಾಂಬಳೆ, ಸಂಜಯ ಪಾಟೀಲ ಕನಮಡಿ, ಉಮೇಶ ಕೋಳಕೂರ, ಮಳುಗೌಡ ಪಾಟೀಲ, ಈರಣ್ಣ ರಾವೂರ, ಶಿವರುದ್ರ ಬಾಗಲಕೋಟ, ವಿಜಯ ಜೋಶಿ, ಪಾಪುಸಿಂಗ್ ರಜಪೂತ, ಶರಣಬಸು ಕುಂಬಾರ, ಚಿನ್ನು ಚಿನಗುಂಡಿ, ವಿಜಯ ಹಿರೇಮಠ, ಮಲ್ಲು ಕಲಾದಗಿ ಹನಮಂತ ಭಜಂತ್ರಿ ಮತ್ತು ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬಿಜೆಪಿ ಕಚೇರಿಯಲ್ಲಿ ಗಾಂಧಿ, ಶಾಸ್ತ್ರಿ ಜಯಂತಿ


